ಒಟ್ಟು 231 ಕಡೆಗಳಲ್ಲಿ , 1 ಕವಿಗಳು , 174 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನೆಲಸಿದ ಕಾವ್ಯಂ ಕಾವ್ಯ ಕ್ಕೆ ಲಕ್ಷಣಂ ಸತತಮೆಂದೆ ಪೞಗನ್ನಡಮಂ ಪೊಲಗೆಡಿಸಿ ನುಡಿವರಾಗಮ ಬಲಹೀನರ್ ದೇಸಿಯಲ್ಲದೆಂದಱೆದಿರ್ದುಂ
--------------
ಶ್ರೀವಿಜಯ
ಪದನಱೆದು ನುಡಿಯಲುಂ ನುಡಿ ದುದನಱೆದಾರಯಲುಮಾರ್ಪರಾ ನಾಡವರ್ಗಳ್ ಚದುರರ್ ನಿಜದಿಂ ಕುಱೆತೋ ದದೆಯುಂ ಕಾವ್ಯಪ್ರಯೋಗ ಪರಿಣತಮತಿಗಳ್
--------------
ಶ್ರೀವಿಜಯ
ಪದಪದಾ ವಿಯುತ ನಿಯಮಾ ಸ್ಪದಮಲ್ಲದಳಂಕೃತಂ ಕ್ರಿಯಾಕಾರಕದೊಳ್ ಪುದಿದರ್ಥವ್ಯಕ್ತಿಯನೀ ವುದುಗದ್ಯಮನೇಕ ರೂಪಭೇದ ವಿವಿಕ್ತಂ
--------------
ಶ್ರೀವಿಜಯ
ಪದೆದುದಯಿಸಲೆಂದುಂ ಕಾ ಲದೊಳಲ್ಲದುದಾರತೇಜನರ್ಕನುಮಲ್ಲಂ ಸದುದಿತ ಗುಣನದಱಿ೦ ನಯ ವಿದನಪ್ಪಂ ಕಾಲಮಂ ನೆರಂ ತೋರ್ಕೆ ನೃಪಂ
--------------
ಶ್ರೀವಿಜಯ
ಪರಚಕ್ರಭೂಪರಟ್ಟಿದ ಕರಿಗಳ್ ಬಿಡುತಪ್ಪ ಮದದ ಪೊನಲಿಂದೆತ್ತಂ ನರಲೋಕಚಂದ್ರನಾ ಮಂ ದಿರದೊಳಗೊಳಗೆಲ್ಲ ಕಾಲಮುಂ ಕೆಸಱಕ್ಕುಂ
--------------
ಶ್ರೀವಿಜಯ
ಪರಪುರುಷ ಸೇವನಾಕೃತ ಸುರತವಿಕಾರಂಗಳೆಲ್ಲಮಂ ನಿಜಪತಿಯೊಳ್ ನೆರೆದಾಗಳೆ ಮಱಿಯಲ್ಬಗೆ ದಿರವದು ನಗಿಸಿತ್ತು ಪೀನಮಭಿಸಾರಿಕೆಯಾ ಹಾಸ್ಯ
--------------
ಶ್ರೀವಿಜಯ
ಪರಮ ಶ್ರೀ ವಿಜಯಕವೀ ಶ್ವರ ಪಂಡಿತ ಚಂದ್ರ ಲೋಕಪಾಲಾದಿಗಳಾ ನಿರತಿಶಯ ವಸ್ತುವಿಸ್ತರ ವಿರಚನೆ ಲಕ್ಷ್ಯಂ ತದಾದ್ಯಕಾವ್ಯಕ್ಕೆಂದುಂ
--------------
ಶ್ರೀವಿಜಯ
ಪರಮ ಶ್ರೀಕೃತಿವಧುವಾ ಶರೀರಶೋಭಾಕರಂಗಳಪ್ಪ ಗುಣಂಗಳ್ ನಿರತಿಶಯಾಲಂಕಾರ ಪ್ರರೂಪಿತಂಗಳ್ ಪುರಾಣ ಕವಿ ವಿದಿತಂಗಳ್
--------------
ಶ್ರೀವಿಜಯ
ಪರಮಕಾರುಣಿಕನಪ್ಪನಪಾಕೃತದೋಷನಾ ದರಮನಾಗಿಸುವನಪ್ಪನಶೇಷಜನಂಗಳೊಳ್ ಪರಗುಣಾಸಹನನಲ್ಲದನಾತ್ಮಗುಣೋದಯಾಂ ತರಸರೂಪನ ಖಿಲಾಗಮ ಪಾರಪರಾಯಣಂ
--------------
ಶ್ರೀವಿಜಯ
ಪರಮಶ್ರೀನಿಳಯಂ ಶಶ ಧರಕಾಂತಿವಿರೋಧಿರೋಚಿ ವದನಂ ಸರಸಿರುಹದವೋಲೆಂಬುದು ನಿರುತಂ ಶ್ಲೇಷೋಪಮಾವಿಕಲ್ಪವಿಶೇಷಂ ಶ್ಲೇಷೋಪಮೆ
--------------
ಶ್ರೀವಿಜಯ
ಪರಮಸುಖಪದಶ್ರೀಧರ್ಮಕಾಮಾರ್ಥಮೋಕ್ಷ ಸ್ಥಿರವಿಷಯ ವಿಶೇಷಾಖ್ಯಾನ ತತ್ತ್ವಂ ಪುರ ಜನಪದ ಶೈಲಾದಿತ್ಯ ಚಂದ್ರೋದಯಾಸ್ತಾಂ ತರ ಸಮೃಗಗಣವ್ಯಾವರ್ಣನಾನಿರ್ಣಯಾರ್ಥಂ
--------------
ಶ್ರೀವಿಜಯ
ಪರಮಾನುಭಾವನಭಿಮಾನಿ ವಿನೋದಶೀಲಂ ಪರನತ್ಯುದಾರಚರಿತೋದಯನೇಕರೂಪಂ ಸರಸಾಶ್ರಯಪ್ರವರಮೂರ್ತಿ ಪರೋ ಪಕಾರಂ ನಿರತಂ ಗುಣೋದಯನಕಾರಣಧುರ್ಯಮಿತ್ರಂ
--------------
ಶ್ರೀವಿಜಯ
ಪರಮಾಲಂಕಾರೋಚಿತ ವಿರಚನೆಗಳ್ ನೆಗೞ್ಗುಮಾರ ವದನೋದರದೊಳ್ ನೆರಮಕ್ಕಾ ಪರಮ ಕವೀ ಶ್ವರರೆಮಗೀ ಕೃತಿಯೊಳಕೃತಕಾಚಾರಪರರ್
--------------
ಶ್ರೀವಿಜಯ
ಪರಿಣತಗುಣರಿರ್ ಕಾಂತೋ ತ್ಕರರಿರ್ ನಿಜಸೌಖ್ಯರಿರ್ ನಿಶಾನಾಯಕನುಂ ನರಪಾ ನೀನುಂ ದೋಷಾ ಕರನಾ ಶಶಿ ನೀನುದಾರಗುಣಸಮುದಯನಯ್
--------------
ಶ್ರೀವಿಜಯ
ಪರಿವೃತ ನೃಪತುಂಗದೇವಮಾರ್ಗಾಂ ತರಗತಬೋಧ ವಿಶೇಷಯಾನಪಾತ್ರಂ ಪರಮಗುಣ ಪರೀತಕಾವ್ಯರತ್ನಾ ಕರದುರುಪಾರಮನೆಯ್ದುಗುಂ ಮಹಾತ್ಮಂ
--------------
ಶ್ರೀವಿಜಯ