ಒಟ್ಟು 4 ಕಡೆಗಳಲ್ಲಿ , 1 ಕವಿಗಳು , 4 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅದಱೆ೦ ಪರಮಾಗಮ ಕೋ ವಿದನಪ್ಪುದು ಪೂರ್ವಕಾವ್ಯರಚನೆಗಳಂ ತಾಂ ಮೊದಲೊಳ್ ಕಲ್ತಂಗಲ್ಲದೆ ಪದದೊಳ್ ಜಾಣುಂ ಬೆಡಂಗುಮಕ್ಕುಮೆ ಕೃತಿಯೊಳ್
--------------
ಶ್ರೀವಿಜಯ
ಕಾರಕಮಂ ಕ್ರಿಯೆಯುಮನಱೆ ದೋರಂತಿರೆ ಮುಂತಗುಳ್ಚಿ ಮುಕ್ತಕ ಪದದೊಳ್ ಸಾರಂ ಸಮಾಸಪದದು ಚ್ಚಾರಣೆಯಂ ನೀಳ್ದು ನಿಲೆ ತಗುಳ್ಚುಗೆ ಕೃತಿಯೊಳ್
--------------
ಶ್ರೀವಿಜಯ
ಗುರುಲಘುವಿನ್ಯಾಸಕ್ರಮ ವಿರಚನೆಯೂನಾತಿರಿಕ್ತಮಾದೊಡೆ ಕೃತಿಯೊಳ್ ನಿರುತಂ ಛಂದೋಭಂಗಂ ದುರುಕ್ತತರದೋಷಮದಱ ಪಾಂಗಿಂತಕ್ಕುಂ
--------------
ಶ್ರೀವಿಜಯ
ಬೆರಸಿರೆ ಸಮಾಸದೊಳ್ ಬಂ ಧುರಮಾಗದು ಕಾವ್ಯಬಂಧಮೆಂದುಂ ಕೃತಿಯೊಳ್ ದೊರೆಕೊಳ್ವ ಪದವಿಶೇಷ್ಯಾಂ ತರಮದಱೆ೦ ವ್ಯಸ್ತಮಾಗಿ ಪೇೞ್ಗಿದನೆಂದುಂ
--------------
ಶ್ರೀವಿಜಯ