ಒಟ್ಟು 178 ಕಡೆಗಳಲ್ಲಿ , 1 ಕವಿಗಳು , 123 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ರಾವಣನಂ ಕೊಂದು ಜಯ ಶ್ರೀವಧುವಂ ತಾಳ್ದಿ ಮುಯ್ವಿನೊಳ್ ವರ ಸೀತಾ ದೇವತೆಯ ತರ್ಪನ್ನೆಗ ಮೋವದೆ ಪುರುಷವ್ರತೋಚಿತಂ ವೀರರಸಂ ವೀರ
--------------
ಶ್ರೀವಿಜಯ
ವದನಂ ಮದೀಯಲೋಚನ ಮುದಾವಹಂ ಕಮಳಮಳಿಕುಳೋತ್ಸವಜನಕಂ ವಿದಿತ ವಿಭೇದಕ್ರಮಮಿಂ ತಿದಲ್ಲದಿಲ್ಲೆಂಬುದತಿಶಯೋಪಮೆ ಸತತಂ ಅತಿಶಯೋಪಮೆ
--------------
ಶ್ರೀವಿಜಯ
ವದನಮಿದಲ್ತಂಬುರುಹಂ ಮದಲೋಲವಿಲೋಚನಂಗಳಲ್ಲಮಿವಳಿಗಳ್ ಮುದಮಲ್ಲಿದು ವಿಕಸನಮೆಂ ಬಿದನಿಂಬೆನೆ ಬಗೆಗೆ ರೂಪಕಾಪಹ್ನುತಿಯಂ ರೂಪಕಾಪಹ್ನುತಿ
--------------
ಶ್ರೀವಿಜಯ
ವಾರಿ ವಾರಿಯೊಳಾದಾನಂ ವಾರಿವಾರಿ ವಿತರ್ಕಮಂ ವಾರಿವಾರಿ ಜವೋದಾನಂ ವಾರಿವಾರಿಜನಾಭನೊಳ್ (ಗೀತಿಕೆ)
--------------
ಶ್ರೀವಿಜಯ
ವಿದಿತಾರ್ಥಾಲಂಕಾರಾ ಸ್ಪದ ಭೇದಂಗಳ್ ಪುರಾನ ಶಾಸ್ತ್ರೋಕ್ತಮಗಳ್ ತದನುಮತಲಕ್ಷ್ಯಲಕ್ಷಣ ನಿದರ್ಸನಂಗಳನನುಕ್ತಮೋಕ್ತಿಯೆ ಪೇೞ್ವೆಂ
--------------
ಶ್ರೀವಿಜಯ
ವಿನಿಮೀಳಿತ ಕುಮುದವನಂ ಜನಿತೋನ್ಮೀಲಾರವಿಂದವನಲಕ್ಷ್ಮೀಶಂ ದಿನಕರನುದಯಂಗೆಯ್ದಂ ವಿನಿಹತತಿಮಿರಂ ವಿಶಿಷ್ಟ ಸಂಧ್ಯಾಶ್ಲೇಷಂ
--------------
ಶ್ರೀವಿಜಯ
ವಿಪುಳತರಕಟಕನುದ್ಯದ್ ದ್ವಿಪಹರಿಮಹಿಷೀನಿಷೇವ್ಯನುನ್ನತಪಾದಂ ವ್ಯುಪನೀತಶ್ರೀಫಲದಂ ವಿಪರೀತಕನಪ್ಪನಂತು ಭೂಭೃನ್ನಾಥಂ
--------------
ಶ್ರೀವಿಜಯ
ಶರದಾಗಮದೊಳ್ ಕಳಹಂ ಸರವಮ ಪೆರ್ಚಿತ್ತು ಕಿವಿಗೆ ಸೊಗಯಿಸಿ ಪೀನಂ ವಿರಳತರಮಾಯ್ತು ಬರ್ಹಿಣ ವಿರಾವಮುರುಮುದವಿರಾಮ ವಿರಸ ವಿರಾಗಂ
