ಒಟ್ಟು 16 ಕಡೆಗಳಲ್ಲಿ , 1 ಕವಿಗಳು , 14 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಕುಸುಮಂಗಳೆಂಬ ಮಾತದು ಪುಸಿ ದಹನಮಯಂಗಳಂಬುಗಳ್ ಮನಸಿಜನಾ ಜಸಮೞಿಯೆ ಸುಡುವುವೆರ್ದೆಯಂ ಬಿಸಿಯವಿವೆಂದಿಂತೆ ಪೇೞಿ ಧರ್ಮಾಪೋಹಂ
ಕೆಳದಿಯನಭಿಮತಮುಮನೊ ರ್ಬುಳಿಗೂಡೆ ವಿದಗ್ಧೆ ಸುರತಸೇವನಮಂ ಮೊ ಕ್ಕಳಮವರ್ಗೆ ಮಾಡಲೆಂದಾ ಗಳೆ ಪೋಗಲ್ ಬಗೆದು ನುಡಿದಳಿಂತೀ ಮಾತಂ
ತಱಿಸಂದಾ ಸಕ್ಕದಮುಮ ನಱಿಯದೆ ಕನ್ನಡಮುಮಂ ಸಮಾಸೋಕ್ತಿಗಳೊಳ್ ಕುಱಿತು ಬೆರಸಿದೊಡೆ ವಿರಸಂ ಮಱುಗುವ ಪಾಲ್ಗಳೆಯ ಪನಿಗಳಂ ಬೆರಸಿದವೋಲ್
ತಳಿರ್ಗಳವೋಲ್ ಮೆಲ್ಲಿದುವೀ ತಳಂಗಳಳಿಕುಳದವೋಲ್ ವಿನೀಳಂಗಳ್ ನಿ ನ್ನಳಕಾಳಿಗಳೆಂಬುದನಾ ಕುಳಮಿಲ್ಲದೆ ವಿಬುಧರೞಿಗೆ ಧರ್ಮೋಪಮೆಯಂ ಧರ್ಮೋಪಮೆ
ತಿಳಿಗೊಳನಂ ಪೂಗೊಳನನದಂ ನೆಗೞಿ ಮುಳಿದುಕೊಳ್ವ ಬಳಸೆ ನಾನದಂ ನೆ ಗಳೆ ತಾನೆಡೆಮನಂಗಜನೆದಪ್ಪಲಾ ಗಳೆ ನಂಬವನದೊಪ್ಪುವಂ ವನೇಚರಮದಾ (ಶ್ಲೋಕ)
ನಿಗದಿತ ಕಾವ್ಯೋಕ್ತಿಗಳೊಳ್ ನೆಗೞ್ದುವು ಮಾರ್ಗಂಗಳಿಂತುಮೆರುಡುಕ್ತಿಗಳುಂ ಬಗೆವಾಗಳೆರಡು ಮಾೞ್ಕಿಯೊ ಳೊಗೆದುವು ವಕ್ರ ಸ್ವಭಾವ ನಿಯತಿಕ್ರಮದಿಂ
ನೆರೆದು ಬಂದಪರವರ್ ಸಯಲಾಬಲಮೆಲ್ಲಮೆ ೞ್ತರದೆ ಕೊಂದಪನಿವಂದಿರನೀಗಳೆ ನಿಕ್ಕುವಂ ಪರಿದು ಬೀೞ್ವಿವೊಲಿವಂದಿರ ಪಾಡೞಿ ವಂದಮಂ ತಿರವೇ [ೞೊ] ಡ್ಡೞಿಯದಂತಿರೆ ನಮ್ಮವರೆಲ್ಲರಂ
ಪರಪುರುಷ ಸೇವನಾಕೃತ ಸುರತವಿಕಾರಂಗಳೆಲ್ಲಮಂ ನಿಜಪತಿಯೊಳ್ ನೆರೆದಾಗಳೆ ಮಱಿಯಲ್ಬಗೆ ದಿರವದು ನಗಿಸಿತ್ತು ಪೀನಮಭಿಸಾರಿಕೆಯಾ ಹಾಸ್ಯ
ಪರಿಗೀತಾರ್ಥಂ ಪೂರ್ವಾ ಪರದೊಳ್ ಬಗೆವಾಗಳೆಂದುಮೊಂದಱೊಳೊಂದುಂ ದೊರೆಕೊಂಡೊಂದದೊಡದು ದು ಷ್ಕರಮೆ ವಿರುದ್ಧಾರ್ಥಮೆಂಬುದಾದಂ ದೋಷಂ
ಮಲಯಾನಿಲನುಂ ಮಲಯಜ ಜಲಮುಂ ಶಶಿಕಿರಣಮುಂ ವಿಯೋಗಿಗಳೆರ್ದೆಯೊಳ್ ನೆಲಸಿರ್ದುವೞಲೆ ಪಾಪದ ಫಲಮಾದುವು ಯುಕ್ತಕಾರಿ ಕಾಮುಕ ಜನದಾ ಯುಕ್ತಕಾರಿ
ಮಾರುತೀ ಪರಮೋದಾರದಾರನೊಳ್ ಕೂಡು ನಲ್ಲನೊಳ್ ಸಾರ ಕಾದಂಬಿನೀನಾಥನಾರೂಢ ಗುಣಧಾಮನೊಳ್ (ಅತಾಲವ್ಯಂ) ನರನಾಯಕನಂ ನಿಂದಾನಿರದೀಗಳೆ ಕಾಂತನಂ ನೆರೆದೇನದಱಿ೦ದಿಲ್ಲಾ ನೆರೆದಿರ್ದಾಗೆನಾಗೆನೆ (ನಿರೋಷ್ಮ್ಯಂ)
ಮೃಗಪಶುಶಕುನಿ ಗಣಂಗಳೊ ಳಗಣಿತ ನಿಜಜಾತಿಜನಿತ ಭಾಷೆಗಳೆಂದುಂ ನೆಗೞ್ದಂತಿರೆ ನರರೊಳಮ ಪ್ರಗಲ್ಭವಚನಪ್ರವೃತ್ತಿ ನೆಗೞ್ಗುಂ ಸಹಜಂ
ಮೇರೆಗಳೆದಿರೆ ವಿಶೇಷ ವಿ ಚಾರಮನಧಿಕೋಕ್ತಿಯೊಳ್ ತಗಳ್ಚುವುದಕ್ಕುಂ ಸಾರತರಮತಿಶಯಾಲಂ ಕಾರಂ ಮತ್ತದಱ ಲಕ್ಷ್ಯಮೀ ತೆಱನಕ್ಕುಂ
ಮೊಗಮೆಂಬಂಬುಜದಲರಾ ನಗೆಯೆಂಬ ವಿಕಾಸಮೊಪ್ಪುವದಱೊಳ್ಸುೞಿಗುಂ ಮಿಗೆ ಕಣ್ಗಳೆಂಬ ತುಂಬಿಗ ಳೊಗೆದೊಸೆಗೆಯಿನೆನೆ ಸುಯುಕ್ತರೂಪಕಮಕ್ಕುಂ ಯುಕ್ತರೂಪಕಂ