ಒಟ್ಟು 5 ಕಡೆಗಳಲ್ಲಿ , 1 ಕವಿಗಳು , 5 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಅಜೇಯಂ ಪೋಲ್ಕುಮಾ ಮತ್ತಗಜಂ ವಾರಿಜನಾಭನಂ ತ್ರಿಜಗ[ನ್ಮು] ದನಂ ಮತ್ತಂ ನಿಜನೀಳಘನಾಭನಂ ಲೋಕವೈದಿಕ ಸಾಮೈಕ ಲೋಕನಾಕಾರಕಾರಕಾ ನಾಕಿ ನೂತಪದವ್ಯಕ್ತಿ ಶ್ರೀಕಾಂತಾ ಮಮಕಾಮದಾ
ಅಮೃತಭವಂ ಶಿಶಿರಕರಂ ಕಮಳಂ ಜಗದೇಕಪಾವನೀಯ ಶ್ರೀಕಂ ಸಮನವಱೊಳ್ ನಿನ್ನ ಮೊಗಂ ಕ್ರಮದೆಂಬುದನಱಿವುದಾ ಪ್ರಶಂಸೋಪಮೆಯಂ ಪ್ರಶಂಸೋಪಮೆ
ಕ್ಷಿತಿಪತಿಯಂ ಬರಿಸಿ ಜಗ ನ್ನುತನಂ ಸಂತೈಸಿ ಕುಶಲವಾರ್ತಾಂತರಮಂ ಮಿತವಚನಂ ಬೆಸಗೊಂಡತಿ ವಿತೀರ್ಣಮುದನಾದನಾತನೆಂಬುದು ಮಾರ್ಗಂ
ಬಗೆದು ಮೇಣ್ ಪರಮ ಧರ್ಮಮನ ೞ್ತಿಯಿನನ್ವಯ ಪ್ರಗಣಿತಾಭ್ಯುದಯ ಮೋಕ್ಷ ಸುಖಾಶ್ರಯ ಹೇತುವಂ ನೆಗೞಿ ಮೇಣುದಿತ ನಿರ್ಮಳಕೀರ್ತಿವಿತಾನಮಂ ಜಗದಗಾಧ ವಿವರೋದರ ದೀಪವಿಕಲ್ಪಮಂ
ಮಾತಱೆ ವರ್ ಕೆಲಬರ್ ಜಗ ತೀತಳಗತ ಮನುಜರೊಳಗೆ ಮಾತಱೆ ವವರೊಳ್ ನೀತಿವಿದರಮಳ ಕವಿತಾ ನೀತಿಯುತರ್ ಕೆಲರೆ ಪರಮ ಕವಿ ವೃಷಭರ್ಕಳ್