ಒಟ್ಟು 120 ಕಡೆಗಳಲ್ಲಿ , 1 ಕವಿಗಳು , 108 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ವಿಮಳೋದಯ ನಾಗಾರ್ಜುನ ಸಮೇತ ಜಯಬಂಧು ದುರ್ವಿನೀತಾದಿಗಳೀ ಕ್ರಮದೊಳ್ ನೆಗೞ್ಚಿ ಗದ್ಯಾ ಶ್ರಮಪದ ಗುರುತಾ ಪ್ರತೀತಿಯಂ ಕೆಯ್ಕೊಂಡರ್
--------------
ಶ್ರೀವಿಜಯ
ವಿಲಸಿತ ಭವದಭ್ಯಾಗಮ ಜಲಧಾರೆಗಳೇನುಮುೞಿಯದಂತು ಮದಂತ ರ್ಮಲಮಂ ಕರ್ಚಿದೊಡಾನೀ ನೆಲಕೆಲ್ಲಂ ಪಾವನೀಯ ಚರಿತನೆನಾದೆಂ
--------------
ಶ್ರೀವಿಜಯ
ವೀರರಸಮ ಸ್ಫುಟೋಕ್ತಿಯಿನುದಾರತಮಂ ಕರುಣಾರಸಂ ಮೃದೂ ಚ್ಚಾರಣೆಯಿಂದಮದ್ಭುತರಸಂ ನಿಬಿಡೋಕ್ತಿಗಳಿಂದಮಲ್ತೆ ಶೃಂ ಗಾರರಸಂ ಸಮಂತು ಸುಕುಮಾರತರೋಕ್ತಿಗಳಿಂ ಪ್ರಸನ್ನಗಂ ಭೀರತರೋಕ್ತಿಯಿಂ ಪ್ರಕಟಮಕ್ಕೆ ರಸಂ ಸತತಂ ಪ್ರಶಾಂತ [ದಾ]೦
--------------
ಶ್ರೀವಿಜಯ
ವ್ಯತಿರೇಕವಿಕಲ್ಪಮಿದೆಂ ದತಿಶಯಧವಳೋಪದೇಶಮಾರ್ಗಕ್ರಮದಿಂ ದತಿನಿಪುಣರಱಿದುಕೊಳ್ಗನು ಮಿತಿಯಿಂದಾಕ್ಷೇಪಮೆಂಬಳಂಕಾರಮುಮಂ
--------------
ಶ್ರೀವಿಜಯ
ಶರದಾಗಮದೊಳ್ ಕಳಹಂ ಸರವಮ ಪೆರ್ಚಿತ್ತು ಕಿವಿಗೆ ಸೊಗಯಿಸಿ ಪೀನಂ ವಿರಳತರಮಾಯ್ತು ಬರ್ಹಿಣ ವಿರಾವಮುರುಮುದವಿರಾಮ ವಿರಸ ವಿರಾಗಂ
--------------
ಶ್ರೀವಿಜಯ
ಸಂತಂ ಬಾಳ್ವುದು ಮೀಱದಾ ನರಪನೊಳ್ ಸೌಜನ್ಯಲಕ್ಷ್ಮೀಮದಾಂ ಧಂ ತನ್ನಿಶ್ಚಯ ಮೆಚ್ಚಿನೀಂ ಪರಗುಣೌದಾರ್ಯಾಭಿಮಾನಂಗಳಿಂ ಪಿಂತಂ ನೋಡದೆ ಪಾೞಿ ಗೆಟ್ಟ ೞಿ ಪಿನಿಂ ಬಾೞ್ವಂತೆ ಬಾೞ್ದಯ್ಯನಾ ಸಂತಂ ತಾಂ ಪಸತದನೞ್ತಿ ಪೆೞಿಗುಂ ದಾನಂಗಳಂ ಭೂಪನಾ|| (ಚಕ್ರಶ್ಲೋಕ)
--------------
ಶ್ರೀವಿಜಯ
ಸಂಧಿಗಳುಂ ಕೆಲವೆಡೆಯೊಳ್ ಬಂದು ವಿರೂಪಂಗಳಾಗಿ ಸಮನಿಸಿ ಕವಿತಾ ಬಂಧನದೊಳಾಗೆ ದೋಷಾ ಬಂಧುಗೆ ಶಶಲಕ್ಷ್ಮದಂತೆ ಕಱಿಯಂ ತರ್ಕ್ಕುಂ
