ಒಟ್ಟು 125 ಕಡೆಗಳಲ್ಲಿ , 1 ಕವಿಗಳು , 85 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮೊದಲ ಪದಂ ನ್ಯೂನಾಕ್ಷರ ಮದಱಿಂದೆ ಬೞಿಕ್ಕಮರ್ಧಮಧಿಕಾಕ್ಷರಮಿಂ ತಿದಱಿಂ ಛಂದೋಭಂಗಂ ಪದನಱಿದದನಿಂತು ಸಮಱಿ ಪೇೞ್ದೊಡೆ ಚೆಲ್ವಂ
--------------
ಶ್ರೀವಿಜಯ
ಯತಿಯೆಂಬುದುಸಿರ್ವ ತಾಣಂ ಕೃತಾಸ್ಪದಂ ವೃತ್ತಾಜಾತಿ ಪದ ಪದ್ಧತಿಯೊಳ್ ಸತತಂ ಛಂದೋವಿದಿತ ಪ್ರತೀತಶಾಸ್ತ್ರೋಕ್ತಮಾರ್ಗದಿಂದಱಿ ವುದದಂ
--------------
ಶ್ರೀವಿಜಯ
ಲೋಕದೊಳದಱಿ೦ ಕಾವ್ಯ ಶ್ರೀಕರಣೋದ್ಯುಕ್ತನಕ್ಕೆ ಕವಿ ತನ್ನಱೆವಂ ತಾಕಲ್ಪಾಂತಸ್ಥಾಯಿ ಶ್ರೀಕೀರ್ತಿವಧೂ ಪ್ರಧಾನವಲ್ಲಭನಕ್ಕುಂ
--------------
ಶ್ರೀವಿಜಯ
ವ್ಯತಿರೇಕವಿಕಲ್ಪಮಿದೆಂ ದತಿಶಯಧವಳೋಪದೇಶಮಾರ್ಗಕ್ರಮದಿಂ ದತಿನಿಪುಣರಱಿದುಕೊಳ್ಗನು ಮಿತಿಯಿಂದಾಕ್ಷೇಪಮೆಂಬಳಂಕಾರಮುಮಂ
--------------
ಶ್ರೀವಿಜಯ
ಸಂತಂ ಮೃಗಗಣವೃತ್ತಿಯ ನಿಂತಪ್ರಸ್ತುತಮನಱಿ ಪಿದಂ ಪರಸೇವಾ ಚಿಂತಾವಿಷಾದಿತಾಂತ ಸ್ಸ್ವಾಂತಂ ಸಂತೈಸಲೆಂದು ತನ್ನಂ ತಾನೇ
--------------
ಶ್ರೀವಿಜಯ
ಸಂಧಿಗಳುಂ ಕೆಲವೆಡೆಯೊಳ್ ಬಂದು ವಿರೂಪಂಗಳಾಗಿ ಸಮನಿಸಿ ಕವಿತಾ ಬಂಧನದೊಳಾಗೆ ದೋಷಾ ಬಂಧುಗೆ ಶಶಲಕ್ಷ್ಮದಂತೆ ಕಱಿಯಂ ತರ್ಕ್ಕುಂ
--------------
ಶ್ರೀವಿಜಯ
ಸರಸೀಜಂ ಸರಜಂ ಶಶ ಧರ ಬಿಂಬಮದತಿ ಕಳಂಕಿತಂ ನಿನ್ನ ಮೊಗಂ ನಿರುಪಮಮಾಗಿಯುಮವಱೊಳ್ ದೊರೆಯೆಂಬುದನಱಿದುಕೊಳ್ಗೆ ನಿಂದೋಪಮೆಯಂ ನಿಂದೋಪಮೆ
--------------
ಶ್ರೀವಿಜಯ
ಸುರಗಿರಿವೋಲ್ ಧೈರ್ಯದಿನಂ ಬರಮಣಿವೋಲ್ ತೇಜದಿಂ ಶಶಾಂಕಂಬೋಲ್ ಬಂ ಧುರ ಕಾಂತಿಗುಣದಿನೆಂದಿಂ ತಿರೆ ಪೇಳ್ವುದನಱಿದುಕೊಳ್ಗೆ ಹೇತೂಪಮೆಯಂ ಹೇತೊಪಮೆ
--------------
ಶ್ರೀವಿಜಯ
ಸ್ಮರನಸ್ತ್ರಮಿತಿಯದು ನಿ ರ್ಭರಮಂಗಮನುರ್ಚಿ ಪೋಗೆಯುಂ ಪೋಬೞಿಯಂ ದೊರೆಕೊಳಿಸಲಾಗದದಱಿ೦ ಶರತತಿಯಲ್ತೆಂಬುದಿಂತು ಧರ್ಮಾಪೋಹಂ ಧರ್ಮಾಪೋಹಂ
--------------
ಶ್ರೀವಿಜಯ
ಹರಿಣಧರ ಸರಸಿಜಂಗಳ್ ದೊರೆಯಲ್ಲಿವು ತನಗೆ ತಾನೆ ದೊರೆ ನಿನ್ನ ಮೊಗಂ ನಿರುಪಮಮೆಂಬುದನಱಿವುದು ನಿರುತಮಸಾಧಾರಣೋಪಮೋದಯ ವಿಧಿಯಂ ಅಸಾಧಾರಣೋಪಮೆ
--------------
ಶ್ರೀವಿಜಯ