ಒಟ್ಟು 3 ಕಡೆಗಳಲ್ಲಿ , 1 ಕವಿಗಳು , 3 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಮಲಾಕರದೊಳ್ ಸಂಕೋ ಚಮನೞಲಂ ಚಕ್ರವಾಕದೊಳ್ ಮಾಡದು ನಿ ನ್ನ ಮುಖೇಂದುಬಿಂಬಮಿಂದುಗೆ ಸಮನೆಂಬುದು ಮಿಗೆ ವಿರುದ್ಧರೂಪಕಮಕ್ಕುಂ ವಿರುದ್ಧ ರೂಪಕಂ
--------------
ಶ್ರೀವಿಜಯ
ಕುಮುದಾನಂದನಕರವತಿ ಕಮಲಾಕರರಾಗಹರಮುದಾರಂ ನಿನ್ನಾ ವಿಮಳಯಶೋವಿಧುವೆಂಬುದು ಕಮನೀಯಂ ಶ್ಲೇಷರೂಪಕಾಲಂಕಾರಂ ಶ್ಲೇಷರೂಪಕಂ
--------------
ಶ್ರೀವಿಜಯ
ಪರಮೋದಯರಿರ್ ಕಮಲಾ ಕರಬೋಧಕರಿರ್ ದಿನೇಶನುಂ ನೀನುಂ ಭಾ ಸ್ಕರನನಿಯತ ವೃತ್ತಕ್ರಮ ನರಸಾ ನಿನ್ನಂತೆ ನಿಯತವೃತ್ತಸ್ಥಿತ ನೇಂ ಉಭಯ ವ್ಯತಿರೇಕಂ
--------------
ಶ್ರೀವಿಜಯ