--------------
ಶ್ರೀವಿಜಯ
ಸಂತಂ ಬಾಳ್ವುದು ಮೀಱದಾ ನರಪನೊಳ್ ಸೌಜನ್ಯಲಕ್ಷ್ಮೀಮದಾಂ ಧಂ ತನ್ನಿಶ್ಚಯ ಮೆಚ್ಚಿನೀಂ ಪರಗುಣೌದಾರ್ಯಾಭಿಮಾನಂಗಳಿಂ ಪಿಂತಂ ನೋಡದೆ ಪಾೞಿ ಗೆಟ್ಟ ೞಿ ಪಿನಿಂ ಬಾೞ್ವಂತೆ ಬಾೞ್ದಯ್ಯನಾ ಸಂತಂ ತಾಂ ಪಸತದನೞ್ತಿ ಪೆೞಿಗುಂ ದಾನಂಗಳಂ ಭೂಪನಾ|| (ಚಕ್ರಶ್ಲೋಕ)
--------------
ಶ್ರೀವಿಜಯ
ಸಂತಂ ಮೃಗಗಣವೃತ್ತಿಯ ನಿಂತಪ್ರಸ್ತುತಮನಱಿ ಪಿದಂ ಪರಸೇವಾ ಚಿಂತಾವಿಷಾದಿತಾಂತ ಸ್ಸ್ವಾಂತಂ ಸಂತೈಸಲೆಂದು ತನ್ನಂ ತಾನೇ
--------------
ಶ್ರೀವಿಜಯ
ಸಕಲಜನವಿನುತನಂ ಶತ ಮಖ ಸದೃಶ ವಿಶಾಲ ವಿವಿಧ ವಿಭವೋದಯನಂ ಪ್ರಗತ ಗುಣಗಣನನರಿಬಲ ವಿಘಟನನಂ ಕಂಡನಣುವನಾ ರಾಘನಂ
--------------
ಶ್ರೀವಿಜಯ
ಸಕ್ಕದಮುಂ ಪಾಗದಮುಮ ದುಕ್ಕುಂ ಬಗೆದಂತೆ ಸಮಱೆ ಪೇೞಲ್ ಮುನ್ನಂ ನಿಕ್ಕುವಮೊಳವಪ್ಪುದಱೆ ತಕ್ಕಂತವಱವಱೆ ಲಕ್ಷ್ಯಮುಂ ಲಕ್ಷಣಮುಂ
--------------
ಶ್ರೀವಿಜಯ
ಸತತಂ ದಕ್ಷಿಣ ಮಾರ್ಗೋ ದಿತೋಕ್ತಿಭೇದಕ ಗುಣಂ ಸ್ವಭಾವಾಖ್ಯಾನಂ ವಿ [ತ] ತೊತ್ತರ ಮಾರ್ಗಗತಂ ಪ್ರತೀತ ವಕ್ರೋಕ್ತಿಕೃತಮನಲ್ಪವಿಕಲ್ಪಂ
--------------
ಶ್ರೀವಿಜಯ
ಸತತೋದಯನಪ್ರತಿಹತ ಗತಿತೀವ್ರಂ ತದ್ದಿನಾಧಿನಾಥನುಮಸ್ತಂ ಗತನಾದನಂತೆ ನಿಯತ ಪ್ರತೀತಿಯಂ ಕಳೆಯಲಕ್ಕುಮೇ ವ್ಯಾಪಕಮಂ ಸಕಲವ್ಯಾಪಿ
--------------
ಶ್ರೀವಿಜಯ
ಸರಸಿಜಬಾಂಧವನಸ್ತಾಂ ತರಗತನಾಗಿರೆ ಸರೋಜಿನೀವನಮಾದಂ ಕೊರಗುತ್ತೆ ಮುಗಿಗುಮೀಶ್ವರ ವಿರಹದೆ ಶೋಕಾಕುಲಂ ವಿಶೇಷಾಪ್ತಜನಂ ವಿಶೇಷಪ್ರಕಾಶಕಂ
--------------
ಶ್ರೀವಿಜಯ