ಒಟ್ಟು 10 ಕಡೆಗಳಲ್ಲಿ , 1 ಕವಿಗಳು , 10 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಗೀತಿಕೆ) ಅನುಗತಂ ಪೂರ್ವಕವಿಗಳ್ ನೆಎನದಿನ್ನುಂ ಪೇೞ್ದಿಂ ದುಷ್ಕರೋಕ್ತಿಯ – ನ್ನನುಗತಕ್ರಮದೆ ಬಗೆದು ಹೇಳಿಕೆಯೊಳ್ ಜನಿತವಿಭೇದಮುಮಂ ಪೇೞ್ವೆಂ ಕಿಱೆದಂ
--------------
ಶ್ರೀವಿಜಯ
ಅದಱಿಂದಲಸದೆ ಪೀನಂ ಪದೆಯದೆ ಪಾಂಗಱೆದು ದೋಷಮಂ ಪಿಂಗಿಸಿ ತ ಪ್ಪದೆ ಬಗೆದು ಪೇೞ್ವುದಾಗಮ ಮುದಾರ ನೃಪತುಂಗ ದೇವ ವಿದಿತಕ್ರಮದಿಂ ಗೀತಿಕೆ
--------------
ಶ್ರೀವಿಜಯ
ಇಂತಿಂತೆ ಪೇೞ್ವೊಡೆಲ್ಲಮ ನಂತಾತ್ಮಕಮಕ್ಕುಮಾ ವಿರುದ್ಧದ ಭೇದಂ ಸಂತಯಿಸಿ ಬಲಿದು ಮನಮನ ದಂತಱೆಸಲೆ ಪೇೞಲಾರ್ಪೆನೆಂಬವನೊಳನೇ (ಗೀತಿಕೆ)
--------------
ಶ್ರೀವಿಜಯ
ಇಂತಿರೆ ಮಾರ್ಗದ್ವಿತಯುಗ ತಾಂತರಮಂ ಪೇೞ್ದೆನೆಲ್ಲಿಯುಂ ಕ್ಷೀರಗುಡಾ ದ್ಯಂತರರಸಾಂತರಂ ಜಾ ತ್ಯಂತರಮಪ್ಪಂತನಂತಮಂತರ್ಭೇದಂ (ಗೀತಿಕೆ)
--------------
ಶ್ರೀವಿಜಯ
ಕಂದಂಗಳ್ ಫಲವಾಗಿರೆ ಸುಂದರ ವೃತ್ತಂಗಳಕ್ಕರಂ ಚವುಪದಿ ಮ ತ್ತಂ ದಲ್ ಗೀತಿಕೆ ತಿವದಿಗ ಳಂದಂಬೆತ್ತೆಸೆಯೆ ಪೇೞ್ದೊಡದು ಚತ್ತಾಣಂ
--------------
ಶ್ರೀವಿಜಯ
ನೆನೆದ ಮುಗಿಲ್ಗಳುಂ ಸುರಿವ ಪೆರ್ಮೞೆಯುಂ ಮಿಗೆ ನುಣ್ಣನಪ್ಪ ಕೇ ಕಿಗಳ ಸರಂಗಳುಂ ಪೊಳೆವ ಮಿಂಚುಗಳುಂ ಕರಮುಚ್ಚಮಪ್ಪ ಬೆ ಟ್ಟುಗಳ ತಟಂಗಳಿಂ ಸುರಿದ ನಿರ್ಜ್ಝರಮುಂ ಪೊಸ ಕಾರೊಳಿಂತು ಬೆ ಳ್ಪಗೆ ಪಥಿಕಾಂಗನಾಜನಮನಂಜಿಸುವಂತಿರೆ ತೋಱೆ ಸುತ್ತಲುಂ (ಗೀತಿಕೆ)
--------------
ಶ್ರೀವಿಜಯ
ಪ್ರಾಸಾನುಪ್ರಾಸಾಂತ ಪ್ರಾಸಂಗಳ್ ಮೂಱುಮತಿಶಯಂಗಳ್ ಪ್ರಾಸಾ ಭಾಸಂಗಳುೞಿರಿದ ಮೂಱು೦ ಭಾಸುರ ನೃಪತುಂಗದೇವ ವಿದಿತ ಕ್ರಮದಿಂ (ಗೀತಿಕೆ)
--------------
ಶ್ರೀವಿಜಯ
ಪೞಿಗೆ ಮೇಣ್ ಪೊಗೞ್ಗಿ ಮೇಣ್ ನೆವಮಿಲ್ಲದೊಡಿಂತು ಕೈ ಗೞಿಯೆ ಬಗ್ಗಿಸುಗೆ ಮೇಣವರೆಲ್ಲರುಮಂತುಮಾ ನುೞಿವೆನಲ್ಲೆನೆನಿತಾದೊಡಮೆಂಬುದು ಚೆಲ್ವ ಪಾಂ ಗೞಿಯ [ದ]೦ತಿದನಿಂತಿರೆ ಪೇೞ್ಗಿ ವಿಕಲ್ಪಮಂ (ಗೀತಿಕೆ)
--------------
ಶ್ರೀವಿಜಯ
ವಾರಿ ವಾರಿಯೊಳಾದಾನಂ ವಾರಿವಾರಿ ವಿತರ್ಕಮಂ ವಾರಿವಾರಿ ಜವೋದಾನಂ ವಾರಿವಾರಿಜನಾಭನೊಳ್ (ಗೀತಿಕೆ)
--------------
ಶ್ರೀವಿಜಯ
ವಿಳಸಿತ ಸಸ್ಯಸಂಪದಭಿರಾಮಗುಣೋದಯೆ ತಾಳ್ದಿದಳ್ ಧರಾ ಲಳನೆ ವಿಶಾಲಲಕ್ಷ್ಮಿಯನನಾರತಮೆಂಬುದು ದಕ್ಷಿನಾಪಥಂ ಜಳನಿಧಿಮೇಖಲಾವಲಯಿತಾಂಗಿ ಕರಂ ಸೊಗಯಿಪ್ಪುದಾಯ್ತು ಭೂ ಲಳನೆ ವಿಶಾಲಲಕ್ಷ್ಮಿಯನನಾಕುಳಮೆಂಬುದಿದುತ್ತರಾಪಥಂ (ಗೀತಿಕೆ)
--------------
ಶ್ರೀವಿಜಯ