ಒಟ್ಟು 238 ಕಡೆಗಳಲ್ಲಿ , 1 ಕವಿಗಳು , 163 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನೆಲಸಿ ಕಿವಿಯೊಳ್ ಮದಾಯತ ವಿಲೋಕದೊಳ್ ಪೊಳೆವುದೊಳ್ಪಿನೆಂದೀ ಕರ್ಣೋ ತ್ಪಲಮುಮನಾಕ್ರಮಿಸುವುದಿಂದು ವಿಲಾಸಿನೀ ನಿನ್ನ ಲೋಲಲೋಚನಯುಗಳಂ
--------------
ಶ್ರೀವಿಜಯ
ನೋಡುವೆನಾ ಮಹೀಪತಿಯ ನರ್ಥಿಗಣಾರ್ಥಿತ ಕಲ್ಪವೃಕ್ಷನಂ ಬೇಡುವೆನರ್ಥ ಸಂಚಯಮನೆಂಬುದಿದುತ್ತರ ಮಾರ್ಗವಾಚಕಂ ನೀಡುಮುದಾತ್ತಚಾರುಗುಣನಂ ಮನದೊಳ್ ನೆಱೆನೋೞ್ಪಿನೞ್ತಿಯೊಳ್ ಕೂಡಿರವೇೞ್ಪುನೆಂಬುದಿದು ದಕ್ಷಿಣಮಾರ್ಗವಿಚಕ್ಷಣೋದಿತಂ
--------------
ಶ್ರೀವಿಜಯ
ಪದಪಾದ ಸಮಸ್ತಾರ್ಧ [ಗತ] ಭೇದ ಚತುಷ್ಟಯಂ ವಿದಿತಾಳಂಕ್ರಿಯಾಧಾರಂ ಮೊದಲ್ ಪೇ[ೞ್ವೊಡೆ] ದುಷ್ಕರಂ ಮುನ್ನಂ ತನ್ನಂ ತಾನೆ ತಾನೇಕೆನ್ನಂ ಕೆನ್ನಂ ನಿರಂತರಂ ಭಿನ್ನಂ ಬಂದಿಪ್ಪನಂತಿನ್ನುಂ ತನ್ನಿಂ ತನಗಮೇವಳೊ
--------------
ಶ್ರೀವಿಜಯ
ಪರಚಕ್ರಭೂಪರಟ್ಟಿದ ಕರಿಗಳ್ ಬಿಡುತಪ್ಪ ಮದದ ಪೊನಲಿಂದೆತ್ತಂ ನರಲೋಕಚಂದ್ರನಾ ಮಂ ದಿರದೊಳಗೊಳಗೆಲ್ಲ ಕಾಲಮುಂ ಕೆಸಱಕ್ಕುಂ
--------------
ಶ್ರೀವಿಜಯ
ಪರಪಕ್ಷಮುಳ್ಳಿನಂ ತನ ಗಿರವುಬ್ಬಸಮದಱಿನೞಿವುದದನೇಗೆಯ್ದುಂ ಪರೆದ ಪುಡಿಯೆಲ್ಲಮಂ ನೀರ್ ನೆರೆದು ಕೆಸರ್ಮಾಡದನ್ನೆಗಂ ನೆಲಸುಗುಮೇ
--------------
ಶ್ರೀವಿಜಯ
ಪರಿಣತಗುಣರಿರ್ ಕಾಂತೋ ತ್ಕರರಿರ್ ನಿಜಸೌಖ್ಯರಿರ್ ನಿಶಾನಾಯಕನುಂ ನರಪಾ ನೀನುಂ ದೋಷಾ ಕರನಾ ಶಶಿ ನೀನುದಾರಗುಣಸಮುದಯನಯ್
--------------
ಶ್ರೀವಿಜಯ
ಪರಿವಾರ ವಾರವನಿತಾ ಪರಿವೃತನರಮನೆಯೊಳರಸನಂಬರತಳದೊಳ್ ವರ ತಾರಾಪರಿಗತ ಶಶ ಧರನಂತೊಪ್ಪಿರೆ ವಿನೋದದಿಂ ಜನಿತಮುದಂ
