ಒಟ್ಟು 5 ಕಡೆಗಳಲ್ಲಿ , 1 ಕವಿಗಳು , 5 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಉಪಮಿತ ಭೇದೋಕ್ತಿಕ್ರಮ ಮಪರಿಮಿತಾಖ್ಯಾಕೃತಿ ಪ್ರಯೋಗಾನುಗತಂ ನೃಪತುಂಗ ದೇವಮತದಿಂ ದುಪಮಾ ಭೇದಂಗಳಿಂದೆ ತಱಿಸಲ್ಗಱಿವಂ
--------------
ಶ್ರೀವಿಜಯ
ತಱಿಸಂದಾ ಸಕ್ಕದಮುಮ ನಱಿಯದೆ ಕನ್ನಡಮುಮಂ ಸಮಾಸೋಕ್ತಿಗಳೊಳ್ ಕುಱಿತು ಬೆರಸಿದೊಡೆ ವಿರಸಂ ಮಱುಗುವ ಪಾಲ್ಗಳೆಯ ಪನಿಗಳಂ ಬೆರಸಿದವೋಲ್
--------------
ಶ್ರೀವಿಜಯ
ತಱಿಸಂದು ಪಲವು ತೆಱದಿಂ ತೆಱಿದಿರೆ ನಿಗೞ್ದುರ್ದುದೊಂದು ವಸ್ತುಸ್ಥಿತಿಯಂ ಮಱಸಿ ಪೆಱತೊಂದು ಮಾಳ್ಕೆಯಿ ನಱಿಪುವುದುತ್ಪ್ರೇಕ್ಷೆಯೆಂಬುದಿಂತದಱ ತೆಱ೦
--------------
ಶ್ರೀವಿಜಯ
ತಱಿಸಂದು ಮನದೊಳೊಂದಂ ಪೆಱತಂ ಮತ್ತದನೆ ಪೋಲ್ವುದಂ ಕುಱಿಪುಗಳಂ ಕುಱಿಮಾಡಿ ಮಾಡಿ ಪೇೞ್ದುದು ನೆಱಿಯೆ ಸಮಾಸೋಕ್ತಿಯೆಂಬುದಿಂತದಱ ತೆಱ೦
--------------
ಶ್ರೀವಿಜಯ
ದೀಪಕಮಾಜಾತ್ಯಾದಿನಿ ರೂಪಕಮಿಂತಕ್ಕುಮಾದಿಯೊಳ್ ಮಧ್ಯಾಂತ ವ್ಯಾಪಕಮನದಂ ತಱಿಸ ಲ್ಗೀಪೇೞ್ದವಿಕಲ್ಪಲಕ್ಷ್ಯದೊಳ್ ಕವಿ ಮುಖ್ಯರ್
--------------
ಶ್ರೀವಿಜಯ