ಒಟ್ಟು 2 ಕಡೆಗಳಲ್ಲಿ , 1 ಕವಿಗಳು , 2 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಾರಕಮಾಱು ಕರ್ಮಕರಣಾದಿಕದಿಂ ಪ್ರಥಮಾದಿಭೇದನಿ ರ್ಧಾರದಿಂದದಂ ಪಿಡಿದು ನಿಲ್ವ ವಿಭಕ್ತಿಗಳೇೞಿನಿಕ್ಕುಮಾ ಚಾರುಗುಣೋದಯಂ ವಚನಮೇಕಬಹುಕ್ರಮದಿಂದೆರೞ್ತೆರ [ತ್ತಾ] ರಯೆ ಪೇೞ್ವೆನಿಂತಿವಱ ಜಾತಿವಿಭಾಗ ಗುಣಾಗುಣಂಗಳು
--------------
ಶ್ರೀವಿಜಯ
ಜಾತಿವಿಭಾಗಮಂ ಬಗೆದು ಪೇೞಿ ಬಹುತ್ವಮನೇಕ ವಾಕ್ಯ ಸಂ ಜಾತಗುಣಂ ತದೇಕವಚನಂಗಳೊಳಂ ದೊರೆವೆತ್ತು ಕೂಡುಗುಂ ಮಾತಿನೊಳೇನೋ ಸಂಖ್ಯೆಗಳೊಳೇಕ ಬಹುತ್ವ ವಿಪರ್ಯಯಕ್ಕಸಂ ಖ್ಯಾತಗುಣಂ ವಿಕಲ್ಪಮದು ಕನ್ನಡದೊಳ್ ಗುಣಮಂ ತಗುಳ್ಚುಗುಂ
--------------
ಶ್ರೀವಿಜಯ