ಒಟ್ಟು 191 ಕಡೆಗಳಲ್ಲಿ , 1 ಕವಿಗಳು , 145 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪುರುಷೋತ್ತಮರಾರ್ ನಿನ್ನ ನ್ನರುದಾ [ರರ] ರಾತಿಸಮಿತಿಯಂ ಕೊಂದಿರ್ದುಂ ಸುರಸುಂದರಿ ಲೀಲಾಲಸ ಪರಿರಂಭಾರಂಭ ಸುರತ ಸುಖದೊಳ್ ನಿಱೆಪರ್
--------------
ಶ್ರೀವಿಜಯ
ಪುಳಕಿತ ಕಪೋಳಫಳಕಂ ವಿಳಸಿತ ಮದಿರಾರುಣೇಕ್ಷಣಂ ಸ್ಫುರಿತೋಷ್ಠಂ ಕೆಳದೀ ನಿನ್ನ ಮುಖಂ ತಳ ಮಳಗೊಳಿಸುಗುಮಿಂತು ನಿಭೃತ ಶೃಂಗಾರರಸಂ ಶೃಂಗಾರ
--------------
ಶ್ರೀವಿಜಯ
ಪೊಡವಿಪತಿ ಗೊರವನೆನೆ ಪೇ ೞ್ಪಡೆ ಯದುವದೆಕರಿಸಿ ಕಬ್ಬಿಗರ್ದೂೞಿನೆಯುಂ ಹಡುಮಸುಮೞಿಸೆಟ್ಟಿಸು ಗೆಂ ಮುಡಿಯೊಳಮಾರ್ಗೆಂದು ನುಡಿವ ಪೞಗನ್ನಡಂ
--------------
ಶ್ರೀವಿಜಯ
ಪೊಲ್ಲಮೆಯುಂ ಗುಣಮುಂ ತಮ ಗಲ್ಲದೆ ಪುದುವಲ್ಲ ಮತ್ತೆ ತನಗುಂ ಪೆಱರ್ಗಂ ನಿಲ್ಲದೆ ಜನಮುಂತಾಗಿಯು ಮೆಲ್ಲಂ ಮುನಿಸೊಸಗೆವೆರಸು ಪೞಿಗುಂ ಪೊಗೞ್ಗುಂ
--------------
ಶ್ರೀವಿಜಯ
ಪ್ರಣತಾರಿ ಘಟಿತಮುಕ್ತಾ ಮಣಿಗಣಮುತ್ತಂಸದಿಂ ಕೞಲ್ತುದಿರೆ ಸಭಾಂ ಗಣಮೊಪ್ಪೆ ವೀರನಾರಾ ಯಣನಾ ತಾರಕಿತನಭದವೋಲ್ ಸೊಗಯಿಸುಗುಂ
--------------
ಶ್ರೀವಿಜಯ
ಪ್ರಾಸಾನುಪ್ರಾಸಾಂತ ಪ್ರಾಸಂಗಳ್ ಮೂಱುಮತಿಶಯಂಗಳ್ ಪ್ರಾಸಾ ಭಾಸಂಗಳುೞಿರಿದ ಮೂಱು೦ ಭಾಸುರ ನೃಪತುಂಗದೇವ ವಿದಿತ ಕ್ರಮದಿಂ (ಗೀತಿಕೆ)
--------------
ಶ್ರೀವಿಜಯ
ಪೞಿಗೆ ಮೇಣ್ ಪೊಗೞ್ಗಿ ಮೇಣ್ ನೆವಮಿಲ್ಲದೊಡಿಂತು ಕೈ ಗೞಿಯೆ ಬಗ್ಗಿಸುಗೆ ಮೇಣವರೆಲ್ಲರುಮಂತುಮಾ ನುೞಿವೆನಲ್ಲೆನೆನಿತಾದೊಡಮೆಂಬುದು ಚೆಲ್ವ ಪಾಂ ಗೞಿಯ [ದ]೦ತಿದನಿಂತಿರೆ ಪೇೞ್ಗಿ ವಿಕಲ್ಪಮಂ (ಗೀತಿಕೆ)
--------------
ಶ್ರೀವಿಜಯ
ಬಗೆದರ್ಥಮನಱಿಪದೆ ಮೆ ಲ್ಲಗೆ ತಿರ್ದುನ ಬಗೆಯನದಱ ನೆವದಿಂ ಪೆಱತಂ ನಿಗದಿಸುವುದು ಪರ್ಯಾಯೋ ಕ್ತಗತಾಳಂಕಾರಮದಱ ಪಾಂಗಿಂತಕ್ಕುಂ
