ಒಟ್ಟು 6 ಕಡೆಗಳಲ್ಲಿ , 1 ಕವಿಗಳು , 6 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಂತಧಿಕ ವಿಶೇಷಣ ಗಣ ಮಂ ತಡೆಯದೆ ಪೇೞ್ವೊಡಂಕಚಾರಣೆಗಳೊಳಂ ಸಂತಂ ಪೇೞ್ಗುೞಿದಾವೆಡೆ ಯಂತರದೊಳಮಾಗದೆಂದನತಿಶಯಧವಳಂ
--------------
ಶ್ರೀವಿಜಯ
ಇಂದಿದನುಪ್ರಾಸಂ ಪಾ ದಾಂತದೊಳೊಂದಾವುದಾನುಮಿಟ್ಟಕ್ಕರಮಂ ಮುಂತಣ ಪಾದಾಂತಂಗಳೊ ಳುಂ ತಡೆಯದೆ ಪೇೞ್ದೊಡಂತದಂತ ಪ್ರಾಸಂ
--------------
ಶ್ರೀವಿಜಯ
ಜನಜನಮುಮೆಲ್ಲಮೋದಂ ತಡೆಯದೆ ಕಲ್ಗುಂ ಗುರೂಪದೇಶಕ್ರಮದಿಂ ನುಡವಲ್ಮೆಯಲ್ತದೇಂ ಕ ಲ್ತೊಡನೋದುವುವಲ್ತೆ ಗಿಳಿಗಳು ಪುರುಳಿಗಳುಂ
--------------
ಶ್ರೀವಿಜಯ
ನುಡಿಯಂ ಛಂದದೊಳೊಂದಿರೆ ತೊಡರ್ಚಲಱೆ ವಾತನಾತನಿಂದಂ ಜಾಣಂ ತಡೆಯದೆ ಮಹಾಧ್ವಕೃತಿಗಳ ನೊಡರಿಸಲಾರ್ಪಾತನೆಲ್ಲರಿಂದಂ ಬಲ್ಲಂ
--------------
ಶ್ರೀವಿಜಯ
ನುಡಿಯಂ ತಗುಳ್ಚಿ ನೋಟಂ ನುಡಿ ಪರಿಚಯಮಂ ತಗುಳ್ಚಿ ಪರಿಚಯಮಳಿಪಂ ತಡೆಯದೆ ತಗುಳ್ಚಿ ಮನದಳಿ ಪೊಡಗೂಡುವುದಂ ತಗುಳ್ಚುಗುಂ ಕಾಮಿಗಳಾ
--------------
ಶ್ರೀವಿಜಯ
ಪಡೆಯಱಿಯಲಾದೊಡರಿಯಂ ಕಿಡಿಸುಗುಮಂತಃಕಳಂಕ ನೃಪಮಂಡಲಮಂ ತಡೆಯದೆ ತಮಸ್ಸ್ವಭಾವಂ ಕಿಡಿಸುವವೋಲಱಿದು ರಾಹು ಶಶಿಮಂಡಲಮಂ
--------------
ಶ್ರೀವಿಜಯ