ಒಟ್ಟು 89 ಕಡೆಗಳಲ್ಲಿ , 1 ಕವಿಗಳು , 74 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮಲಯಾನಿಲನುಂ ಮಲಯಜ ಜಲಮುಂ ಶಶಿಕಿರಣಮುಂ ವಿಯೋಗಿಗಳೆರ್ದೆಯೊಳ್ ನೆಲಸಿರ್ದುವೞಲೆ ಪಾಪದ ಫಲಮಾದುವು ಯುಕ್ತಕಾರಿ ಕಾಮುಕ ಜನದಾ ಯುಕ್ತಕಾರಿ
--------------
ಶ್ರೀವಿಜಯ
ಮಿಗೆ ವಸ್ತುಗತ ಸ್ಥಿತಿಯಂ ಬಗೆದಗ್ಗಳಮಾಗೆ ಪೇೞ್ದೊಡಕ್ಕು ಮುದಾರಂ ಬಗೆವೊಡೆ ಕಾವ್ಯದ ಪದವಿಯ ನೆಗೞ್ತಿಗದು ಮೂಲಮದಱ ಪಾಂಗಿಂತಕ್ಕುಂ
--------------
ಶ್ರೀವಿಜಯ
ಮುನಿ ವೀತರಾಗನೆಂದುಂ ಬನಮಂ ಸಾರ್ತಕ್ಕುಮಾವ ತೆಱದಿಂ ಪೋಪಂ ಮನಮಂಜುಗುಮಱೆ ಯದವಂ ಮುನಿಗುಂ ಪಗೆವಂಗೆ ಪಾಪಕರ್ಮಂ ಪೊಲ್ಲಂ
--------------
ಶ್ರೀವಿಜಯ
ರೂಪಕಮೆಂಬುದು ಪೆಱವಱ ರೂಪಾದಿಗುಣಂಗಳಾನಭೇದೋಕ್ತಿಗಳಿಂ ರೂಪಿಸುವುದಿಂತು ಬಾಹುಲ ತಾ ಪಾದಾಂಬುಜ ಮುಖೇಂದು ನಯನಾಳಿಗಳಿಂ
--------------
ಶ್ರೀವಿಜಯ
ಲೋಕದೊಳದಱಿ೦ ಕಾವ್ಯ ಶ್ರೀಕರಣೋದ್ಯುಕ್ತನಕ್ಕೆ ಕವಿ ತನ್ನಱೆವಂ ತಾಕಲ್ಪಾಂತಸ್ಥಾಯಿ ಶ್ರೀಕೀರ್ತಿವಧೂ ಪ್ರಧಾನವಲ್ಲಭನಕ್ಕುಂ
--------------
ಶ್ರೀವಿಜಯ
ವಿಗತಮಳಮುಪಾತ್ತಾರಾತಿಸಾರ್ಥಾರ್ಥವೀರಂ ಸ್ಥಗಿತಮಮಿತ ನಾನಾ ಶಬ್ದವೀಚಿ ಪ್ರಪಂಚಂ ನಿಗದಿತಗುಣರತ್ನೈಕಾಕರಂ ಸಾಗರಂಬೋಲ್ ಸೊಗಯಿಸಿ ಧರಣೀ ಚಕ್ರಾಂಬ ರಾಕ್ರಾಂತಮಕ್ಕುಂ
--------------
ಶ್ರೀವಿಜಯ
ವಿಪುಳತರಕಟಕನುದ್ಯದ್ ದ್ವಿಪಹರಿಮಹಿಷೀನಿಷೇವ್ಯನುನ್ನತಪಾದಂ ವ್ಯುಪನೀತಶ್ರೀಫಲದಂ ವಿಪರೀತಕನಪ್ಪನಂತು ಭೂಭೃನ್ನಾಥಂ
--------------
ಶ್ರೀವಿಜಯ
