ಒಟ್ಟು 191 ಕಡೆಗಳಲ್ಲಿ , 1 ಕವಿಗಳು , 157 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಿಗದಿತ ಕಾವ್ಯೋಕ್ತಿಗಳೊಳ್ ನೆಗೞ್ದುವು ಮಾರ್ಗಂಗಳಿಂತುಮೆರುಡುಕ್ತಿಗಳುಂ ಬಗೆವಾಗಳೆರಡು ಮಾೞ್ಕಿಯೊ ಳೊಗೆದುವು ವಕ್ರ ಸ್ವಭಾವ ನಿಯತಿಕ್ರಮದಿಂ
--------------
ಶ್ರೀವಿಜಯ
ನಿಯತೋದ್ದೇಶಿಯುಮನುದೇ ಶಿಯುಮನನುವಿನಂತು ಪೇೞಿ ಯಾಥಾಸಂಖ್ಯಾ ಹ್ವಯಮಕ್ಕುಮಾಗಮೋಕ್ತ್ಯಾ ಶ್ರಯದಿಂ ವ್ಯತಿರೇಕಮಕ್ಕುಮಲ್ಲದುವೆಲ್ಲಂ
--------------
ಶ್ರೀವಿಜಯ
ನಿರುಪಮ ಗಂಧರ್ವಗತಿ ಸ್ವರಾದಿಕ ಕಳಾಗುಣಂ ಚತುಃಷಷ್ಟಿವಿಧಂ ದೊರೆಕೊಳ್ಳದುದೆಲ್ಲ ಕಳಾ ವಿರುದ್ಧದೋಷಂ ವಿಶಿಷ್ಟಜನತಾದೂಷ್ಯಂ
--------------
ಶ್ರೀವಿಜಯ
ನಿಲಿಸಿ ಲಘುಪದಮನದನ ಗ್ಗಲಿಸಿರೆ ಮೊತ್ತೊತ್ತಿ ಬರ್ಪ ಪದಮಂ ತುದಿಯೊಳ್ ನಿಲೆ ಪೇೞ್ದಾಗಳ್ ಕೂಸಿನ ತಲೆಯೊಳ್ ಬಿಣ್ಪೊಱಿಯನಿಟ್ಟವೋಲಸುಖಕರಂ
--------------
ಶ್ರೀವಿಜಯ
ನಿಲ್ತೋಳಂ ಬರ್ಪುದು ಸ ಯ್ತಲ್ತೂರುಂ (ದೂರಮೆನೆತುಡಗರ್ಪೂರಂ) ಕಲ್ತುಲ್ಲಿಂದೋಡುವಮೆಂ ಬಲ್ತುಣ್ಣಿಂ ತಂದ ಕೂೞನೂ ಸಂಗಮದೊಳ್
--------------
ಶ್ರೀವಿಜಯ
ನೀಮಿರ್ವರುಮನ್ನೆಗಮಿಂ ತೀ ಮಾೞ್ಕಿಯೊಳಿನಿಸು ಪೊೞ್ತು ನುಡಿವುತ್ತಿರಿಮಾ ನಾಮೋದ ಕುಸುಮಸಮಿತಿಯ ನಾ ಮರಗಳೊಳಾಯ್ದು ಕೊಯ್ದುಮಿಲ್ಲಿಗೆ ಬರ್ಪೆಂ
--------------
ಶ್ರೀವಿಜಯ
ನುಡಿಗಳೊಡಂಬಡಲ್ ಬಗೆದವೋಲ್ ಬಗೆಯಂ ಮಿಗಲೀಯದೊಂದೆ ನಾ ೞ್ನುಡಿಯ ಬೆಡಂಗೆ ಕನ್ನಡದ ಮಾತಿನೊಳಾ ವಿಕಟಾಕ್ಷರಂಗಳೊಳ್ ತೊಡರದೆ ಸಕ್ಕದಂಗಳ ಪದಂ ಪವಣಾಗಿರೆ ಮೆಲ್ಪುವೆತ್ತು ದಾಂ ಗುಡಿವಿಡುವಂತೆ ನೀಳ್ದು ನಿಲೆ ಪೇೞ್ವುದು ನೀತಿನಿರಂತರಕ್ರಮಂ
--------------
ಶ್ರೀವಿಜಯ
