ಒಟ್ಟು 191 ಕಡೆಗಳಲ್ಲಿ , 1 ಕವಿಗಳು , 157 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತಱಿಸಂದಾ ಸಕ್ಕದಮುಮ ನಱಿಯದೆ ಕನ್ನಡಮುಮಂ ಸಮಾಸೋಕ್ತಿಗಳೊಳ್ ಕುಱಿತು ಬೆರಸಿದೊಡೆ ವಿರಸಂ ಮಱುಗುವ ಪಾಲ್ಗಳೆಯ ಪನಿಗಳಂ ಬೆರಸಿದವೋಲ್
--------------
ಶ್ರೀವಿಜಯ
ತಱಿಸಂದು ಪಲವು ತೆಱದಿಂ ತೆಱಿದಿರೆ ನಿಗೞ್ದುರ್ದುದೊಂದು ವಸ್ತುಸ್ಥಿತಿಯಂ ಮಱಸಿ ಪೆಱತೊಂದು ಮಾಳ್ಕೆಯಿ ನಱಿಪುವುದುತ್ಪ್ರೇಕ್ಷೆಯೆಂಬುದಿಂತದಱ ತೆಱ೦
--------------
ಶ್ರೀವಿಜಯ
ತಲೆಸೂಡಿ ಮುನ್ನೆ ಕಜ್ಜದ ಫಲಮಂ ಬೆಸಗೊಂಡುಮೇವನಲ್ಲಿಂ ಬೞಿಯಂ ತಲೆಯಂ ಕಿರಿಯಿಸಿ ದಿವಸಮ ನಲಸದೆ ಬೆಸಗೊಳ್ವನಂತು ಗಾವಿಲನಕ್ಕುಂ
--------------
ಶ್ರೀವಿಜಯ
ತಳಮಳ[ಗೊ]ತ್ತುಂ ಜನಿತನಿಜಭೀತಿ ಮನಂ ಗೊಳೆ ಕಳವಳಿಸಿ ಚಲಿತ ನಿಲಲಣ್ಮದೆ [ಮೊ] ಕ್ಕಳ[ಮೊ]ಳಗೆ ಸುೞಿದರರಸಂ ಮನದೊಳ್ ಮುಳಿದಸಿಯನೆ ನೋ[ಡೆ] ಪರಿವಾರದವರ್ (ವರ್ಣಚ್ಯುತಕಂ)
--------------
ಶ್ರೀವಿಜಯ
ದೆಸೆಗಳ್ ವಿಶಾಲಮಾದುವು ಕೆಸಱೆ೦ ಪಿಂಗಿತ್ತು ಧರಣಿ ತಿಳಿದುವು ಕೊಳಗಳ್ ಶ್ವಸನಪಥಮಮಳಮಾಯ್ತಿಂ ದೊಸೆಗೆಗಳಂ ಬೀಱುವಂತೆ ಶರದಾಗಮದೊಳ್
--------------
ಶ್ರೀವಿಜಯ
ದೋಷಂಗಳಿಂತು ಮಿಗೆ ಸಂ ಶ್ಲೇಷದೊಳಾದಂದು ಸಕಲ ವಿದ್ವತ್ಸಭೆಯೊಳ್ ದೂಷಿಸುಗುಂ ಕೃತಿವಧುವಂ ಭಾಷಾವಿದರದಱ ತೆಱನನುೞಿ ಗೀ ದೆಸೆಯಿಂ
--------------
ಶ್ರೀವಿಜಯ
ಧ್ವನಿಯೆಂಬುದಳಂಕಾರಂ ಧ್ವನಿಯಿಸುಗುಂ ಶಬ್ದದಿಂದಮರ್ಥದೆ ದೂಷ್ಯಂ ನೆನೆವುದಿದನಿಂತು ಕಮಳದೊ ಳನಿಮಿಷಯುಗಮೊಪ್ಪಿ ತೋರ್ಪುದಿಂತಿಮ ಚೋದ್ಯಂ
--------------
ಶ್ರೀವಿಜಯ
ನರಲೋಕಚಂದ್ರ ಮತದಿಂ ಪರಮಾಲಂಕಾರಮುಂ ಶರೀರಮುಮೆಂದಿಂ ತೆರಡಕ್ಕುಂ ಭೇದಂ ಬಹು ಪರಿಕರಮಾ ಕಾವ್ಯವಸ್ತು ಪುರುಷಂಗೆಂದುಂ
