ಒಟ್ಟು 47 ಕಡೆಗಳಲ್ಲಿ , 1 ಕವಿಗಳು , 40 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಅದೞೊಳಗಂ ಕಿಸುವೊೞಲಾ ವಿದಿತ ಮಹಾ ಕೊಪಣ ನಗರದಾ ಪುಲಿಗೆಱಿಂಯಾ ಸದಭಿಸ್ತುತಮಪ್ಪೊಂಕುಂ ದದ ನಡುವಣ ನಾಡೆ ನಾಡೆ ಕನ್ನಡದ ತಿರುಳ್
ಅರಸರೊಳೆಲೆ ನೀಂ ಸರಸಮ ನರಸಿಯವೋಲಾಡುತಿರ್ಪೆ ನಿನಗಿದು ಗುಣಮೇ ಅರಸರ್ ಸರಸಮನಱಿವರೆ ಸರಸಮನಾಡರಸರಲ್ಲದವರೊಳ್ ಮಗಳೇ
ಆರುಮೀ ಗುರುಲಘೂದಿತದೋಷ ವಿಶೇಷಮಂ ಧೀರಸತ್ವರಱೆದುಂ ಕುಱೆಗೊಂಡು ವಿಭಾಗಿಸರ್ ಕಾರಣಾಂತರಮನಂತದಱೊಳ್ ತಱೆಸಂದು ನಿ ರ್ಧಾರಿತ ಕ್ರಮದೆ ಪೇೞ್ವಿನುದಾಹರಣಂಗಳಂ
ಇಂತು ಪೇಳ್ದೊಡಿದು ಗೌರವದೋಷದ ಮಾೞ್ಕಿನಿ ಶ್ಚಿಂತಮೀ ತೆಱದವಂ ಕಳೆಗಾ ಕೃತಿಯತ್ತಣಿಂ ಮುಂತೆ ಪೇೞ್ವಿ ಕುಱೆಪಂ ಕುಱೆಗೊಂಡು ಕವೀಶರಾ ರ್ಪಂತು ಪಿಂಗಿಸುಗೆ ಕಾವ್ಯದಿನಾ ಲಘುದೋಷಮಂ
ಇಲ್ಲಿಗಿದು ತಕ್ಕುದಿಲ್ಲಿಗೆ ಪೊಲ್ಲದಿದೆಂದಱಿದು ಸಮಱಿ ಬಲ್ಲಂತೆಲ್ಲಂ ನೆಲ್ಲುಂ ಮೊಸರುಂ ಗುಡಿದಂ ತಲ್ಲದೆ ತಲ್ಲಣಿಸದಲಸದಿಡು ಮೃದುಪದಮಂ
ಎಂದಿಂತು ಪೇೞ್ದ ಮಾೞ್ಕಿಯೊ ಳೊಂದುವುದೋಜಸ್ವಿತಾ ಗುಣಂ ಕೈಕೊಳೆಯುಂ ಸುಂದರಮಾಗದು ಕವಿಪದ ಮೆಂದುಂ ವ್ಯತ್ಯಯದಿನಿಡುವೊಡದು ಸುಕರತರಂ
ಕಂದಮುಮಮಳಿನ ವೃತ್ತಮು ಮೊಂದೊಂದೆಡೆಗೊಂ ಡು ಜಾತಿಜಾಣೆಸೆಯ ಬೆಡಂ ಗೊಂದಿವೞೊಳಮರೆ ಪೇೞಲ್ ಸುಂದರ ರೂಪಾ ಬೆದಂಡೆಗಬ್ಬಮದಕ್ಕುಂ
