ಒಟ್ಟು 191 ಕಡೆಗಳಲ್ಲಿ , 1 ಕವಿಗಳು , 157 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪರಪುರುಷ ಸೇವನಾಕೃತ ಸುರತವಿಕಾರಂಗಳೆಲ್ಲಮಂ ನಿಜಪತಿಯೊಳ್ ನೆರೆದಾಗಳೆ ಮಱಿಯಲ್ಬಗೆ ದಿರವದು ನಗಿಸಿತ್ತು ಪೀನಮಭಿಸಾರಿಕೆಯಾ ಹಾಸ್ಯ
--------------
ಶ್ರೀವಿಜಯ
ಪರಮ ಶ್ರೀ ವಿಜಯಕವೀ ಶ್ವರ ಪಂಡಿತ ಚಂದ್ರ ಲೋಕಪಾಲಾದಿಗಳಾ ನಿರತಿಶಯ ವಸ್ತುವಿಸ್ತರ ವಿರಚನೆ ಲಕ್ಷ್ಯಂ ತದಾದ್ಯಕಾವ್ಯಕ್ಕೆಂದುಂ
--------------
ಶ್ರೀವಿಜಯ
ಪರವಸದ ಬಗೆಯೊಳೊಂದಂ ದೊರೆಕೊಳಿಸುವುದೞಿಗತರ್ಕಿತೋಪಸ್ಥಾನಂ ನಿರುತಂ ಸಮಾಹಿತಾಳಂ ಕರಣಾಂತರಮಕ್ಕುಮಿಂತು ತದುದಾಹರಣಂ
--------------
ಶ್ರೀವಿಜಯ
ಪರಸುವೆನೆನ್ನದಾಂ ಪರಪೆನೆಂಬುದಿದಾಗದು ಚಿತ್ತನಾಥನೊಳ್ ಬೆರಸುವೆನೆನ್ನದಾಂ ಬೆರಪೆನೆಂಬುದಿದಾಗದು ಮಾರ್ಗಯುಗ್ಮದೊಳ್ ನಿರತಿಶಯಾನುಭಾವಭವನಪ್ಪ ಮಹಾನೃಪತುಂಗ ದೇವನಾ ದರದೊಳೆ ಪೇೞ್ದ ಮಾರ್ಗಗತಿಯಿಂ ತಱೆಸಲ್ಗಿದನಿಂತೆ ಕಬ್ಬಿಗರ್
--------------
ಶ್ರೀವಿಜಯ
ಪರಿವೃತ ನೃಪತುಂಗದೇವಮಾರ್ಗಾಂ ತರಗತಬೋಧ ವಿಶೇಷಯಾನಪಾತ್ರಂ ಪರಮಗುಣ ಪರೀತಕಾವ್ಯರತ್ನಾ ಕರದುರುಪಾರಮನೆಯ್ದುಗುಂ ಮಹಾತ್ಮಂ
--------------
ಶ್ರೀವಿಜಯ
ಪಾರ್ಥಿವಲೋಕನಪ್ಪನೆಂದುಂ ಕವಿ ವರ್ಣಿಕುಂ ಸಾರ್ಥಚಯಂ ನುತಸರಸ್ವತೀ ತೀರ್ಥಾವತಾರಮಾರ್ಗನೆಸಕಂ ಸಾರ್ಥಮಪ್ಪಂತು ಚಿಂತಿತಕಾರ್ಯತತ್ವರಂ
--------------
ಶ್ರೀವಿಜಯ
ಪುರುಷಂಬೋಲೀಕೆ ಕರಂ ಪುರುಷಾಕೃತಿಯೆಂಬುದಿಂತು ನಾನಾ ಲಿಂಗಂ ನಿರುತಂ ಪ್ರಾಣಂಗಳವೋಲ್ ನರಪಂ ಪ್ರಿಯನೆಂಬುದಿಂತು ನಾನಾ ವಚನಂ
--------------
