ಒಟ್ಟು 133 ಕಡೆಗಳಲ್ಲಿ , 1 ಕವಿಗಳು , 108 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮಗುಳ್ದುಂ ಮಗುೞ್ದಾಮಾತಂ ನೆಗಳ್ದಿರೆ ಪೇೞ್ದಾಗಳಕ್ಕುಮಾ ವ್ಯಾವೃತ್ತಿ ಸ್ವಗತಾಳಂಕಾರಂ ಬಗೆ ಗಗಾಧಮನರದಱ ತೆಱನನೀ ಕುಱಿಪುಗಳಿಂ
--------------
ಶ್ರೀವಿಜಯ
ಮನದೊಳಗಾಗಳುಂ ನಿಱೆ ಸದಾ ಮುಳಿಸಂ ಗತರಾಗ ಮೋಹನೊ ಯ್ಯನೆ ಮುನಿನಾಥನೆಂಬ ವಚನಾಂತರಮಿಂತಿದು ದಾಕ್ಷಿಣಾತ್ಯಕಂ ಮನದೊಳಗಾಗಳುಂ ನಿಱೆ ಸದೊಯ್ಯನೆ ಮೋಹಮನಂತೆ ರಾಗಮಂ ಮುನಿಸುಮನೊಲ್ಲದಂ ಮುನಿಪನೆಂಬುದಿದಕ್ಕುಮುದೀಚ್ಯವಾಚಕಂ
--------------
ಶ್ರೀವಿಜಯ
ಮಲಯಜಚರ್ಚಿತೆಯಂ ಕೇ ವಲ ಧವಳಾಭರಣೆಯಂ ದುಕೂಲಾಂಬರೆಯಂ ಕೆಲದೊಳ್ ನಿಲೆಯುಂ ಜ್ಯೋತ್ಸ್ನಾ ವಿಲಾಸದೊಳ್ ಬಗೆದೆನಿಲ್ಲ ನಲ್ಲಳನಿನಿಸಂ
--------------
ಶ್ರೀವಿಜಯ
ಮಲಯಾನಿಲನೊಯ್ಯನೆ ಪ ಣ್ತೆಲೆಯಂ ನೆಲೆಯಿಂ ಕಱಲ್ಚುಗುಂ ವಿಟಪಿಗಳೊಳ್ ವಿಲಸಿತ ಕಳಿಕಾಕುಳಕೋ ಮಲಾಂಕುರಮನಂತೆ ಪಡೆಗುಮವಱಿಡೆಯೆಡೆಯೊಳ್ ಜಾತ್ಯನುಗತ ಆದಿದೀಪಕಂ
--------------
ಶ್ರೀವಿಜಯ
ಮಸಗಿ ಬೆಸದಿರ್ದು ವಿವರಮ ನಸಿಯದಱಿಡೆವೊತ್ತಿ ಪೊಕ್ಕು ಕೆಲನಂ ಕೊರ್ಬು ತ್ತೆಸೆದು ಬಿದಿರ್ದಾ [ರ್ದೇ] ೞ್ಗೇ ೞ್ಗೆ ಸಮಂಜಸನಿಕ್ಕಿ ಮಿಕ್ಕನರಿವಾಹಿನಿಯಂ
--------------
ಶ್ರೀವಿಜಯ
ಮಾತುಗಳಾವುವಾನುಮುಪವರ್ಣಿತ ಮಾರ್ಗಯುತಪ್ರಯೋಗ ಸಂ ಜಾತವಿಭಾಗದಿಂ ನೆಗೞ್ದ ಕನ್ನಡದೊಳ್ ಗುಣಮಂ ತಗುಳ್ಚುಗುಂ ನೀತಿನಿರಂತರಾನುಗತ ವೃತ್ತಿ ವಿಕಲ್ಪಿತಮಂ ತದೀಯ ನಿ ರ್ಣೀತಿಯನೀತೆಱತ್ತು ತಱೆಸಲ್ಗೆ ಬುಧೋತ್ತಮರುಕ್ತಿಪೂರ್ವಕಂ
--------------
ಶ್ರೀವಿಜಯ
ಮಾನಧನಾ ಪೊಗೞಿಸಲೇಂ ದಾನಿಯೆ ನೀನುಂತೆ ನಿನ್ನ ಕಸವರಮೆಂದುಂ ದೀನಾನಾಥರ ಕೆಯ್ಯದು ದಾನಿಯದೆಂತೆಂಬುದಿಂತು ಹೇತ್ವಾಕ್ಷೇಪಂ ಹೇತ್ವಾಕ್ಷೇಪ
