ಒಟ್ಟು 87 ಕಡೆಗಳಲ್ಲಿ , 1 ಕವಿಗಳು , 68 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅನುಪಮನಂ ಬರಿಪ್ಪೆನನುರಾಗದೆ ನಲ್ಲನನಿಂದು ಮಿಕ್ಕ ನಂ ದನವನದಲ್ಲಿಗಲ್ಲಿಗೆ ತರಿಪ್ಪೆನನಂಗ ಸುಖೋಚಿತಂಗಳಾ ನನುನಯದಿಂದಿರಿಪ್ಪೆನಿನಿತುಂ ಸುರತಾಸವಸೇವನಾ ಸನಾ ತನಸುಖದಿಂದಿರಿಪ್ಪೆನನುರಾಗದಿನೆಂಬುದಿದುತ್ತರೋತ್ತರಂ
--------------
ಶ್ರೀವಿಜಯ
ಅರಸುಕುಮಾರನನಾಯತ ತರ ಕಡೆಗಣ್ಣಿಂದ ನೋಡಿ ಕೆಳದಿಸಮೇತಂ ಪರಿಗತನಗೆಯಿಂದಿರ್ದೆಂ ಗುರುನಾಣ್ಭರದಿಂದಮೆಱಗಿ ಮುಖತಾವರೆಯಂ
--------------
ಶ್ರೀವಿಜಯ
ಅಸಹಾಯಸಾಹಸ ವಿನೋದಿ ವಿವಿಕ್ತಚಿತ್ರ ಪ್ರಸಹ ಪ್ರಕಾಶಿತ ಮಹೋದಯತತ್ತ್ವಸತ್ತ್ವಂ ವ್ಯಸನವ್ಯಪೇತನು ಪನೀತ ಕಲಾಕಲಾಪಂ ಶಶಿಖಂಡ ನಿರ್ಮಲಯಶೋವಿವಿಧಾವತಂಸಂ
--------------
ಶ್ರೀವಿಜಯ
ಇಂತಿರೆ ಮಾರ್ಗದ್ವಿತಯುಗ ತಾಂತರಮಂ ಪೇೞ್ದೆನೆಲ್ಲಿಯುಂ ಕ್ಷೀರಗುಡಾ ದ್ಯಂತರರಸಾಂತರಂ ಜಾ ತ್ಯಂತರಮಪ್ಪಂತನಂತಮಂತರ್ಭೇದಂ (ಗೀತಿಕೆ)
--------------
ಶ್ರೀವಿಜಯ
ಎಂದಿಂತು ಸಮೀಪ ಪ್ರಾ ಸಂ ದರ್ಶಿತ ಭೇದಮಾಯ್ತನುಪ್ರಾಸಮುಮಂ ಸಂಧಿಸಿದೆಣೆಯಕ್ಕರಮೊ ದೊಂದೞೊಳಳವಡಿಸಿ ಬಂದೊಡನುಗತಮಕ್ಕುಂ
--------------
ಶ್ರೀವಿಜಯ
ಕಾಣನೇಗೆಯ್ದುಂ ತನ್ನ ದೋಷಮಂ ಕಾಣದಂತೆಂದುಂ ಕಣ್ಗಲ್ ತಮ್ಮ ಕಾಡಿಗೆಯಂ ಪೂಣಿಗನಾದುದಱಿಂ ಪೆಱರಿಂ ಜಾಣರಿನೋದಿಸಿ ಪೇೞ್ವುದು ಕಬ್ಬಮಂ
--------------
ಶ್ರೀವಿಜಯ
ಕುಱಿಗೊಂಡು ನೆಗೞ್ದನಿಚ್ಛೆಯ ನಱಿಯದೆ ತನ್ನಿಚ್ಛೆಯಿಂದೆ ಕಜ್ಜಂಬೇೞ್ವಂ ತಱಿ ಸಲಿಸಲಾಱನಾರ್ತನ ತೆಱನಱಿಯದೆ ಮರ್ದ್ದುವೇೞ್ವ ಬೆಜ್ಜನ ತೆಱದಿಂ
--------------
ಶ್ರೀವಿಜಯ
