ಒಟ್ಟು 67 ಕಡೆಗಳಲ್ಲಿ , 1 ಕವಿಗಳು , 63 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸಮಱುಗೆಯಿಲ್ಲದ ಮುಱಕಮು ಮಮರ್ದಿರೆ ಕೆಯ್ಗೆಯ್ಯದೊಪ್ಪುವಂದಮುಮವಳಾ ನೆವಮಿಲ್ಲದ ದರಹಸಮುಂ ಸಮದಾಲಸಲಲಿತಗಮನಮುಂ ಸೊಗಯಿಸುಗುಂ
--------------
ಶ್ರೀವಿಜಯ
ಸವಿಹಿತಮಪ್ಪ ಕರ್ಣಪೂರೋತ್ಪಳಮಂ ಧವಳ ವಿಲೋಚನೆಯ ಗುಣ ಸುಂದರಮಂ ಕಿವಿವರಂ ನೀಳ್ದ ನಯನಯುಗದೊಳೊ ಪ್ಪುವವಳಾನವಯವದೇಕೆ ಕಳೆಯವೇೞ್ದಿಂ ಪ್ರಿಯೆಯಂ (ಭಾವೆ)
--------------
ಶ್ರೀವಿಜಯ
ಸುರಗಣಾಧಿಪನೋ ಫಣಿನಾಥನೋ ನಿರುತಮಾ ಸ್ಮರನೋ ಸೊಗಯಿಪ್ಪರೀ ದೊರೆಯರಿಲ್ಲ ನರರ್ ಪೆಱರೆಂಬುದಾ ದರದಿನಕ್ಕೆ ಗುಣೋದಯ ಕಾರಣಂ
--------------
ಶ್ರೀವಿಜಯ