ನುಡಿಸಿದನೆನ್ನಂ ನಲ್ಲಂ ಬಿಡಿಸದನೆನ್ನಂತರಂಗದನುತಾಪಮನೊ ಲ್ದುಡಿಸಿದನೊಳ್ಳುಳ್ಳುಡೆಯಂ ತುಡಿಸಿದನೆನಗಱಿ ಕೆಯಪ್ಪ ಮಣಿಭೂಷಣಮಂ
--------------
ಶ್ರೀವಿಜಯ
ನುತಪರಿವೃತ್ತಿ ವ್ಯಾಜ ಸ್ತುತಿ ಹೇತು ವಿಭಾವನಾ ಲವೋದಾತ್ತಾಪ ಹ್ನುತಿ ರಸವದೂರ್ಜಿತ ವ್ಯಾ ವೃತಿ ಪ್ರಿಯತರಾಶಿಗಳ್ ಕ್ರಮಾದ್ಯುಕ್ತಂಗಳ್
--------------
ಶ್ರೀವಿಜಯ
ನೆನೆದ ಮುಗಿಲ್ಗಳುಂ ಸುರಿವ ಪೆರ್ಮೞೆಯುಂ ಮಿಗೆ ನುಣ್ಣನಪ್ಪ ಕೇ ಕಿಗಳ ಸರಂಗಳುಂ ಪೊಳೆವ ಮಿಂಚುಗಳುಂ ಕರಮುಚ್ಚಮಪ್ಪ ಬೆ ಟ್ಟುಗಳ ತಟಂಗಳಿಂ ಸುರಿದ ನಿರ್ಜ್ಝರಮುಂ ಪೊಸ ಕಾರೊಳಿಂತು ಬೆ ಳ್ಪಗೆ ಪಥಿಕಾಂಗನಾಜನಮನಂಜಿಸುವಂತಿರೆ ತೋಱೆ ಸುತ್ತಲುಂ (ಗೀತಿಕೆ)
--------------
ಶ್ರೀವಿಜಯ
ನೆನೆದಿರುಳುಂ ಪಗಲುಂ ನಿ ನ್ನನೆ ಪೀನಮೊಱಲ್ದು ಮಱುಗಿ ಕಾತರಿಸುತ್ತುಂ ಮನದೊಳ್ ಸೈರಿಸಲಾಱಿ೦ ನಿನಗೆನಸುಂ ಕರುಣಮಿಲ್ಲ ಮರವಾನಿಸನಯ್
--------------
ಶ್ರೀವಿಜಯ
ನೆನೆನೆನೆದು ಪೆಱರ ಮಾತುಗ ಳನೆ ನೆಗೞ್ದಿರೆ ಕೃತಿಯೊಳಿಡುವವಂ ನಗದ ಗುಹಾ ಧ್ವನಿಯವೊಲನರ್ಥವಚನಂ ತನಗಾಗಿಸಲಱೆ ಯನುಚಿತ ವಾಕ್ಚತುರತೆಯಂ
--------------
ಶ್ರೀವಿಜಯ
ನೆರೆದತಿವಿದಗ್ಧಣಿಕಾ ಸುರತಾಸವಸೇವನಾಕೃತೋದನನಾಗಿ ರ್ದಿರದೆ ತರುಣೀರತಾಂತರ ಸರಾಗಮಂ ಪೇೞ್ವುದಲ್ಲಿ ತುಂಬಿಯ ನೆವದಿಂ
--------------
ಶ್ರೀವಿಜಯ
ಪತ್ತಿ ಪ್ರಮಾದಫಲಕಮ ನತ್ಯುಗ್ರಗ್ರಾಹನಿವಹ ಸಂಕ್ಷೋಭಿತದೊಳ್ ಮತ್ತೀ ರತ್ನಾಕರದೊಳ್ ಪುತ್ರಿಕೆಯೆನೆ ಬೞ್ದಳಿಂತು ಬಾೞ್ವುದೆ ಚೋದ್ಯಂ
--------------
ಶ್ರೀವಿಜಯ
ಪದಪಾದ ಸಮಸ್ತಾರ್ಧ [ಗತ] ಭೇದ ಚತುಷ್ಟಯಂ ವಿದಿತಾಳಂಕ್ರಿಯಾಧಾರಂ ಮೊದಲ್ ಪೇ[ೞ್ವೊಡೆ] ದುಷ್ಕರಂ ಮುನ್ನಂ ತನ್ನಂ ತಾನೆ ತಾನೇಕೆನ್ನಂ ಕೆನ್ನಂ ನಿರಂತರಂ ಭಿನ್ನಂ ಬಂದಿಪ್ಪನಂತಿನ್ನುಂ ತನ್ನಿಂ ತನಗಮೇವಳೊ
--------------
ಶ್ರೀವಿಜಯ