ಒಟ್ಟು 299 ಕಡೆಗಳಲ್ಲಿ , 1 ಕವಿಗಳು , 203 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಿನ್ನಂತೆ ಸುರೇಶ್ವರನು ತ್ಪನ್ನಮಹೈಶ್ವರ್ಯನೆಂಬುದುಂ ಜಲನಿಧಿ ತಾಂ ಸನ್ನುತ ಗಭೀರನೆಂಬುದು ಮಿನ್ನದು ಹೀನಾಧಿಕಪ್ರಶಂಸಾನುಗುಣಂ
--------------
ಶ್ರೀವಿಜಯ
ನಿಯಮಿತಾ [ನ್ವಯ] ಜಾತಿ ಗುಣಕ್ರಿಯಾ ಶ್ರಯಮಿದಾಯವಧಾರಣಲಕ್ಷಣಂ ನಯ ನಿಯೋಗ ವಿಕಲ್ಪನೆಯೊಳ್ ವಿಶಂ ಕೆಯ ವಿಶೇಷ ಗುಣಕ್ಕುಪಲಕ್ಷಣಂ
--------------
ಶ್ರೀವಿಜಯ
ನಿಯಮಿತಾಕ್ಷರದಿಂದುಪಮಾಪ್ರತಿ ಜ್ಞೆಯನೆ ತಿರ್ದುವುದೞ್ತಿಯಿನಿರ್ದುಮಾ ಬಯಕೆ ತೀರದ ಕಾರಣದಿಂ ವಿಪ ರ್ಯಯಮಿದಭ್ಯುಪಮೋಕ್ತ್ಯುಪದೂಷಣಂ
--------------
ಶ್ರೀವಿಜಯ
ನಿರವದ್ಯಾನ್ವಯ ಮುದ್ಘಮುದ್ಧತವ ಹಾಕ್ಷೀ ರಾಬ್ಧಿಡಿಂಡೀರ ಪಾಂ ಡುರಮಾಕ್ರಾಂತ ಸುಶೈಲ ಸಾಗರಧರಾಶಾಚಕ್ರವಾಳಾಂಬರಂ ಪರಮ ಶ್ರೀವಿಜಯ ಪ್ರಭೂತಿಜ ಯಶಂಸ್ತ್ರೀಬಾಲವೃದ್ಧಾಹಿತಂ ಪರಮಾನಂದಿತಲೋಕಮೊಪ್ಪೆ ನೆಲೆಗೊಳ್ಗಾಚಂದ್ರತಾರಂಬರಂ
--------------
ಶ್ರೀವಿಜಯ
ನಿಲ್ತೋಳಂ ಬರ್ಪುದು ಸ ಯ್ತಲ್ತೂರುಂ (ದೂರಮೆನೆತುಡಗರ್ಪೂರಂ) ಕಲ್ತುಲ್ಲಿಂದೋಡುವಮೆಂ ಬಲ್ತುಣ್ಣಿಂ ತಂದ ಕೂೞನೂ ಸಂಗಮದೊಳ್
--------------
ಶ್ರೀವಿಜಯ
ನೀಮಿರ್ವರುಮನ್ನೆಗಮಿಂ ತೀ ಮಾೞ್ಕಿಯೊಳಿನಿಸು ಪೊೞ್ತು ನುಡಿವುತ್ತಿರಿಮಾ ನಾಮೋದ ಕುಸುಮಸಮಿತಿಯ ನಾ ಮರಗಳೊಳಾಯ್ದು ಕೊಯ್ದುಮಿಲ್ಲಿಗೆ ಬರ್ಪೆಂ
--------------
ಶ್ರೀವಿಜಯ
ನುಡಿಗೆಲ್ಲಂ ಸಲ್ಲದ ಕ ನ್ನಡದೊಳ್ ಚತ್ತಾಣಮುಂ ಬೆದಂಡೆಯುಮೆಂದೀ ಗಡಿನ ನೆಗೞ್ತೆಯ ಕಬ್ಬದೊ ಳೊಡಂಬಡಂ ಮಾಡಿದರ್ ಪುರತಾನ ಕವಿಗಳ್
--------------
ಶ್ರೀವಿಜಯ
