ಒಟ್ಟು 8 ಕಡೆಗಳಲ್ಲಿ , 1 ಕವಿಗಳು , 8 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
(ಗದ್ಯ) ಇದು ಪರಮ ಶ್ರೀನೃಪತುಂಗದೇವಾನುಮತಮಪ್ಪ ಕವಿರಾಜಮಾರ್ಗದೊಳ್ ದೋಷಾಟಿದೋಷಾನುವರ್ಣನ ನಿರ್ಣಯಂ ಪ್ರಥಮ ಪರಿಚ್ಛೇದಂ
(ಗದ್ಯ) ಇದು ಶ್ರೀ ನೃಪತುಂಗ ದೇವಾನುಮತಮಪ್ಪ ಕವಿರಾಜಮಾರ್ಗದೊಳ್ ಶಬ್ದಾಲಂಕಾರ ವರ್ಣನಾನಿರ್ಣಯಂ ದ್ವಿತೀಯ ಪರಿಚ್ಛೇದಂ
ಇದು ದಕ್ಷಿಣಮಾರ್ಗವಿಭೇ ದದ ಮಧುರರಸಪ್ರಯೋಗಮಾಚಾರ್ಯಮನೋ ಮುದಿತವಿತಾನಂ ವಿದಿತಾ ಸ್ವದಮುತ್ತರಮಾರ್ಗವರ್ಗಮಧುರಾಳಾಪಂ
ಇದು ದಲ್ ವರ್ಗಪ್ರಾಸ ಕ್ಕುದಾಹೃತಂ ಕುರಿತು ಶಷಸ ವರ್ಣತ್ರಯಮುಂ ವಿದಿತ ಪ್ರಾಸವಿವಿಕ್ತಾ ಸ್ಪದದೊಳ್ ನಿಲೆ ಪೇೞ್ದೊಡದು ಸಮೀಪ ಪ್ರಾಸಂ
ಇದು ದಾಕ್ಷಿಣಾತ್ಯ ಕವಿಮಾ ರ್ಗದುದಾರಮುದೀಚ್ಯರುರು ವಿಶೇಷಣಯುತಮ ಪ್ಪುದನೊಲ್ವರಿಂತು ಹೇಮಾಂ ಗದ ಲೀಲಾಂಬುಜ ವಿಚಿತ್ರ ಚಿತ್ರಾಧಿಕಮಂ
ಇದು ನಿಬಿಡ ಶಿಥಿಲಬಂಧಾ ಸ್ಪದ ಮಾರ್ಗದ್ವಿತಯಗದಿತ ಲಕ್ಷ್ಯವಿಭಾಗಂ ಸದಭಿಕಮನೀಯಗುಣಮ ಪ್ಪುದು ನಿಯತಂ ಕಾಂತಮೆಂಬುದಭಿಗೀತಾರ್ಥಂ
ಇದು ಪರಮ ಸರಸ್ವತೀ ತೀರ್ಥಾವತಾರ ನೃಪತುಂಗದೇವಾನುಮತಮಪ್ಪ ಕವಿರಾಜಮಾರ್ಗದೊಳ್ ಅರ್ಥಾಲಂಕಾರ ಪ್ರಕರಣಂ ತೃತೀಯ ಪರಿಚ್ಛೇದಂ
ಇದು ವಿದಿತ ವಿರುದ್ಧಾರ್ಥ ಕ್ಕುದಾಹೃತಂ ಹರಣಮಾತ್ರಮಿನ್ನಪ್ಪುವನುಂ ಸದಭಿಮತ ಕಾವ್ಯಪದವಿಧಿ ವಿದೂರಗತಮಾಗೆ ಪರಿಹರಿಕ್ಕೆ ಬುಧರ್ಕಳ್