ಒಟ್ಟು 101 ಕಡೆಗಳಲ್ಲಿ , 1 ಕವಿಗಳು , 79 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸಮಱುಸಮಾಸ ಪದಂಗಳ ನಮರ್ದಿರೆ ಸಯ್ತಾಗಿ ಬಗೆದು ಪೇೞ್ದೊಡದಕ್ಕುಂ ಕ್ರಮದೋಜೋಲಕ್ಷಣಮು ತ್ತಮಮಿದು ಗದ್ಯಕ್ಕಲಂಕ್ರಿಯಾನುಸಮೇತಂ
--------------
ಶ್ರೀವಿಜಯ
ಸಮುಚಿತ ನೃಪತುಂಗದೇವ ಮಾರ್ಗ ಕ್ರಮನಮನಾಭಿಮುಖರ್ಕಳಪ್ಪ [ರೆಲ್ಲರ್] ಕ್ರಮಸಹಿತಮಗಮ್ಯರೂಪ ಕಾ [ವ್ಯಾ] ಶ್ರಮಪದಮಂ ನಿರಪಾಯ [ದೆ] ಯ್ದಲಾರ್ಪರ್
--------------
ಶ್ರೀವಿಜಯ
ಸವಿವೊಡೆ ಮಧುರರಸಂಬೋಲ್ ಕಿವಿಗಿನಿದಾಗಿರ್ಪ ವಚನವಿರಚನೆ ಮಧುರಂ ಸವಿಳಾಸಾಳಾಪದಿನವ ರ ವಿಶೇಷ ವಿಶೇಷ್ಯಮಿಂತು ಮಾರ್ಗದ್ವಯದೊಳ್
--------------
ಶ್ರೀವಿಜಯ
ಸುಕುಮಾರತರಾಕ್ಷರಪದ ನಿಕರ ವಿಶಿಷ್ಟಪ್ರಯೋಗಗತಮಪ್ಪುದದಾ ಸುಕುಮಾರಮೆಂಬುದಕ್ಕುಂ ಪ್ರಕಟಿತಮದಱಾ ಪ್ರಯೋಗಮೀ ತೆಱನಕ್ಕುಂ
--------------
ಶ್ರೀವಿಜಯ