--------------
ಶ್ರೀವಿಜಯ
ಸಂಬೋಧನೆ ದೀರ್ಘೋಕ್ತಿಯೊ ಳಿಂಬಾಗಿರೆ ಬರ್ಕುಮದನೆ ಪಲವೆಡೆಗಳೊಳೆಂ ದುಂ ಬಲ್ಲವರಿಡದಿರ್ಕಾ ದಂ ಬಾಯೞಿದೊಳ್ವವೋಲ್ ಕರಂ ವಿರಸತರಂ
--------------
ಶ್ರೀವಿಜಯ
ಸತತಂ ಭುಜಂಗಭೋಗಾ ಶ್ರಿತೆ ನಿನ್ನ ಕಳತ್ರಮೀ ಧರಾವಧು ಮತ್ತೆಂ ತತಿಶಯದೆ ಮಹಾಪುರುಷ ವ್ರತಮಂ ತಾಳ್ದುವಳುದಾರಚರಿತಕ್ರಮದಿಂ
--------------
ಶ್ರೀವಿಜಯ
ಸಮ ಮಧುರ ನಿಬಿಡ ಕಾಂತ ಸು ಕುಮಾರ ಸುಸಮಾಹಿತ ಪ್ರಸನ್ನೋದಾರ ಪ್ರಮಿತ ಗ್ರಾಮ್ಯೋಜಸ್ವಿ ಕ್ರಮದಿಂ ದಶಭೇದಮಲ್ಲಿ ದಕ್ಷಿಣ ಮಾರ್ಗಂ
--------------
ಶ್ರೀವಿಜಯ
ಸಮನಿಸೆ ಸಾಪೇಕ್ಷಮುಮಾ ಸಮಾಸಮುಂ ಪೆಱುಗುಮೆಲ್ಲಿಯಾನುಂ ಗಮಕಂ ಕ್ರಮಮದಱೊಳೆಲ್ಲಮೆನಲಿನಿ ತು ಮಾರ್ಗದೊಳ್ ಸಮಱುಗಿಂತು ಕವಿವೃಷಭರ್ಕಳ್
--------------
ಶ್ರೀವಿಜಯ
ಸಮಱುಗೆಯಿಲ್ಲದ ಮುಱಕಮು ಮಮರ್ದಿರೆ ಕೆಯ್ಗೆಯ್ಯದೊಪ್ಪುವಂದಮುಮವಳಾ ನೆವಮಿಲ್ಲದ ದರಹಸಮುಂ ಸಮದಾಲಸಲಲಿತಗಮನಮುಂ ಸೊಗಯಿಸುಗುಂ
--------------
ಶ್ರೀವಿಜಯ
ಸಮಱುಸಮಾಸ ಪದಂಗಳ ನಮರ್ದಿರೆ ಸಯ್ತಾಗಿ ಬಗೆದು ಪೇೞ್ದೊಡದಕ್ಕುಂ ಕ್ರಮದೋಜೋಲಕ್ಷಣಮು ತ್ತಮಮಿದು ಗದ್ಯಕ್ಕಲಂಕ್ರಿಯಾನುಸಮೇತಂ
--------------
ಶ್ರೀವಿಜಯ
ಸಮುದಿತ ಕುಸುಮಾಮೋದೋದಯೋದ್ಯಾನಲೀಲಾ ಕ್ರಮವಿಹಿತ ಜಲಕ್ರೀಡಾವಿನೋದಾದಿನೀತಂ ಪ್ರಮದಮದ ದನಮಾದ್ಯದ್ಯೌವನೋದ್ಯಾನ ರಾಮಂ ರಮಣರಣಿತ ಗೋಷ್ಠೀಬಂಧ ಸಂಧಿಪ್ರಬಂಧಂ
--------------
ಶ್ರೀವಿಜಯ
ಸರಸೀಜಂ ಸರಜಂ ಶಶ ಧರ ಬಿಂಬಮದತಿ ಕಳಂಕಿತಂ ನಿನ್ನ ಮೊಗಂ ನಿರುಪಮಮಾಗಿಯುಮವಱೊಳ್ ದೊರೆಯೆಂಬುದನಱಿದುಕೊಳ್ಗೆ ನಿಂದೋಪಮೆಯಂ ನಿಂದೋಪಮೆ
--------------
ಶ್ರೀವಿಜಯ