--------------
ಶ್ರೀವಿಜಯ
ಮಾನಿನಿ ಮುನ್ನಮಾಂ ನೀನೆ ನೀನಾನಿನ್ನನ ಮಾನಮೇಂ ಮಾನಮಾನಾನೆ ಮುಂ ನಂನೈಮಾನಮಾನನಮುಂ ನಿಂನಾ (ಇವು ಏಕಾಕ್ಷರದ್ವ್ಯಕ್ಷರಂಗಳ್) ಕಿಡಿಪಂ ಬಾರಗೇಮೆಯ್ಯಂ ಕಿಡಿಪಂ ಕಿಡಿಪಂತೆ ಮುಂ ಕಿಡಿಪಂ ಪೋಕುಮೇ ತಾಮುಂ ಕಿಡಿಸಲ್ಸುಡಿಸೋಲಮೇ
--------------
ಶ್ರೀವಿಜಯ
ಮಿಗೆ ರಣದೊಳ್ ಪರಿಚಿತಮಾ ದ್ವಿಗುಣಮದೋರಂತೆ ಮಟ್ಟಮಿರ್ದುದು ಮತ್ತಂ ವಿಗತವಿಕಾರಾಕಾರಂ ಸೊಗಯಿಸುಗುಂ ನಿನ್ನ ರೂಪು ಶಾಂತಾಧಾರಂ ಶಾಂತ
--------------
ಶ್ರೀವಿಜಯ
ಮುನಿ ವೀತರಾಗನೆಂದುಂ ಬನಮಂ ಸಾರ್ತಕ್ಕುಮಾವ ತೆಱದಿಂ ಪೋಪಂ ಮನಮಂಜುಗುಮಱೆ ಯದವಂ ಮುನಿಗುಂ ಪಗೆವಂಗೆ ಪಾಪಕರ್ಮಂ ಪೊಲ್ಲಂ
--------------
ಶ್ರೀವಿಜಯ
ಮುಳಿದಿರ್ದ ನಲ್ಲಳಲ್ಲಿಗೆ ತಿಳಿಪಲ್ ಪೋಪೆನ್ನ ಬಗೆಗೆ ದೊರೆಕೊಳೆ ಮತ್ತಿಂ ತೆಳವೆಱಿ ಗಗನಾಂತರದೊಳ್ ಪೊಳೆದುತ್ತೆತ್ತಮ ವಸಂತಸಮಯೋತ್ತಂಸಂ
--------------
ಶ್ರೀವಿಜಯ
ಮೃದುತರಕಪೋಲಫಳಕಂ ವದನಾಂಬುಜಮಾಯತೋನ್ನತ ಭ್ರೂಚಾಪಂ ಮುದಮಂ ಪಡೆದತ್ತೆನಗೆಂ ಬುದು ವಿಷಮಿತರೂಪವಿಷಮರೂಪಕಮಕ್ಕುಂ ವಿಷಮ ರೂಪಕಂ
--------------
ಶ್ರೀವಿಜಯ
ಮೇರೆಗಳೆದಿರೆ ವಿಶೇಷ ವಿ ಚಾರಮನಧಿಕೋಕ್ತಿಯೊಳ್ ತಗಳ್ಚುವುದಕ್ಕುಂ ಸಾರತರಮತಿಶಯಾಲಂ ಕಾರಂ ಮತ್ತದಱ ಲಕ್ಷ್ಯಮೀ ತೆಱನಕ್ಕುಂ
--------------
ಶ್ರೀವಿಜಯ
ರಾವಣನಂ ಕೊಂದು ಜಯ ಶ್ರೀವಧುವಂ ತಾಳ್ದಿ ಮುಯ್ವಿನೊಳ್ ವರ ಸೀತಾ ದೇವತೆಯ ತರ್ಪನ್ನೆಗ ಮೋವದೆ ಪುರುಷವ್ರತೋಚಿತಂ ವೀರರಸಂ ವೀರ
--------------
ಶ್ರೀವಿಜಯ
ವನರುಹದಂತೆ ಮುಖಂ ಲೋ ಚನಮೆಸೆವುತ್ಪಳದವೋಲ್ ತಳಂ ತಳಿರೆಂತೆಂ ದನುರೂಪಮಾಗಿ ಪೇೞ್ವೊಡ ದೆನಸುಂ ವಸ್ತೂಪಮಾನಮೆಂಬುದು ಪೆಸರಿಂ ವಸ್ತೂಪಮೆ
--------------
ಶ್ರೀವಿಜಯ