ಒಟ್ಟು 618 ಕಡೆಗಳಲ್ಲಿ , 1 ಕವಿಗಳು , 344 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕುಱಿತು ಸಮುಚ್ಚಯದಾ ಬೞಿ ವಿಕಲ್ಪದಾ ತೆಱದೊಳೆ ದೋಷಮುಮನಂತೆ ಗುಣಮುಮಂ ಕಿಱೆದಱೊಳಱೆಯೆ ಪೇೞ್ದಿನಿಂತೆ ಪೆಱವುಮನೀ ಕುಱೆಪನೆ ಕುಱೆಮಾಡಿ ಪೇೞ್ಗಿ ಕಬ್ಬಮಂ (ವೃತ್ತ)
--------------
ಶ್ರೀವಿಜಯ
ಕುಱೆತವರಲ್ಲದೆ ಮತ್ತಂ ಪೆಱರುಂ ತಂತಮ್ಮ ನುಡಿಯೊಳೆಲ್ಲರ್ ಜಾಣರ್ ಕಿಱುವಕ್ಕಳುಮಾ ಮೂಗರು ಮಱೆಪಲ್ಕಱೆವರ್ ವಿವೇಕಮಂ ಮಾತುಗಳಂ
--------------
ಶ್ರೀವಿಜಯ
ಕುಲಗಿರಿಯಯ್ ಗೌರವದಿಂ ನೆಲನಯ್ ಸೈರಣೆಯಿನಿಂದುವಯ್ ಶಾಂತಿಯಿನಾ ಜಲಿನಿಧಿಯಯ್ ಗುಣ್ಪಿಂದೆಂ ದಲಸದೆ ಪೇೞ್ಗಿಂತು ಹೇತುರೂಪಕ ವಿಧಿಯಂ ಹೇತುರೂಪಕಂ
--------------
ಶ್ರೀವಿಜಯ
ಕುಲಜನುಮಲ್ಲಂ ನಣ್ಪಿನ ಬಲಮುಂ ತನಗಿಲ್ಲ ಕಣ್ಗಮೇಳಿದನಾರೊಳ್ ನೆಲಸಿರನೆಲ್ಲಿಯುಮ ವನಂ ಚಲವೆಂದುಂ ಪತ್ತುವಿಡದದೊಂದುಂಟು ಗುಣಂ
--------------
ಶ್ರೀವಿಜಯ
ಕುಲಜಾತಿದೇಶವಿಶದಂ ವಿನಯೋಪಚಾರಂ ನಿಲಯೈಕವೃತ್ತಿ ಕೃತಿಬಿಂಬಿತ ಸತ್ತ್ವಸಾರಂ ವಿಲಸದ್ಗುಣಾಗುಣ ವಿವರ್ತಿ ಗುರೂಪದೇಶಾ ಮಲಿನಾವಬೋಧ ವಿದಿತಾಖಿಳಚೋದ್ಯ ವೃಂದಂ
--------------
ಶ್ರೀವಿಜಯ
ಕುಸುಮಂ ಸ್ವಿತಮಳಿ ನಯನಂ ಕಿಸಲಯಮಧರಂ ಭುಜದ್ವಯಂ ವಿಟಪಂ ಮ ತ್ತಸುವಲ್ಲಭೆ ಲತೆಯೆಂಬುದಿ ದಸಮಸ್ತಂ ವ್ಯಸ್ತರೂಪಕಕ್ರಮಮಖಿಲಂ ವ್ಯಸ್ತರೂಪಕಂ
--------------
ಶ್ರೀವಿಜಯ
ಕುಸುಮಂಗಳೆಂಬ ಮಾತದು ಪುಸಿ ದಹನಮಯಂಗಳಂಬುಗಳ್ ಮನಸಿಜನಾ ಜಸಮೞಿಯೆ ಸುಡುವುವೆರ್ದೆಯಂ ಬಿಸಿಯವಿವೆಂದಿಂತೆ ಪೇೞಿ ಧರ್ಮಾಪೋಹಂ
--------------
ಶ್ರೀವಿಜಯ
