ಒಟ್ಟು 6 ಕಡೆಗಳಲ್ಲಿ , 1 ಕವಿಗಳು , 6 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇಂತು ವಿಶೇಷ್ಯಂ ಕ್ರಿಯೆಯಂ ಸಂತಂ ನೋೞ್ಪುದಱೆುನಕ್ಕುಮದು ಸಾಪೇಕ್ಷಂ ಚಿಂತಿಸೆ ಸಮಾಸಮಂ ಪೇ ೞ್ಪಂತಪ್ಪ ಪದಂ ಸಮರ್ಥಮಲ್ತಪ್ಪುದಱೆಂ
--------------
ಶ್ರೀವಿಜಯ
ಕಾರಕಮಂ ಕ್ರಿಯೆಯುಮನಱೆ ದೋರಂತಿರೆ ಮುಂತಗುಳ್ಚಿ ಮುಕ್ತಕ ಪದದೊಳ್ ಸಾರಂ ಸಮಾಸಪದದು ಚ್ಚಾರಣೆಯಂ ನೀಳ್ದು ನಿಲೆ ತಗುಳ್ಚುಗೆ ಕೃತಿಯೊಳ್
--------------
ಶ್ರೀವಿಜಯ
ನಿಕ್ಕುವಮಿಂತುಮಲ್ಲದದ (ಱಾ)ಕ್ರಿಯೆ ಸಾರ್ದಿರೆ ಪತ್ತಿ ಮುಂದೆ ಸ ಯ್ತಕ್ಕುಮನುಕ್ರಮಾನುಗತದಿಂ ಬರಮೀಗೆಮಗೆಂಬ ಕಾರಕಂ ಸಕ್ಕದವೇನೊ ಕಾರಕ ವಿಭಕ್ತಿಯೊಳೊಂದೆ ಸಮಾಸಯುಕ್ತಿ ಲೇ ಸಕ್ಕುಮಭೇದರೂಪಗುಣಮಾಗಿ ತಗುಳ್ದಿರೆ ಮೇಣ್ ಕ್ರಿಯಾಪದಂ
--------------
ಶ್ರೀವಿಜಯ
ಪದನಱೆದೊಂದಂ ಕ್ರಿಯೆಯೊಳ್ ಪುದಿದುೞಿದುದನೊಂದಿ ಬರೆ ವಿಶೇಷ್ಯದೊಳೊಂದಂ ಸದಭಿಮತಮಾಗಿ ನಿಲೆ ಪೇ ೞ್ವುದು ಮಾರ್ಗಂ ನಿತ್ಯಮಲ್ಲವಲ್ಲಭಮತದಿಂ
--------------
ಶ್ರೀವಿಜಯ
ಪರದರ್ಗಾ ಪಾರ್ವರ್ಗಾ ಯ್ತರಸರ್ಗಾ ಕುಡಿಯರಪ್ಪ ನಾಲ್ವರ್ಗಾಗಳ್ ಸ್ಥಿರ ಗೋಪಾಧ್ಯಾಯ ಕ್ಷ್ಮಾ ಪರಿಪಾಲ್ಯ ಕ್ಷೇತ್ರಕರ್ಷಣಂಗಳ್ ಕ್ರಿಯೆಗಳ್
--------------
ಶ್ರೀವಿಜಯ
ಬೇಱಿವೇಱಿ ನಿಲೆ ಕಾರಕದೊಳ್ ಕ್ರಿಯೆ ತಳ್ತು ಮು ತೋಱಿ ಪೇೞ್ದವಗುಣಂ ಗುಣರೂಪದೆ ಪೊರ್ದುಗುಂ ಸಾಱುಗಾನೆಯವರೆಲ್ಲರುಮಂ ನೃಪ [ತಾ] ನೆ ಮ ತ್ತೇಱು [ವಂ] ಪಣಿದೊಡಾನೆಯನೆಂಬು [ದ] ದೂಷಿತಂ
--------------
ಶ್ರೀವಿಜಯ