ಒಟ್ಟು 15 ಕಡೆಗಳಲ್ಲಿ , 1 ಕವಿಗಳು , 14 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಅತಿಶಯಧವಳಧರಾದಿಪ ಮತದಿಂದಂ ಜಾತಿಯೆಂಬಳಂಕಾರಮನಿಂ ತತಿನಿಪುಣರೞೆಗೆ ತೋರ್ಪೆಂ ಶ್ರುತಿಸುಭಗಮೆನಿಪ್ಪ ರೂಪಕಾಲಂಕೃತಿಯಂ
ಕಂದಮುಮಮಳಿನ ವೃತ್ತಮು ಮೊಂದೊಂದೆಡೆಗೊಂ ಡು ಜಾತಿಜಾಣೆಸೆಯ ಬೆಡಂ ಗೊಂದಿವೞೊಳಮರೆ ಪೇೞಲ್ ಸುಂದರ ರೂಪಾ ಬೆದಂಡೆಗಬ್ಬಮದಕ್ಕುಂ
ಕಾರಕಮಾಱು ಕರ್ಮಕರಣಾದಿಕದಿಂ ಪ್ರಥಮಾದಿಭೇದನಿ ರ್ಧಾರದಿಂದದಂ ಪಿಡಿದು ನಿಲ್ವ ವಿಭಕ್ತಿಗಳೇೞಿನಿಕ್ಕುಮಾ ಚಾರುಗುಣೋದಯಂ ವಚನಮೇಕಬಹುಕ್ರಮದಿಂದೆರೞ್ತೆರ [ತ್ತಾ] ರಯೆ ಪೇೞ್ವೆನಿಂತಿವಱ ಜಾತಿವಿಭಾಗ ಗುಣಾಗುಣಂಗಳು
ಕುದುರೆ ತಗುಳ್ದುವಾದೆಸೆಯ ಬಿಲ್ಲವರಂ ಸುೞಿದಾನೆ ನಿಂದು ಮೆ ಟ್ಟಿದುವೆಲೆ ನೋಡಿಮೆಂಬುದಿದು ಜಾತಿಕೃತೈಕಬಹುತ್ವಮೊಂದುಗುಂ ಕುದಿಕುದಿದತ್ತಣಿಂ ಕುದುರೆ ನೂಱಱೊಳಾ ಬಲದಾನೆ ಪತ್ತು ತಾ ಗಿದುವೆನೆ ದೋಷಮಾ ಪಿರಿದು ಸಂಖ್ಯೆಯೋಳೇಕಬಹುತ್ವ ಸಂಗದಿಂ
ಕುಲಜಾತಿದೇಶವಿಶದಂ ವಿನಯೋಪಚಾರಂ ನಿಲಯೈಕವೃತ್ತಿ ಕೃತಿಬಿಂಬಿತ ಸತ್ತ್ವಸಾರಂ ವಿಲಸದ್ಗುಣಾಗುಣ ವಿವರ್ತಿ ಗುರೂಪದೇಶಾ ಮಲಿನಾವಬೋಧ ವಿದಿತಾಖಿಳಚೋದ್ಯ ವೃಂದಂ
ಜಾತಿಕ್ರಿಯಾಗುಣದ್ರ ವ್ಯಾತಿಶಯ ವಿಶೇಷಿಯಪ್ಪ ಪದಮೊರ್ಬೞಿನಿಂ ದೀ ತೆಱದಿನುೞಿದ ವಾಕ್ಯಸ ಮೇತಿಗಮುಪಕಾರಯೋಗ್ಯದೀಪಕಮಕ್ಕುಂ
ಜಾತಿವಿಭಾಗಮಂ ಬಗೆದು ಪೇೞಿ ಬಹುತ್ವಮನೇಕ ವಾಕ್ಯ ಸಂ ಜಾತಗುಣಂ ತದೇಕವಚನಂಗಳೊಳಂ ದೊರೆವೆತ್ತು ಕೂಡುಗುಂ ಮಾತಿನೊಳೇನೋ ಸಂಖ್ಯೆಗಳೊಳೇಕ ಬಹುತ್ವ ವಿಪರ್ಯಯಕ್ಕಸಂ ಖ್ಯಾತಗುಣಂ ವಿಕಲ್ಪಮದು ಕನ್ನಡದೊಳ್ ಗುಣಮಂ ತಗುಳ್ಚುಗುಂ
ಧವಳಾಪಾಂಗಂ ಕೇಕಾ ರವಮುಖರಂ ಹರಿತಶಾಬಲಾಂಕ ಕಳಾಪಂ ನವಿಲಾದಂ ಸೊಗಯಿಸುಗುಂ ಸುವಿನೀಲಾಯತಗಳಂ ಪಯೋದಾಗಮದೊಳ್ ಜಾತಿಸ್ವಭಾವಾಖ್ಯಾನಂ
ನಿಯಮಿತಾ [ನ್ವಯ] ಜಾತಿ ಗುಣಕ್ರಿಯಾ ಶ್ರಯಮಿದಾಯವಧಾರಣಲಕ್ಷಣಂ ನಯ ನಿಯೋಗ ವಿಕಲ್ಪನೆಯೊಳ್ ವಿಶಂ ಕೆಯ ವಿಶೇಷ ಗುಣಕ್ಕುಪಲಕ್ಷಣಂ
ಭಾವಿಸಿ ಸಮಸ್ತವಸ್ತು ವಿ ಭಾವಿತ ಜಾತಿಕ್ರಿಯಾಗುಣದ್ರವ್ಯಸ್ವಾ ಭಾವಿಕ ಗುಣಮಂ ಪೇೞ್ವುದು ಕೇವಲಮಾ ಜಾತಿಯೆಂಬ ಸದಳಂಕಾರಂ
ಮೃಗಪಶುಶಕುನಿ ಗಣಂಗಳೊ ಳಗಣಿತ ನಿಜಜಾತಿಜನಿತ ಭಾಷೆಗಳೆಂದುಂ ನೆಗೞ್ದಂತಿರೆ ನರರೊಳಮ ಪ್ರಗಲ್ಭವಚನಪ್ರವೃತ್ತಿ ನೆಗೞ್ಗುಂ ಸಹಜಂ
ಯತಿಯೆಂಬುದುಸಿರ್ವ ತಾಣಂ ಕೃತಾಸ್ಪದಂ ವೃತ್ತಾಜಾತಿ ಪದ ಪದ್ಧತಿಯೊಳ್ ಸತತಂ ಛಂದೋವಿದಿತ ಪ್ರತೀತಶಾಸ್ತ್ರೋಕ್ತಮಾರ್ಗದಿಂದಱಿ ವುದದಂ
ವರಜಾತಿ ರೂಪಕಾರ್ಥಾಂ ತರವಿನ್ಯಾಸಾತಿರೇಕ ಯಾಥಾಸಂಖ್ಯಾ ಸ್ಥಿರದೀಪಕೋಪಮಾ ಬಂ ಧುರಾತಿಶಯ ಸದೃಶಯೋಗಿತಾಕ್ಷೇಪಂಗಳ್
ವಿಳಸಿತ ಸದಳಂಕಾರಾದಿ ಸಂಸಾಧಿತಾರ್ಥಂ ಕುಳವಿದಿತಪದೋದ್ಯತ್ಕೋಮಳಾಳಾಪಶೀಲಂ ಸುಳಲಿತಗುಣ ನಾನಾ ವೃತ್ತ ಜಾತಿಪ್ರವೃತ್ತಾ ಸ್ಖಳಿತರಸವಿಶೇಷೋಪಾಶ್ರಯ ಶ್ರೀನಿವೇಶಂ