ಒಟ್ಟು 151 ಕಡೆಗಳಲ್ಲಿ , 1 ಕವಿಗಳು , 117 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶ್ರುತದೊಳ್ ಭಾವಿಸಿ ನೋಳ್ಪೊಡೆ ಸತತಂ ಕವಿವೃಷಭರಾ ಪ್ರಯೋಗಂಗಳೊಳಂ ಕೃತಪರಿಚಯಬಲನಪ್ಪನ ನತಿಶಯಧವಳನ ಸಭಾಸದರ್ ಮನ್ನಿಸುವರ್
--------------
ಶ್ರೀವಿಜಯ
ಸಂಬೋಧನೆ ದೀರ್ಘೋಕ್ತಿಯೊ ಳಿಂಬಾಗಿರೆ ಬರ್ಕುಮದನೆ ಪಲವೆಡೆಗಳೊಳೆಂ ದುಂ ಬಲ್ಲವರಿಡದಿರ್ಕಾ ದಂ ಬಾಯೞಿದೊಳ್ವವೋಲ್ ಕರಂ ವಿರಸತರಂ
--------------
ಶ್ರೀವಿಜಯ
ಸಕಳಕಳಾ ಭಾಷಾ ಲೌ ಕಿಕ ಸಾಮಯಿಕಾದಿ ವರ್ಣನಾನಿರ್ಣಿಕ್ತ ಪ್ರಕಟತರ ವಸ್ತುವಿಸ್ತರ ವಿಕಲ್ಪವಿದನಲ್ಲದಾಗದಾಗದು ಪೇೞಲ್
--------------
ಶ್ರೀವಿಜಯ
ಸಕಳಾಳಾಪ ಕಳಾಕಳಾಪಕಥಿತವ್ಯಾವೃತ್ತಿಯೊಳ್ ಕೊಡಿ ಚಿ ತ್ರಕರಂಬೋಲ್ ಪರಭಾಗಭಾವವಿಲಸದ್ವರ್ಣಕ್ರಮಾವೃತ್ತಿಯಂ ಪ್ರಕಟಂ ಮಾಡಿರೆ ಪೇೞ್ದ ಚಿತ್ರಕೃತಿಯಂ ವ್ಯಾವರ್ಣಿಸುತ್ತುಂ ಕವಿ ಪ್ರಕರಂ ಶ್ರೀವಿಜಯಪ್ರಭೂತಮನಿದಂ ಕೈಕೊಳ್ವುದೀ ಮಾೞ್ಕಿಯಿಂ
--------------
ಶ್ರೀವಿಜಯ
ಸಮುದಾಯಾರ್ಥಮನಾರಯೆ ಸಮನಿಸುವರ್ಥಪ್ರತೀತಿ ತೋಱದೊಡೆಲ್ಲಂ ಕ್ರಮಮಕ್ಕುಮರ್ಥಶೂನ್ಯಂ ಸಮಸ್ತ ಕವಿವೃಷಭ ದೂರದೂಷಿತಮಾರ್ಗಂ
--------------
ಶ್ರೀವಿಜಯ
ಸರಸಿಜಬಾಂಧವನಸ್ತಾಂ ತರಗತನಾಗಿರೆ ಸರೋಜಿನೀವನಮಾದಂ ಕೊರಗುತ್ತೆ ಮುಗಿಗುಮೀಶ್ವರ ವಿರಹದೆ ಶೋಕಾಕುಲಂ ವಿಶೇಷಾಪ್ತಜನಂ ವಿಶೇಷಪ್ರಕಾಶಕಂ
--------------
ಶ್ರೀವಿಜಯ
ಸರಿದಧಿಪತಿಯಂ ದೋಷಾ ಕರನಂತರ್ಮಲಿನನಾಗಿಯುಂ ಪೆರ್ಚಿಸುಗುಂ ಪರಿಣತ ಕಲಾಕಲಾಪಂ ಪರಿವರ್ಧಕನಕ್ಕುಮತಿ ವಿರುದ್ಧಾತ್ಮಕನಂ ವಿರುದ್ಧಾತ್ಮಕಂ
--------------
ಶ್ರೀವಿಜಯ
ಸವಿಶೇಷಾಲಂಕಾರೋ ದ್ಭವಮಾಗಿಯುಮೊಂದುವರ್ಥದೊಳ್ ಸಂಬಂಧ ವ್ಯವಧಾನಮಾದೊಡಕ್ಕುಂ ವ್ಯವಹಿತದೋಷಂ ಪ್ರಯೋಗಮೀತೆಱದನಱಾ
--------------
ಶ್ರೀವಿಜಯ
ಸವಿಹಿತಮಪ್ಪ ಕರ್ಣಪೂರೋತ್ಪಳಮಂ ಧವಳ ವಿಲೋಚನೆಯ ಗುಣ ಸುಂದರಮಂ ಕಿವಿವರಂ ನೀಳ್ದ ನಯನಯುಗದೊಳೊ ಪ್ಪುವವಳಾನವಯವದೇಕೆ ಕಳೆಯವೇೞ್ದಿಂ ಪ್ರಿಯೆಯಂ (ಭಾವೆ)
--------------
ಶ್ರೀವಿಜಯ
ಸುಭಟರ್ಕಳ್ ಕವಿಗಳ್ ಸು ಪ್ರಭುಗಳ್ ಚೆಲ್ವರ್ಕಳಭಿಜನರ್ಕಳ್ ಗುಣಿಗಳ್ ಅಭಿಮಾನಿಗಳತ್ಯುಗ್ರರ್ ಗಭೀರಚಿತ್ತರ್ ವಿವೇಕಿಗಳ್ ನಾಡವರ್ಗಳ್
--------------
ಶ್ರೀವಿಜಯ
ಸ್ಫುರಿಯಿಸದೆ ದಶವವಸನಾಂ ತರಮಾರಕ್ತಂಗಳಾಗದೆನಸುಂ ಕಣ್ಗಳ್ ಭರಿತ ಭ್ರೂಕುಟಿ ಕಲಮಾ ಗಿರದೆ ಮುಖಂ ಗೆಲ್ದನಿಂತುವರಿನೃಪಬಲಮಂ
--------------
ಶ್ರೀವಿಜಯ
ಸ್ಮರನೈದಂಬುಗಳಲ್ಲಿವು ಶರಕೋಟಿಗಳಿಲ್ಲದಾಗಳಿಂತಿ ಲೋಕಾಂ ತರವರ್ತಿ ವಿರಹಿಗಣಮಂ ನಿರುತಂ ಮರ್ದಿಸವವುವೆನೆ ಸುಗುಣಾಪೋಹಂ ಸುಗುಣಾಪೋಹಂ
--------------
ಶ್ರೀವಿಜಯ