ಒಟ್ಟು 68 ಕಡೆಗಳಲ್ಲಿ , 1 ಕವಿಗಳು , 63 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸೊಗಯಿಸುಗುಮಿಂದ್ರನೀಲಮಣಿ ಸನ್ನಿಭದೊಳ್ ಮಿಗೆ ಜಳನಿಧಿಯೊಳಗುದಿತದಿಂದಿರದವೊಲ್ ನೆಗೆದತಿಧವಳಮೂರ್ತಿಗೆ ಘನವಳಯ ಸದಗ್ಧ ಗಗನದೊಳುೞಿದುೞಿದು ವಿಶಾಳಿತಾಶಾವಳಯಂ (ಬಿಂದುಚ್ಯುತಕಂ)
--------------
ಶ್ರೀವಿಜಯ
ಸ್ಫುರಿತಾಧರಪಲ್ಲವೆ ಬಂ ಧುರಲೋಚನಕುಸುಮೆ ಲೋಲಭುಜಶಾಖೆ ಮನೋ ಹರೆ ಕಾಂತೆಯೆಂಬುದವಯವ ನಿರೂಪಣಕ್ರಮದಿನವಯವಂ ರೂಪಕದೊಳ್ ಸಾವಯವ ರೂಪಕಂ
--------------
ಶ್ರೀವಿಜಯ
ಸ್ಮಿತಕುಸುಮಮಧರಪಲ್ಲವ ಮತಿಶಯನಯನಾಳಿ ಬಾಹುಶಾಖಂ ಕಾಂತಾಂ ಲತೆಯೆಂದಿಂತು ಸಮಸ್ತಾ ಶ್ರಿತಂ ಸಮಸ್ತಂ ಸಮಸ್ತರೂಪಕಮಕ್ಕುಂ ಸಮಸ್ತರೂಪಕಂ
--------------
ಶ್ರೀವಿಜಯ