ಒಟ್ಟು 1590 ಕಡೆಗಳಲ್ಲಿ , 1 ಕವಿಗಳು , 511 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಉಕ್ತವಿಚಾರಂ ನ್ಯಾಯನಿ ಯುಕ್ತಂ ಕ್ರಮವಿನ್ನದಕ್ಕೆ ಬಾರದುವೆಲ್ಲಂ ವ್ಯಕ್ತಂ ನ್ಯಾಯವಿರುದ್ಧಂ ಪ್ರೋಕ್ತ ಮಹಾದೋಷಮಂತು ಪೇೞಲ್ಕೆಂತುಂ
--------------
ಶ್ರೀವಿಜಯ
ಉತ್ಸವದಿಂದೆ ಹಾಸ್ಯರಸಮಾ ಮಧುರೋಕ್ತಿಗಳಿಂದಮಲ್ತೆ ಭೀ ಭತ್ಸರಸಾಂತರಂ ಶಿಥಿಲಬಂಧನದಿಂ ಸತತಂ ಭಯಾನಕೋ ದ್ಯತ್ಸುರಸಂ ಕರಂ ವಿಷಯಬಂಧನದಿಂ ನೃಪತುಂಗದೇವ ಮಾ ರ್ಗೋತ್ಸವಮೂರ್ಜಿತೋಕ್ತಿಗಳಿನಕ್ಕತಿರೌದ್ರರಸಂ ರಸಾವಹಂ
--------------
ಶ್ರೀವಿಜಯ
ಉದಯಾರೂಢಂ ಕಾಂತ್ಯಾ ಸ್ಪದನನುರಕ್ತಾತ್ಮಮಂಡಳಂಕುಮುದಕರಂ ಮೃದುತರಕರಂಗಳಿಂದತಿ ಮುದಮಂ ಲೋಕಕ್ಕೆ ಪಡೆಗುಮಿಂತೀ ರಾಜಂ
--------------
ಶ್ರೀವಿಜಯ
ಉಪಮಾ ಗುಣದೋಷಂಗಳ್ ಹೀನಾಧಿಕಗುಣದೋಷ ವಿ ತಾನಮುಮಂ ಲಿಂಗವಚನ ಭೇದಂಗಳುಮಂ ಮಾನಧನರೞಿದು ಪೇಳ್ಗನು ಮಾನಕ್ಕವಿರುದ್ಧಮಾಗೆ ಲಕ್ಷ್ಯಾಗಮದೊಳ್
--------------
ಶ್ರೀವಿಜಯ
ಉಪಮಿತ ಭೇದೋಕ್ತಿಕ್ರಮ ಮಪರಿಮಿತಾಖ್ಯಾಕೃತಿ ಪ್ರಯೋಗಾನುಗತಂ ನೃಪತುಂಗ ದೇವಮತದಿಂ ದುಪಮಾ ಭೇದಂಗಳಿಂದೆ ತಱಿಸಲ್ಗಱಿವಂ
--------------
ಶ್ರೀವಿಜಯ
ಉಪಮಿತಾಕ್ಷರಮೆಲ್ಲಿಯುಮೇಕರೂ ಪ ಪರಿವೃತ್ತಿಯೊಳೊಂದಿದ ಮಾೞ್ಕಿಯಿಂ ದುಪಚಿತ ಕ್ರಮಮಕ್ಕುಮಿದೆಂದುಮ ಭ್ಯುಪ [ಮಿತ] ಕ್ಕೆ ಗುಣೋದಯ ಕಾರಣಂ
--------------
ಶ್ರೀವಿಜಯ
ಉರುಪಿತ್ತಶೋಕಪಲ್ಲವ ವಿರಚಿತಶಯನೀಯಮೆನ್ನ ಮೆಯ್ಯಂ ಪೀನಂ ಸ್ಫುರದನಲಪ್ರತಿನಿಧಿ ತ ತ್ಸ್ವರೂಪಗುಣಮಕ್ಕುಮೆಂಬುದೆಂದುಂ ಯುಕ್ತಂ ಯುಕ್ತಾರ್ಥಂ
--------------
