ಒಟ್ಟು 191 ಕಡೆಗಳಲ್ಲಿ , 1 ಕವಿಗಳು , 157 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪೞಿಗೆ ಮೇಣ್ ಪೊಗೞ್ಗಿ ಮೇಣ್ ನೆವಮಿಲ್ಲದೊಡಿಂತು ಕೈ ಗೞಿಯೆ ಬಗ್ಗಿಸುಗೆ ಮೇಣವರೆಲ್ಲರುಮಂತುಮಾ ನುೞಿವೆನಲ್ಲೆನೆನಿತಾದೊಡಮೆಂಬುದು ಚೆಲ್ವ ಪಾಂ ಗೞಿಯ [ದ]೦ತಿದನಿಂತಿರೆ ಪೇೞ್ಗಿ ವಿಕಲ್ಪಮಂ (ಗೀತಿಕೆ)
--------------
ಶ್ರೀವಿಜಯ
ಬಗೆದಿಂಗಿತಬೇಷ್ಟಾಕಾ ರಗತಂಗಳಿನಂತರಂಗದೊಳ್ ಮರೆಸಿದುದಂ ಮಿಗೆ ಸೂಚಿಸುವುದು ಸೂಕ್ಷ್ಮಾ ನುಗತಾಳಂಕಾರಮಿಂತು ತದುದಾಹರಣಂ
--------------
ಶ್ರೀವಿಜಯ
ಬಗೆದು ಮಾರ್ಗದ್ವಿತಯಗತಿಗಳಂ ಪ್ರಗುಣಗುಣಗಣೋದಯರ್ಕಳ್ ವಿತರ್ಕದಿಂ ಸೊಗಯಿಸುವಂತು ವಚನರಚನೆಯಿಂ ನೆಗೞ್ದಿರೆ ಬೆರಸಿ ಪೇೞ್ಗಿ ರಸವಿಶೇಷದೊಳ್ (ವೃತ್ತ)
--------------
ಶ್ರೀವಿಜಯ
ಬಗೆದು ಮೇಣ್ ಪರಮ ಧರ್ಮಮನ ೞ್ತಿಯಿನನ್ವಯ ಪ್ರಗಣಿತಾಭ್ಯುದಯ ಮೋಕ್ಷ ಸುಖಾಶ್ರಯ ಹೇತುವಂ ನೆಗೞಿ ಮೇಣುದಿತ ನಿರ್ಮಳಕೀರ್ತಿವಿತಾನಮಂ ಜಗದಗಾಧ ವಿವರೋದರ ದೀಪವಿಕಲ್ಪಮಂ
--------------
ಶ್ರೀವಿಜಯ
ಬುಧಗುಣಗಣನಾತೀತಾಂತರಂ ಶಬ್ದತತ್ತ್ವಾಂ ಬುಧಿವಿವಿಧವಿಧಾನಾಲಂಕ್ರಿಯಾವೀ[ಚಿಮಾಲಾ] ವಿಧುರಗತಿ ವಿಲೋಡ್ಯಂ ತಳ್ತು ನಿಲ್ತಪ್ಪುದಾವಾ ಗಧಿಪವಚನಮಾಲಾಪಾವನೀಯಂ ಗ[ಭೀರಂ]
--------------
ಶ್ರೀವಿಜಯ
ಬೆರೆಸಿರೆ ಕನ್ನಡದೊಳ್ ಬಂ ಧುರಮಾಗದು ಕಾವ್ಯರಚನೆ ಪೇೞ್ಡೊಡೆ ಪೀನಂ ಪರುಷತರಮಕ್ಕುಮೊತ್ತುಂ ಗರಡೆಯ ಮದ್ದಳೆಯ ಜರ್ಝರ ಧ್ವನಿಗಳವೋಲ್
--------------
ಶ್ರೀವಿಜಯ
ಬೇಱಿವೇಱಿ ನಿಲೆ ಕಾರಕದೊಳ್ ಕ್ರಿಯೆ ತಳ್ತು ಮು ತೋಱಿ ಪೇೞ್ದವಗುಣಂ ಗುಣರೂಪದೆ ಪೊರ್ದುಗುಂ ಸಾಱುಗಾನೆಯವರೆಲ್ಲರುಮಂ ನೃಪ [ತಾ] ನೆ ಮ ತ್ತೇಱು [ವಂ] ಪಣಿದೊಡಾನೆಯನೆಂಬು [ದ] ದೂಷಿತಂ