--------------
ಶ್ರೀವಿಜಯ
ಪರಿವಾರ ವಾರವನಿತಾ ಪರಿವೃತನರಮನೆಯೊಳರಸನಂಬರತಳದೊಳ್ ವರ ತಾರಾಪರಿಗತ ಶಶ ಧರನಂತೊಪ್ಪಿರೆ ವಿನೋದದಿಂದುರುಮುದದಿಂ
--------------
ಶ್ರೀವಿಜಯ
ಪರುಷಾಳಾಪಮುಮತಿ ನಿ ಷ್ಠುರ ವೀಕ್ಷಣಮುಖವಿಕಾರಮುಂ ಮಱಸಿರೆಯುಂ ತರಳಾಪಾಂಗಮುಮಾಕೆಯ ದರಹಸಿತಮುಮಱಿಯೆ ಪೇೞ್ಗುಮೆಱಕಮನೆರ್ದೆಯೊಳ್
--------------
ಶ್ರೀವಿಜಯ
ಪಲವುಮನೊಡಗೂಡಿರೆ ಸ ಯ್ತಲಸದೆ ಪೇಱ್ವೆಡೆಯೊಳಂ ಸ್ವಪಾದಾಂತದೊಳಂ ಪಲವಾಱನೆಯ ವಿಭಕ್ತಿಯೊ ಳಲಘೂಚ್ಛಾರಣೆ ಯಥೇಷ್ಟಮುೞಿದೆಡೆಗಳೊಳಂ
--------------
ಶ್ರೀವಿಜಯ
ಪುಳಕಿತ ಕಪೋಳಫಳಕಂ ವಿಳಸಿತ ಮದಿರಾರುಣೇಕ್ಷಣಂ ಸ್ಫುರಿತೋಷ್ಠಂ ಕೆಳದೀ ನಿನ್ನ ಮುಖಂ ತಳ ಮಳಗೊಳಿಸುಗುಮಿಂತು ನಿಭೃತ ಶೃಂಗಾರರಸಂ ಶೃಂಗಾರ
--------------
ಶ್ರೀವಿಜಯ
ಪೊಡವಿಪತಿ ಗೊರವನೆನೆ ಪೇ ೞ್ಪಡೆ ಯದುವದೆಕರಿಸಿ ಕಬ್ಬಿಗರ್ದೂೞಿನೆಯುಂ ಹಡುಮಸುಮೞಿಸೆಟ್ಟಿಸು ಗೆಂ ಮುಡಿಯೊಳಮಾರ್ಗೆಂದು ನುಡಿವ ಪೞಗನ್ನಡಂ
--------------
ಶ್ರೀವಿಜಯ
ಪೊಲ್ಲಮೆಯುಂ ಗುಣಮುಂ ತಮ ಗಲ್ಲದೆ ಪುದುವಲ್ಲ ಮತ್ತೆ ತನಗುಂ ಪೆಱರ್ಗಂ ನಿಲ್ಲದೆ ಜನಮುಂತಾಗಿಯು ಮೆಲ್ಲಂ ಮುನಿಸೊಸಗೆವೆರಸು ಪೞಿಗುಂ ಪೊಗೞ್ಗುಂ
--------------
ಶ್ರೀವಿಜಯ
ಪ್ರಣತಾರಿ ಘಟಿತಮುಕ್ತಾ ಮಣಿಗಣಮುತ್ತಂಸದಿಂ ಕೞಲ್ತುದಿರೆ ಸಭಾಂ ಗಣಮೊಪ್ಪೆ ವೀರನಾರಾ ಯಣನಾ ತಾರಕಿತನಭದವೋಲ್ ಸೊಗಯಿಸುಗುಂ
--------------
ಶ್ರೀವಿಜಯ
ಪ್ರತಿಭಾವತ್ವಮುಮಕೃತಕ ಚತುರತೆಯುಂ ಪರಮಬುಧಜನೋಪಾಸನಮುಂ ಶ್ರುತಪರಿಚಯಮುಂ ತರ್ಕುಂ ಪ್ರತೀತಿಯಂ ವಾಗ್ವಿದಗ್ಧತಾ ನಿಪುಣತೆಯೊಳ್
--------------
ಶ್ರೀವಿಜಯ