ಶ್ರೀವಿಜಯ
ಎಂದಿಂತೀ ಗ್ರಾಮ್ಯೋಕ್ತಿಯೊ ಳೊಂದಾಗಿಸದದನೆ ಪೇೞ್ವುದಿಂತೀಸ್ಥಿತಿಯೊಳ್ ಕಂದರ್ಪಂ ಚಲದೆನ್ನೊಳ್ ನಿಂದಂ ಮುನಿಸಿಲ್ಲ ನಿನ್ನೊಳಾತಂಗಿನಿಸುಂ
--------------
ಶ್ರೀವಿಜಯ
ಎಂದಿಂತು ಪೇೞ್ದ ಮಾಳ್ಕೆಯೊ ಳೊಂದುವುದುಮನೊಂದಿ ಬಾರದುದುಮಂ ಪೀನಂ ಸಂದೆಯಮಿಲ್ಲದೆ ಸಲೆ ತಱೆ ಸಂದೋಸ [ರಿ] ಸುವುದು ಕಾವ್ಯರಚನಾಕ್ರಮದೊಳ್
--------------
ಶ್ರೀವಿಜಯ
ಎಂದಿಂತು ಪೇೞ್ದ ಮಾೞ್ಕಿಯೊ ಳೊಂದುವುದೋಜಸ್ವಿತಾ ಗುಣಂ ಕೈಕೊಳೆಯುಂ ಸುಂದರಮಾಗದು ಕವಿಪದ ಮೆಂದುಂ ವ್ಯತ್ಯಯದಿನಿಡುವೊಡದು ಸುಕರತರಂ
--------------
ಶ್ರೀವಿಜಯ
ಎಂದಿಂತು ಸಮಾಸೋಕ್ತಿಯೊ ಳೊಂದಾಗಿರೆ ಸಕ್ಕದಂಗಳುಂ ಕನ್ನಡಮುಂ ಸುಂದರಮಕ್ಕುಂ ಕವಿಪದ ವೊಂದಿದವೋಲ್ ಕನಕರಚನೆಯೊಳ್ ಮಣಿನಿಕರಂ
--------------
ಶ್ರೀವಿಜಯ
ಎಂದಿಂತು ಸಮೀಪ ಪ್ರಾ ಸಂ ದರ್ಶಿತ ಭೇದಮಾಯ್ತನುಪ್ರಾಸಮುಮಂ ಸಂಧಿಸಿದೆಣೆಯಕ್ಕರಮೊ ದೊಂದೞೊಳಳವಡಿಸಿ ಬಂದೊಡನುಗತಮಕ್ಕುಂ
--------------
ಶ್ರೀವಿಜಯ
ಎಂಬುದು ವಿನುತ ಪ್ರಾಸಂ ಸಂಬಂಧಾಕ್ಷರದೊಳೆಲ್ಲ ಮಾತ್ರೆಗಳುಂ ತ ಳ್ತಿಂಬಾಗಿ ಬೆರಸಿ ಶೋಭಾ ಡಂಬರಮಂ ಪಡೆಗುಮುಚಿತ ಕಾವ್ಯೋಕ್ತಿಗಳೊಳ್
--------------
ಶ್ರೀವಿಜಯ
ಒಂದಂ ಕ್ರಿಯಾವಿಶೇಷಣ ಮಂ ದೊರೆಕೊಳೆ ಸಯ್ತು ಪೇ[ೞ್ದಮ]ಱೊಳೆ ಪೆಱತಂ ಸಂದಿಸಿ ಪೇೞ್ದೊಡೆ ಕೃತಿಯೊಳ ಗೊಂದಿರದೆರಡಕ್ಕೆ ಬಿಟ್ಟ ಕಱುವಂ ಪೋಲ್ಗುಂ
--------------
ಶ್ರೀವಿಜಯ
ಒಂದಱ ಮಾತುಗಳಂ ಪೆಱ ತೊಂದಱೊಳಱೆದಿಟ್ಟು ಕೊಡೆ ಪೇೞ್ದೊಡದಕ್ಕುಂ ಸುಂದರತರಂ ಸಮಾಹಿತ ಮೆಂದುಂ ಮತ್ತದಱ ಲಕ್ಷ್ಯಮೀ ತೆಱನಕ್ಕುಂ
--------------
ಶ್ರೀವಿಜಯ