--------------
ಶ್ರೀವಿಜಯ
ನವವಿಧಿರಸಂಗಳಂ ಮನ ಕೆ ವರೆ ನಿರೂಪಿಸುವ ವಚನವಿರಚನೆ ರಸವದ್ ವಿವಿ ಧಾಳಂಕಾರಂ ಕುಱಿ ತು ವಿಕಲ್ಪಿಸಿ ತೋರ್ಪೆನದಱ ಲಕ್ಷ್ಯಕ್ರಮಮಂ
--------------
ಶ್ರೀವಿಜಯ
ನವವಿವರಾವೃತ ಪೂತಿ ದ್ರವ ತ್ವಗಾವೃತವಿಮಿಶ್ರಮಾಂಸೋಪಚಿತಮ ಧ್ರುವಮಸುಚಿತ್ರಭ್ರಮಿತಾ ಸ್ಥಿವಹಂ ಮೆಯ್ ಬಗೆವೊಡಿಂತು ಕಿಸುಗುಳಮಾದಂ ಭೀಭತ್ಸ
--------------
ಶ್ರೀವಿಜಯ
ನಾನಮಾನಮ ಸೇನಾಸೇ ಸೇನಾಸೇಮನ [ಮಾನನಾ] ದೀನಮಾನ ಮನಾನಾದೀ ದೀನಾನಾಮನಮಾನದೀ ಗತಪ್ರತ್ಯಾಗತೋಪಾತ್ತ ಚತುಷ್ಟಯವಿಕಲ್ಪಮೀ ಪ್ರತೀತಿ ತೋರ್ಪೆನಾ ಗೂಢಚತುರ್ಥಂಗಳ ಲಕ್ಷ್ಯಮಂ
--------------
ಶ್ರೀವಿಜಯ
ನಾನಾ ವಸ್ತುವಿಭೇದಮ ನೇನಾನುಂ ತೆಱದೆ ಪೋಲ್ಕೆ ಮಾಡುವುದುಪಮಾ ಮಾನಿತ ಸದಳಂಕಾರಮ ನೂನ ವಿಕಲ್ಪಪ್ರಪಂಚಮೀ ತೆಱನದಱಾ
--------------
ಶ್ರೀವಿಜಯ
ನಾನಾರ್ಥಮೇಕರೂಪಾ ಧೀನವಚೋರಚಿತಮಪ್ಪೊಡಕ್ಕುಂ ಶ್ಲೇಷಂ ಮಾನಿತಮಳಂಕ್ರಿಯಾನುವಿ ಧಾನಂ ಮತ್ತಿಂತು ತದುಪಲಕ್ಷ್ಯವಿಕಲ್ಪಂ
--------------
ಶ್ರೀವಿಜಯ
ನಿಕ್ಕುವಮಿಂತು ಮಾರ್ಗಯುಗದೊಳ್ ತಕ್ಕುದನಱೆಯೆ ಪೇೞ್ದೆನಿನಿಸೊಂದುದ್ದೇಶಮಂ ಮಿಕ್ಕ ಗುಣೋದಯರ್ ಕಳೆಯದೆಂತು ಸ ಯ್ತಕ್ಕುಮಂತಾಗೆ ಬಗೆದು ಪೇೞ್ಗೆ ಕಬ್ಬದೊಳ್ (ಶ್ಲೋಕ)
--------------
ಶ್ರೀವಿಜಯ
ನಿಕ್ಕುವಮಿಂತುಮಲ್ಲದದ (ಱಾ)ಕ್ರಿಯೆ ಸಾರ್ದಿರೆ ಪತ್ತಿ ಮುಂದೆ ಸ ಯ್ತಕ್ಕುಮನುಕ್ರಮಾನುಗತದಿಂ ಬರಮೀಗೆಮಗೆಂಬ ಕಾರಕಂ ಸಕ್ಕದವೇನೊ ಕಾರಕ ವಿಭಕ್ತಿಯೊಳೊಂದೆ ಸಮಾಸಯುಕ್ತಿ ಲೇ ಸಕ್ಕುಮಭೇದರೂಪಗುಣಮಾಗಿ ತಗುಳ್ದಿರೆ ಮೇಣ್ ಕ್ರಿಯಾಪದಂ
--------------
ಶ್ರೀವಿಜಯ