ಒಟ್ಟು 4 ಕಡೆಗಳಲ್ಲಿ , 1 ಕವಿಗಳು , 4 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅತಿಶಯಧವಳೋರ್ವಿಪೋದಿತಾಳಂ ಕೃತಿಮತಿ ನೀತಿ ನಿರಂತರ ಪ್ರತೀತಂ ಶ್ರುತಿಯುವತಿಕೃತೋಪಚಾರ ಸಾರ ಸ್ವತಗುಣದಿಂ ಕೃತಕೃತ್ಯ [ಮೆಲ್ಲ] ಮಕ್ಕುಂ
--------------
ಶ್ರೀವಿಜಯ
ಕೃತಕೃತ್ಯಮಲ್ಲನಪ್ರತಿ ಹತವಿಕ್ರಮನೊಸೆದು ವೀರನಾರಾಯಣನ ಪ್ಪತಿಶಯಧವಳಂ ನಮಗೀ ಗತರ್ಕಿತೋಪಸ್ಥಿತ ಪ್ರತಾಪೋದಯಮಂ
--------------
ಶ್ರೀವಿಜಯ
ನುತ ಶಬ್ದಾಲಂಕಾರದೊ ಳತಿಶಯಮೀ ಕನ್ನಡಕ್ಕೆ ಸತತಂ ಪ್ರಾಸಂ ಕೃತಕೃತ್ಯಮಲ್ಲವಲ್ಲಭ ಮತದಿಂದದ [ಱಾ] ಪ್ರಪಂಚಮೀತೆಱನಕ್ಕುಂ
--------------
ಶ್ರೀವಿಜಯ
ಶ್ರುತದುಷ್ಟಮರ್ಥದುಷ್ಟಂ ಶ್ರುತಿಕಷ್ಟಂ ಕಲ್ಪನೋಕ್ತಿಕಷ್ಟಮುಮೆಂದೀ ಕೃತಕೃತ್ಯಮಲ್ಲವಲ್ಲಭ ಮತದಿಂ ನಾಲ್ಕಕ್ಕುಮಿಲ್ಲಿ ಕೃತಿದೋಷಂಗಳ್
--------------
ಶ್ರೀವಿಜಯ