--------------
ಶ್ರೀವಿಜಯ
ಭಾವಮೆಂಬುದಕ್ಕುಂ ಕವಿಗಳಾ ಭಾವಿಸಿ ಮನದ ಬಗೆಯೊಂದಿದರ್ಥಂ ಕೇವಲಮದೞೊಳಳಂಕೃತಿ ಭಾವಿಕಮೆಂಬುದಕ್ಕುಂ ನೃಪತುಂಗದೇವಮತದಿಂ
--------------
ಶ್ರೀವಿಜಯ
ಭಾವಿಸಿ ಸಮಸ್ತವಸ್ತು ವಿ ಭಾವಿತ ಜಾತಿಕ್ರಿಯಾಗುಣದ್ರವ್ಯಸ್ವಾ ಭಾವಿಕ ಗುಣಮಂ ಪೇೞ್ವುದು ಕೇವಲಮಾ ಜಾತಿಯೆಂಬ ಸದಳಂಕಾರಂ
--------------
ಶ್ರೀವಿಜಯ
ಮದಕರಿಯೋ ಘನಸಮಯಾಂ ಬುದಮೋ ಘನಮಲ್ತು ನೆಗೞ್ವುದದಱೊಳ್ ಸಪ್ತ ಚ್ಛದಗಂಧಸುರಭಿ ಪದುಳಂ ಮದಕರಿಯೆನೆ ನೆನೆಗೆ ಸಂಶಯಾಕ್ಷೇಪಮಕಂ ಸಂಶಯಾಕ್ಷೇಪ
--------------
ಶ್ರೀವಿಜಯ
ಮದಮಾನಮಾಯಭಯಲೋಭವಿಷಾದಹರ್ಷಾ ಭ್ಯುದಿತಾಂತರಂಗರಿಪುವರ್ಗ ಜಯಾವತಾರಂ ವಿದಿತಸ್ಪಧೀ ವಿಭವ ಭಾವಿತ ವಿಶ್ವಲೋಕಂ ಬುಧರ್ಗೋತು ಕಾವನನುನೀತಗೃಹೀತವಾಕ್ಯಂ
--------------
ಶ್ರೀವಿಜಯ
ಮನೆಗಿಂದು ಬರ್ಕುಮೆಂದಾ ನನೇಕತರವಸ್ತುವಾಹನಾದಿಯನೊಸೆದಿಂ ಬನೆ ಪಸರಿಸಿ ಕುಡಲಿರ್ದೆಂ ಜನೇಶನಿಂತೇಕೆ ಕೞಿದು ಪೋದನೊ ಪೇೞಿ
--------------
ಶ್ರೀವಿಜಯ
ಮಾತುಗಳಾವುವಾನುಮುಪವರ್ಣಿತ ಮಾರ್ಗಯುತಪ್ರಯೋಗ ಸಂ ಜಾತವಿಭಾಗದಿಂ ನೆಗೞ್ದ ಕನ್ನಡದೊಳ್ ಗುಣಮಂ ತಗುಳ್ಚುಗುಂ ನೀತಿನಿರಂತರಾನುಗತ ವೃತ್ತಿ ವಿಕಲ್ಪಿತಮಂ ತದೀಯ ನಿ ರ್ಣೀತಿಯನೀತೆಱತ್ತು ತಱೆಸಲ್ಗೆ ಬುಧೋತ್ತಮರುಕ್ತಿಪೂರ್ವಕಂ
--------------
ಶ್ರೀವಿಜಯ
ಮಾನಧನಾ ಪೊಗೞಿಸಲೇಂ ದಾನಿಯೆ ನೀನುಂತೆ ನಿನ್ನ ಕಸವರಮೆಂದುಂ ದೀನಾನಾಥರ ಕೆಯ್ಯದು ದಾನಿಯದೆಂತೆಂಬುದಿಂತು ಹೇತ್ವಾಕ್ಷೇಪಂ ಹೇತ್ವಾಕ್ಷೇಪ
--------------
ಶ್ರೀವಿಜಯ
ಮಾನಿಯುಮುದಾರಚರಿತನು ಮಾನತರಿಪುನಿಕರನುಂ ಮನಸ್ವಿಯುಮಂತಾ ಮಾನಸರನಾರುಮಂ ಮನ ಕೇನುಂ ಮುಟ್ಟಲ್ಲದಂತು ಬಗೆವುದು ದೋಷಂ
--------------
ಶ್ರೀವಿಜಯ