ಕೃತಕೃತ್ಯಮಲ್ಲನಪ್ರತಿ ಹತವಿಕ್ರಮನೊಸೆದು ವೀರನಾರಾಯಣನ ಪ್ಪತಿಶಯಧವಳಂ ನಮಗೀ ಗತರ್ಕಿತೋಪಸ್ಥಿತ ಪ್ರತಾಪೋದಯಮಂ
--------------
ಶ್ರೀವಿಜಯ
ಕೆಳದಿಯನಭಿಮತಮುಮನೊ ರ್ಬುಳಿಗೂಡೆ ವಿದಗ್ಧೆ ಸುರತಸೇವನಮಂ ಮೊ ಕ್ಕಳಮವರ್ಗೆ ಮಾಡಲೆಂದಾ ಗಳೆ ಪೋಗಲ್ ಬಗೆದು ನುಡಿದಳಿಂತೀ ಮಾತಂ
--------------
ಶ್ರೀವಿಜಯ
ಕೇಡಡಸಿದಂದು ಬಗೆ(ಯು)೦ ಕೂಡದು ಕೂಡಿದುದುಮೞಿದು ವಿಪರೀತಮುಮಂ ಮಾಡುಗುಮದಱಿ೦ ಕರ್ಮ ಕ್ಕೋಡಿ ಬರ್ದುಂಕಲ್ಕಮಱಿವರಾರ್ ಭೂತಳದೊಳ್
--------------
ಶ್ರೀವಿಜಯ
ಕೇಡಡಸಿದೊಡಂ ಬಗೆ (ಯು)೦ ಕೂಡದು ಕೂಡಿದುದುಮಱೆದು ವಿಪರೀತಮುಮಂ ಮಾಡುಗುಮದಱೆ೦ ಕರ್ಮ ಕ್ಕೋಡಿ ಬರ್ದುಂಕಲ್ಕೆ ಕಲ್ತರಾರ್ ಬಿನ್ನಣಮಂ
--------------
ಶ್ರೀವಿಜಯ
ಕ್ಷಿತಿಪತಿಯಂ ಬರಿಸಿ ಜಗ ನ್ನುತನಂ ಸಂತೈಸಿ ಕುಶಲವಾರ್ತಾಂತರಮಂ ಮಿತವಚನಂ ಬೆಸಗೊಂಡತಿ ವಿತೀರ್ಣಮುದನಾದನಾತನೆಂಬುದು ಮಾರ್ಗಂ
--------------
ಶ್ರೀವಿಜಯ
ಗಣಿದದೊಳೊಂದಿ ಬರ್ಪ ಪದಮೊಂದೆಡೆಗೊಂ [ಡು] ವಿಶೇಷ್ಯಮುಂ ವಿಶೇ ಷಣಮುಮನೊಂದಲೀಯದಿರೆಯುಂ ಮಿಗೆ ಕಾರಕ ದೋಷ [ಮಲ್ತದು] ಪ್ರಣುತ ಪದಾಂತರೀಕರಣಮಂತದೆ ತಾಣದೊಳಾದೊಡಂ ಮಹಾ ಗುಣಮನೆ ತರ್ಕುಮೇಕ ಬಹುಭೇದವಿಕಲ್ಪಮನಲ್ಲಿ ನೋಡಲಿಂ
--------------
ಶ್ರೀವಿಜಯ
ಗುಣಜಾತ್ಯಾದಿಗಳಿಂ ದೊರೆ ಯೆಣಿಸುವುದು ಸಹೋಕ್ತಿಯೆಂಬುದಕ್ಕುಂ ನಾನಾ ಗಣನಾವಿಶೇಷಮಾಗೀ ಗಣಿದದಿನಾರೈದುಕೊಳ್ಗೆ ಲಕ್ಷ್ಯಮನದಱಾ
--------------
ಶ್ರೀವಿಜಯ
ಗುಣದೊಳಮಱಿ ಪುವುದಿನಿಸವ ಗುಣಮಂ ದೋಷದೊಳಮಿನಿಸು ಗುಣಮಂ ತಂದಿ ರ್ದೆಣಿಸುವುದು ಲೇಶಮೆಂಬುದು ಗಣಿದದಿನಿಂತಕ್ಕುಮದಱ ಲಕ್ಷ್ಯವಿಭಾಗಂ
--------------
ಶ್ರೀವಿಜಯ