ನುಡಿಯಂ ಛಂದದೊಳೊಂದಿರೆ ತೊಡರ್ಚಲಱೆ ವಾತನಾತನಿಂದಂ ಜಾಣಂ ತಡೆಯದೆ ಮಹಾಧ್ವಕೃತಿಗಳ ನೊಡರಿಸಲಾರ್ಪಾತನೆಲ್ಲರಿಂದಂ ಬಲ್ಲಂ
--------------
ಶ್ರೀವಿಜಯ
ನುಡಿಸಿದನೆನ್ನಂ ನಲ್ಲಂ ಬಿಡಿಸದನೆನ್ನಂತರಂಗದನುತಾಪಮನೊ ಲ್ದುಡಿಸಿದನೊಳ್ಳುಳ್ಳುಡೆಯಂ ತುಡಿಸಿದನೆನಗಱಿ ಕೆಯಪ್ಪ ಮಣಿಭೂಷಣಮಂ
--------------
ಶ್ರೀವಿಜಯ
ನೃಪನ ನರಪಾಲತನಯನ ನೃಪವಧುವರ್ ನೆರೆದು ಸುಖದಿನಿರೆ ಕೈಕೊಂಡ ತ್ತಪರಿಮಿತರಾಗಮೆರ್ದೆಯಂ ನೃಪತಿ ಸನಾಭಿಗಳ ಬಂಧುಜನದಾ ಕೆಳೆಯಾ
--------------
ಶ್ರೀವಿಜಯ
ನೃಪನಾ ನೃಪನಂದನನಾ ನೃಪವಧುವರ್ ನೆರೆದು ಸುಖದೊಳಿರೆ ಕೈಕೊಂಡ ತ್ತಪರಿಮಿತರಾಗಮೆರ್ದೆಯಂ ನೃಪಬಾಂಧವರಾ ಸುಮಿತ್ರರಾ ಪರಿಜನದಾ
--------------
ಶ್ರೀವಿಜಯ
ನೆಗೞ್ದರ್ದ ಕನ್ನಡಂಗಳೊ ಳಗಣಿತ ಗುಣ ವಿದಿತ ಸಂಸ್ಕೃತತೋಕ್ತಕ್ರಮಮಂ ಬಗೆದೊಂದು ಮಾಡಿ ಪೇೞ್ದೊಡೆ ಸೊಗಯಿಸುಗಂ ಕಾವ್ಯಬಂಧಮೆಂದುಮನಿಂದ್ಯಂ
--------------
ಶ್ರೀವಿಜಯ
ನೆಟ್ಟನೆ ತಾಂ ಸವಿಯೊಳೊಂದಿರೆ ಭೋಜನಮಾ ನಟ್ಟು ಬಡಿಸು ನಾಮಱಿಯದೆನಸುಂ ಸವಿಯಂ ಪುಟ್ಟಿದಾರುಮಱಿಯದದಱ ಪೆಸರೊ ಳಟ್ಟುದಂ ಪೇೞಿ ಕೇಳ್ದೆನೆಂದಱಿಯೆಂ (ಅಸ್ಪಷ್ಟಾಕ್ಷರಂ)
--------------
ಶ್ರೀವಿಜಯ
ನೆನೆದ ಮುಗಿಲ್ಗಳುಂ ಸುರಿವ ಪೆರ್ಮೞೆಯುಂ ಮಿಗೆ ನುಣ್ಣನಪ್ಪ ಕೇ ಕಿಗಳ ಸರಂಗಳುಂ ಪೊಳೆವ ಮಿಂಚುಗಳುಂ ಕರಮುಚ್ಚಮಪ್ಪ ಬೆ ಟ್ಟುಗಳ ತಟಂಗಳಿಂ ಸುರಿದ ನಿರ್ಜ್ಝರಮುಂ ಪೊಸ ಕಾರೊಳಿಂತು ಬೆ ಳ್ಪಗೆ ಪಥಿಕಾಂಗನಾಜನಮನಂಜಿಸುವಂತಿರೆ ತೋಱೆ ಸುತ್ತಲುಂ (ಗೀತಿಕೆ)
--------------
ಶ್ರೀವಿಜಯ
ನೆನೆದಿರುಳುಂ ಪಗಲುಂ ನಿ ನ್ನನೆ ಪೀನಮೊಱಲ್ದು ಮಱುಗಿ ಕಾತರಿಸುತ್ತುಂ ಮನದೊಳ್ ಸೈರಿಸಲಾಱಿ೦ ನಿನಗೆನಸುಂ ಕರುಣಮಿಲ್ಲ ಮರವಾನಿಸನಯ್
--------------
ಶ್ರೀವಿಜಯ