ಕಸವರಮೆಂಬುದು ನೆಱಿ ಸೈ ರಿಸಲಾರ್ಪೊಡೆ ಪರವಿಚಾರಮಂ ಧರ್ಮಮುಮಂ ಕಸವೇಂ ಕಸವರಮೇನು ಬ್ಬಸಮಂ ಬಸಮಲ್ಲದಿರ್ದು ಮಾಡುವರೆಲ್ಲಂ
ಕುಱಿಗೊಂಡು ನೆಗೞ್ದನಿಚ್ಛೆಯ ನಱಿಯದೆ ತನ್ನಿಚ್ಛೆಯಿಂದೆ ಕಜ್ಜಂಬೇೞ್ವಂ ತಱಿ ಸಲಿಸಲಾಱನಾರ್ತನ ತೆಱನಱಿಯದೆ ಮರ್ದ್ದುವೇೞ್ವ ಬೆಜ್ಜನ ತೆಱದಿಂ
ಕುಸುಮಂಗಳೆಂಬ ಮಾತದು ಪುಸಿ ದಹನಮಯಂಗಳಂಬುಗಳ್ ಮನಸಿಜನಾ ಜಸಮೞಿಯೆ ಸುಡುವುವೆರ್ದೆಯಂ ಬಿಸಿಯವಿವೆಂದಿಂತೆ ಪೇೞಿ ಧರ್ಮಾಪೋಹಂ
ಕೇಡಡಸಿದಂದು ಬಗೆ(ಯು)೦ ಕೂಡದು ಕೂಡಿದುದುಮೞಿದು ವಿಪರೀತಮುಮಂ ಮಾಡುಗುಮದಱಿ೦ ಕರ್ಮ ಕ್ಕೋಡಿ ಬರ್ದುಂಕಲ್ಕಮಱಿವರಾರ್ ಭೂತಳದೊಳ್
ಕೇಡಡಸಿದೊಡಂ ಬಗೆ (ಯು)೦ ಕೂಡದು ಕೂಡಿದುದುಮಱೆದು ವಿಪರೀತಮುಮಂ ಮಾಡುಗುಮದಱೆ೦ ಕರ್ಮ ಕ್ಕೋಡಿ ಬರ್ದುಂಕಲ್ಕೆ ಕಲ್ತರಾರ್ ಬಿನ್ನಣಮಂ
ಗಣಿದದೊಳೊಂದಿ ಬರ್ಪ ಪದಮೊಂದೆಡೆಗೊಂ [ಡು] ವಿಶೇಷ್ಯಮುಂ ವಿಶೇ ಷಣಮುಮನೊಂದಲೀಯದಿರೆಯುಂ ಮಿಗೆ ಕಾರಕ ದೋಷ [ಮಲ್ತದು] ಪ್ರಣುತ ಪದಾಂತರೀಕರಣಮಂತದೆ ತಾಣದೊಳಾದೊಡಂ ಮಹಾ ಗುಣಮನೆ ತರ್ಕುಮೇಕ ಬಹುಭೇದವಿಕಲ್ಪಮನಲ್ಲಿ ನೋಡಲಿಂ
ಗುಣಯುತನಪ್ಪನಂ ಸುಭಟನಪ್ಪನನಾಯುಧಯುಕ್ತನಪ್ಪನಂ ಪ್ರಣುತ ಸಮಸ್ತವೈರಿಗಣನಪ್ಪನನುಜ್ಜ್ವಲಕೀರ್ತಿಯಪ್ಪನಂ ಗಣಿದಮನೇನುಮಂ ಬಗೆಯದಾಗಡುಮಂತೆ ಪರೋಪಕಾರಕಾ ರಣಪರನಪ್ಪನಂ ಮನದೆ ಮೆಚ್ಚದರಾರಭಿಮಾನಿಯಪ್ಪನಂ
ಗುರುಜನದ ಪರಕೆಯುಂ ಬಂ ಧುರ ಪುಣ್ಯಫಳಾನುಬಂಧಮುಂ ನೆರೆದೆನ್ನೊಳ್ ಪರಮಾನುಭಾವಭರಮುಂ ದೊರೆಕೊಂಡುವವಿದು ಬರವಿನೊಳ್ ನಿಮ್ಮಡಿಯಾ