ವಿಲಸಿತ ಭವದಭ್ಯಾಗಮ ಜಲಧಾರೆಗಳೇನುಮುೞಿಯದಂತು ಮದಂತ ರ್ಮಲಮಂ ಕರ್ಚಿದೊಡಾನೀ ನೆಲಕೆಲ್ಲಂ ಪಾವನೀಯ ಚರಿತನೆನಾದೆಂ
--------------
ಶ್ರೀವಿಜಯ
ವಿಳಸಿತ ಸದಳಂಕಾರಾದಿ ಸಂಸಾಧಿತಾರ್ಥಂ ಕುಳವಿದಿತಪದೋದ್ಯತ್ಕೋಮಳಾಳಾಪಶೀಲಂ ಸುಳಲಿತಗುಣ ನಾನಾ ವೃತ್ತ ಜಾತಿಪ್ರವೃತ್ತಾ ಸ್ಖಳಿತರಸವಿಶೇಷೋಪಾಶ್ರಯ ಶ್ರೀನಿವೇಶಂ
--------------
ಶ್ರೀವಿಜಯ
ಸಂತಂ ಬಾಳ್ವುದು ಮೀಱದಾ ನರಪನೊಳ್ ಸೌಜನ್ಯಲಕ್ಷ್ಮೀಮದಾಂ ಧಂ ತನ್ನಿಶ್ಚಯ ಮೆಚ್ಚಿನೀಂ ಪರಗುಣೌದಾರ್ಯಾಭಿಮಾನಂಗಳಿಂ ಪಿಂತಂ ನೋಡದೆ ಪಾೞಿ ಗೆಟ್ಟ ೞಿ ಪಿನಿಂ ಬಾೞ್ವಂತೆ ಬಾೞ್ದಯ್ಯನಾ ಸಂತಂ ತಾಂ ಪಸತದನೞ್ತಿ ಪೆೞಿಗುಂ ದಾನಂಗಳಂ ಭೂಪನಾ|| (ಚಕ್ರಶ್ಲೋಕ)
--------------
ಶ್ರೀವಿಜಯ
ಸಕಳ ಲೌಕಿಕ ಸಾಮಯಿಕೋರು ವೈ ದಿಕ ವಿಶೇಷ ವಿವೇಕ ಪರಾಯಣಂ ಪ್ರಕಟಿತೋಕ್ತಿ ವಿವಿಕ್ತ ಕಳಾಕಳಾ ಪಕನು ಪಾಹಿತ ಸಾಹಿತ್ಯವಿದ್ಯೆಯೊಳ್
--------------
ಶ್ರೀವಿಜಯ
ಸಕ್ಕದಮುಂ ಪಾಗದಮುಮ ದುಕ್ಕುಂ ಬಗೆದಂತೆ ಸಮಱೆ ಪೇೞಲ್ ಮುನ್ನಂ ನಿಕ್ಕುವಮೊಳವಪ್ಪುದಱೆ ತಕ್ಕಂತವಱವಱೆ ಲಕ್ಷ್ಯಮುಂ ಲಕ್ಷಣಮುಂ
--------------
ಶ್ರೀವಿಜಯ
ಸಮುಚಿತ ನೃಪತುಂಗದೇವ ಮಾರ್ಗ ಕ್ರಮನಮನಾಭಿಮುಖರ್ಕಳಪ್ಪ [ರೆಲ್ಲರ್] ಕ್ರಮಸಹಿತಮಗಮ್ಯರೂಪ ಕಾ [ವ್ಯಾ] ಶ್ರಮಪದಮಂ ನಿರಪಾಯ [ದೆ] ಯ್ದಲಾರ್ಪರ್
--------------
ಶ್ರೀವಿಜಯ
ಸರಸಿಜವಿರೋಧಿ ಕಾಂತ್ಯಾ ಕರಮ ಮೃತಮಯಂ ತ್ವದೀಯ ಮುಖಶಶಿಯುಂಟಾ ಗಿರೆ ಶಶಿಯದೇವುದೆಂಬುದು ನಿರುತಂ ಶ್ಲೇಷಾನುವಿದ್ಧಮಪ್ಪಾಕ್ಷೇಪಂ ಶ್ಲೇಷಾಕ್ಷೇಪ
--------------
ಶ್ರೀವಿಜಯ