--------------
ಶ್ರೀವಿಜಯ
ಬಗೆದಿಂಗಿತಬೇಷ್ಟಾಕಾ ರಗತಂಗಳಿನಂತರಂಗದೊಳ್ ಮರೆಸಿದುದಂ ಮಿಗೆ ಸೂಚಿಸುವುದು ಸೂಕ್ಷ್ಮಾ ನುಗತಾಳಂಕಾರಮಿಂತು ತದುದಾಹರಣಂ
--------------
ಶ್ರೀವಿಜಯ
ಬಗೆದು ಮಾರ್ಗದ್ವಿತಯಗತಿಗಳಂ ಪ್ರಗುಣಗುಣಗಣೋದಯರ್ಕಳ್ ವಿತರ್ಕದಿಂ ಸೊಗಯಿಸುವಂತು ವಚನರಚನೆಯಿಂ ನೆಗೞ್ದಿರೆ ಬೆರಸಿ ಪೇೞ್ಗಿ ರಸವಿಶೇಷದೊಳ್ (ವೃತ್ತ)
--------------
ಶ್ರೀವಿಜಯ
ಬಗೆದು ಮೇಣ್ ಪರಮ ಧರ್ಮಮನ ೞ್ತಿಯಿನನ್ವಯ ಪ್ರಗಣಿತಾಭ್ಯುದಯ ಮೋಕ್ಷ ಸುಖಾಶ್ರಯ ಹೇತುವಂ ನೆಗೞಿ ಮೇಣುದಿತ ನಿರ್ಮಳಕೀರ್ತಿವಿತಾನಮಂ ಜಗದಗಾಧ ವಿವರೋದರ ದೀಪವಿಕಲ್ಪಮಂ
--------------
ಶ್ರೀವಿಜಯ
ಬಗೆಬಗೆದು ಕೇಳ್ದು ಬುಧರೊಲ ವೊಗೆದಿರೆ ಹೃದಯದೊಳೆ ತಾಳ್ದ ಮಣಿಹಾರಂಬೋಲ್ ಸೊಗಯಿಸುವ ವಚನವಿರಚನೆ ನೆಗೞ್ಗುಂ ಭಾವಿಸುವೊಡದಱ ಪೆಂಪತಿಸುಲಭಂ
--------------
ಶ್ರೀವಿಜಯ
ಬರಿಪೆನಮೋಘಮಿಂದು ಪವನಾಂತರದಲ್ಲಿಗೆ ನಲ್ಲನಂ ತಗು ಳ್ದಿರಿಪೆನನಾರತಂ ಸುರತರಾಗನಿರೂಪಣ ಕಾರಣಂಗಳಂ ತರಿಪೆನನಾಕುಳಂ ಮನದಲಂಪಿನೊಳಾ ಮದನೋಪಮಾನನೊಳ್ ನೆರೆವೆನಭಂಗದೆಂಬ ವಚನಂಗಳಿವುತ್ತರಮಾರ್ಗವರ್ತಿಗಳ್
--------------
ಶ್ರೀವಿಜಯ
ಬರಿಸುವೆನಿಂದು ನಂದನವನಾಂತರದಲ್ಲಿಗೆ ಕಾಂತನಂ ಸಮಂ ತಿರಿಸುವೆನಂತನಂ [ಗ] ಸುಖಸಂಗತ ಮಂಗಳಕಾರಣಂಗಳಂ ತರಿಸುವೆನಾಂ ಮನೋನಯನವಲ್ಲಭನೊಳ್ ಮನದೊಂದಲಂಪಿನಿಂ ನೆರೆವೆನಮೋಘಮೆಂಬುದಿದು ದಕ್ಷಿಣಮಾರ್ಗವಿಶೇಷಭಾಷಿತಂ
--------------
ಶ್ರೀವಿಜಯ
ಬೆರಸಿರೆ ಮುಂ ಸಂಯೋಗಾ ಕ್ಷರಂಗಳೇಕಸ್ವರಂಗಳಿಂ ಸುಪ್ರಾಸಂ ನೆರೆದು ವಿಪರ್ಯಾಸಕ್ರಮ ಮಿರೆ ಸತತಮ ಶಾಂತಪೂರ್ವಮಕ್ಕುಂ ಪ್ರಾಸಂ
--------------
ಶ್ರೀವಿಜಯ