ಕುಱೆತಂತು ಪೆಱರ ಬಗೆಯಂ ತೆಱೆದಿರೆ ಪೆಅರ್ಗಱೆ ಪಲಾರ್ಪವಂ ಮಾತಱೆವಂ ಕಿಱೆದಱೊಳೆ ಪಿರಿದುಮರ್ಥಮ ನಱೆಪಲ್ ನೆಱೆವಾತನಾತನಿಂದಂ ನಿಪುಣಂ
--------------
ಶ್ರೀವಿಜಯ
ಕುಲಜನೀತನೆ ಪಂಡಿತನೀತನು ಜ್ಜ್ವಲಯಶೋಧಿಕನೀತನೆ ತಿಬ್ಬಮೆಂ ದಲಸಿ ಪೇೞ್ವವಧಾರಣದೋಷಮಂ ನೆಲಸಲೀಯದಿರಿಂ ಕೃತಿನಾರಿಯೊಳ್
--------------
ಶ್ರೀವಿಜಯ
ಕುಲಜನುಮಲ್ಲಂ ನಣ್ಪಿನ ಬಲಮುಂ ತನಗಿಲ್ಲ ಕಣ್ಗಮೇಳಿದನಾರೊಳ್ ನೆಲಸಿರನೆಲ್ಲಿಯುಮ ವನಂ ಚಲವೆಂದುಂ ಪತ್ತುವಿಡದದೊಂದುಂಟು ಗುಣಂ
--------------
ಶ್ರೀವಿಜಯ
ಕೊಡೆ ಪೇೞು ನುತಕಾವ್ಯಮನಿಂತಭಿಮಾನಿ ತಾಂ ನಿರ ಗೀಡಿತ ಮಹಾಪುರುಷವ್ರತನಿಶ್ಚಿತಂ ಕೂಡದಂತೆ ಪೆಱರೊಳ್ ಮೆಚ್ಚಿನೊಳೇತೆಱನಪ್ಪೊಡಂ ನೋಡದಂ ಕುಱಿತಾವನನು ಮೇನುಮಂ
--------------
ಶ್ರೀವಿಜಯ
ಕೊಲ್ಲೆಂ ಬಿಸುಡಾಯುಧಮಂ ಪುಲ್ಲಂ ಕರ್ಚೇಱು ಪುತ್ತನಡಿಗೆಱಿಗೆನ್ನಾ ನಿಲ್ಲದೆ ತೊಲಗಿದಿರಿಂದಂ ತಲ್ಲದೊಡೆೞ್ದಾರ್ದು ಕೈದುಗೆಯ್ ನೀನೀಗಳ್
--------------
ಶ್ರೀವಿಜಯ
ಕೊಳದಂತಂಬರಮತಿನಿ ರ್ಮಳಮೀತಂ ಸ್ವಾಮಿಭಕ್ತನೆಂದುಂ ನಾಯ್ವೋ ಲಿಳೆಯೊಳ್ ಕರಮೆಂಬುದಿದ ಗ್ಗಳಮಾ ಹೀನಾಧಿಕಪ್ರಶಂಸಾದೋಷಂ
--------------
ಶ್ರೀವಿಜಯ
ಕ್ಷಿತಿಪತಿಯಂ ಬರಿಸಿ ಜಗ ನ್ನುತನಂ ಸಂತೈಸಿ ಕುಶಲವಾರ್ತಾಂತರಮಂ ಮಿತವಚನಂ ಬೆಸಗೊಂಡತಿ ವಿತೀರ್ಣಮುದನಾದನಾತನೆಂಬುದು ಮಾರ್ಗಂ
--------------
ಶ್ರೀವಿಜಯ
ಗುಣಯುತನಪ್ಪನಂ ಸುಭಟನಪ್ಪನನಾಯುಧಯುಕ್ತನಪ್ಪನಂ ಪ್ರಣುತ ಸಮಸ್ತವೈರಿಗಣನಪ್ಪನನುಜ್ಜ್ವಲಕೀರ್ತಿಯಪ್ಪನಂ ಗಣಿದಮನೇನುಮಂ ಬಗೆಯದಾಗಡುಮಂತೆ ಪರೋಪಕಾರಕಾ ರಣಪರನಪ್ಪನಂ ಮನದೆ ಮೆಚ್ಚದರಾರಭಿಮಾನಿಯಪ್ಪನಂ
--------------
ಶ್ರೀವಿಜಯ