ಶ್ರೀವಿಜಯ
ಪುಳಕಿತ ಕಪೋಳಫಳಕಂ ವಿಳಸಿತ ಮದಿರಾರುಣೇಕ್ಷಣಂ ಸ್ಫುರಿತೋಷ್ಠಂ ಕೆಳದೀ ನಿನ್ನ ಮುಖಂ ತಳ ಮಳಗೊಳಿಸುಗುಮಿಂತು ನಿಭೃತ ಶೃಂಗಾರರಸಂ ಶೃಂಗಾರ
--------------
ಶ್ರೀವಿಜಯ
ಪೊಳೆವ ಮಿಂಚುಗಳಂತಿರೆ ಕೇತುಗಳ್ ಜಳದ ವೃಂದದವೋಲಿದೆ ಹಸ್ತಿಗಳ್ ಗಳಿತಧಾರೆಗಳಿಂತಿರೆ ಪತ್ತಿಗಳ್ ಬಳಸಿ ಕಾರ್ಗೆಣೆಯಾಯ್ತು ಮಹಾಹವಂ
--------------
ಶ್ರೀವಿಜಯ
ಪ್ರಣತಾರಿ ಘಟಿತಮುಕ್ತಾ ಮಣಿಗಣಮುತ್ತಂಸದಿಂ ಕೞಲ್ತುದಿರೆ ಸಭಾಂ ಗಣಮೊಪ್ಪೆ ವೀರನಾರಾ ಯಣನಾ ತಾರಕಿತನಭದವೋಲ್ ಸೊಗಯಿಸುಗುಂ
--------------
ಶ್ರೀವಿಜಯ
ಪ್ರತಿಪದಾರ್ಥತತ್ತ್ವಭೇದದೊಳ್ ಪ್ರತಿಷೇಧಮಂ ನೆಗೞ್ಗುಮನಿತೆ ಮಾೞ್ಕಿಯಿಂ ದತಿಶಯಾಕ್ಷೇಪಗಣನಾವ್ಯತಿ ಗತಿ ನೃಪತುಂಗದೇವಮಾರ್ಗದೊಳ್
--------------
ಶ್ರೀವಿಜಯ
ಪ್ರತಿಭಾವತ್ವಮುಮಕೃತಕ ಚತುರತೆಯುಂ ಪರಮಬುಧಜನೋಪಾಸನಮುಂ ಶ್ರುತಪರಿಚಯಮುಂ ತರ್ಕುಂ ಪ್ರತೀತಿಯಂ ವಾಗ್ವಿದಗ್ಧತಾ ನಿಪುಣತೆಯೊಳ್
--------------
ಶ್ರೀವಿಜಯ
ಪ್ರಸ್ತುತಮಲ್ಲದುದನೆ ಮಿಗೆ ವಿಸ್ತಾರಿಸಿ ನೆಗೞಿ ಪೇೞ್ದೊಡಕ್ಕುಂ ಮತ್ತ ಪ್ರಸ್ತುತಮೆಂಬುದಳಂಕೃತಿ ವಿಸ್ತರಮಿಂತಕ್ಕುಮದಱ ಲಕ್ಷ್ಯವಿಭಾಗಂ
--------------
ಶ್ರೀವಿಜಯ
ಪ್ರಾಸಾನುಪ್ರಾಸಾಂತ ಪ್ರಾಸಂಗಳ್ ಮೂಱುಮತಿಶಯಂಗಳ್ ಪ್ರಾಸಾ ಭಾಸಂಗಳುೞಿರಿದ ಮೂಱು೦ ಭಾಸುರ ನೃಪತುಂಗದೇವ ವಿದಿತ ಕ್ರಮದಿಂ (ಗೀತಿಕೆ)
--------------
ಶ್ರೀವಿಜಯ
ಪ್ರಿಯಕುಶಲಪೂರ್ವಕೋಚಿತ ನಯವಿನಯೋದಾರ ರುಚಿರ ವಚನಪ್ರಾಯಂ ಪ್ರಿಯತರಮೆಂಬುದು ಸಕಳ ಕ್ರಿಯಾನುಗಮಿತಾರ್ಥಮಿಂತು ಟಿದುದಾಹರಣಂ
--------------
ಶ್ರೀವಿಜಯ