ಒಟ್ಟು 191 ಕಡೆಗಳಲ್ಲಿ , 1 ಕವಿಗಳು , 145 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತಳಮಳ[ಗೊ]ತ್ತುಂ ಜನಿತನಿಜಭೀತಿ ಮನಂ ಗೊಳೆ ಕಳವಳಿಸಿ ಚಲಿತ ನಿಲಲಣ್ಮದೆ [ಮೊ] ಕ್ಕಳ[ಮೊ]ಳಗೆ ಸುೞಿದರರಸಂ ಮನದೊಳ್ ಮುಳಿದಸಿಯನೆ ನೋ[ಡೆ] ಪರಿವಾರದವರ್ (ವರ್ಣಚ್ಯುತಕಂ)
--------------
ಶ್ರೀವಿಜಯ
ತಾಮರೆಯರಲೊಲ್ ಸರಸನಿ ಜಾಮೋದದೊಳೊಂದಿ ನಲಿದು ಮಕರಂದರಜೋ ವ್ಯಾಮುಗ್ಧದೊಳೀ ಮುಗುಳೊಳ ಮಾ ಮಾೞ್ಕಿಯನಱಸಿ ಸುೞಿವುದಳಿ ಕೆಲಕೆಲದೊಳ್
--------------
ಶ್ರೀವಿಜಯ
ತಿರಿವುದದೊಂದು ಚಕ್ರದೊಳೆ ನಿಂದು ದಿವಾ ಕರನೆ ಮತ್ತ [ರಿ] ದು ಕಳೆವೊಡಂತದನಾವೆಡೆಯಿಂ ದರಮೆಯಾಗಿ ನೆಲಸಿ ಕೆಲಕಾಲದಿಂ ಪೊರೆದಿರದೞಿದಬೞಿಕತಾ ನೆಲದೊಳ್ (ನುಸುಳು)
--------------
ಶ್ರೀವಿಜಯ
ತ್ರಿದಶಗಣೇಶಮೌಳಿಮಣಿಪೀಠನಿಷೇವಿಗಳೊಳ್ ಮುನೀಂದ್ರನಾ ಪದಯುಗಳಂಗಳೊಳ್ ಮುದವೆ ಬಾಗುವೆನೆಂಬುದು ದಕ್ಷಿಣಾಯನಂ ವಿದಿತಸುರಾಧಿರಾಜಮಕುಟಾಗ್ರ ಸಮರ್ಪಿತದೊಳ್ ಮುನೀಂದ್ರನಾ ಪದಯುಗದೊಳ್ ಮನೋಮುದದೆ ಬಾಗುವೆನೆಂಬುದಿದುತ್ತರಾಯಣಂ
--------------
ಶ್ರೀವಿಜಯ
ತ್ರಿದಶಸುರಲೋಕವಾಸಾ ಸ್ಪದಮಂ ಪೆಱುಗುಂ ಮನುಷ್ಯ ಮನುಜಂ ನಿನ್ನಾ ಪದಚರಣ ಯುಗದ್ವಯಮಂ ಮುದದೞ್ತಿಯೆ ಬಗೆದು ನೆನೆವನನುದಿನಮೆಂದುಂ
--------------
ಶ್ರೀವಿಜಯ
ದಿನನಾಯಕನಪರದಿಗಂ ಗನೆಯೊಳ್ ನೆರೆದು ದಿತರಾಗನಾದಂ ಪೀನಂ ಜನಿಯಿಸುಗುಮಧಿಕರಾಗಮ ನೆನಸುಮಪಕ್ರಮದೆ ವಾರುಣೀ ಸಂಶ್ಲೇಷಂ ಪ್ರಕಟಶ್ಲೇಷಂ
--------------
ಶ್ರೀವಿಜಯ
ದೊರೆಕೊಂಡಿರೆ ಸೊಗಯಿಸುಗುಂ ಪುರಾಣ ಕಾವ್ಯ ಪ್ರಯೋಗದೊಳ್ ತತ್ಕಾಲಂ ವಿರಸಮ ಕರಮವು ದೇಸಿಗೆ ಜರದ್ವಧೂವಿಷಯ ಸುರತ ರಸರಸಿಕತೆವೋಲ್
--------------
ಶ್ರೀವಿಜಯ
ದೋಷಂಗಳಿಂತು ಮಿಗೆ ಸಂ ಶ್ಲೇಷದೊಳಾದಂದು ಸಕಲ ವಿದ್ವತ್ಸಭೆಯೊಳ್ ದೂಷಿಸುಗುಂ ಕೃತಿವಧುವಂ ಭಾಷಾವಿದರದಱ ತೆಱನನುೞಿ ಗೀ ದೆಸೆಯಿಂ
--------------
ಶ್ರೀವಿಜಯ
ದೋಸಮಿನಿತೆಂದು ಬಗೆದು ದ್ಭಾಸಿಸಿ ತಱೆಸಂದು ಕನ್ನಡಂಗಳೊಳೆಂದುಂ ವಾಸುಗಿಯುಮಱೆಯಲಾಱದೆ ಬೇಸಱುಗುಂ ದೇಶೀ ಬೇಱಿವೇಱಪ್ಪುದಱಿಂ
--------------
ಶ್ರೀವಿಜಯ
ದೋಸಮೇನಾನುಂ ಸ್ವಲ್ಪಮಾದೊಡಂ ಮಾಸಿಸಿರ್ಕ್ಕುಮಣಂ ಕೃತಿವಧುವಂ ಪೇಸದೆ ದುರ್ಜನದೊಳಾದ ಪರಿಚಯಂ ಮಾಸಿಸಿ ಕಿಡಿಸುವವೊಲೊಪ್ಪುವ ಕುಲವಧುವಂ (ವೃತ್ತ)
--------------
ಶ್ರೀವಿಜಯ
ದ್ವಿಪ್ರಾಸಂ ಸುಭಗ ದ್ವಂ ದ್ವಪ್ರಾಸಂ ಕಾವ್ಯರಚನೆಗುಚಿತಮೆನಿಪ್ಪಾ ತ್ರಿಪ್ರಾಸಂ ಸೆಲೆಯಂತಾ ದಿಪ್ರಾಸಂ ಬೇಱಿ ನಾಲ್ಕು ತೆಱನಾಗಿರ್ಕ್ಕುಂ
--------------
ಶ್ರೀವಿಜಯ
ಧವಳಾಪಾಂಗಂ ಕೇಕಾ ರವಮುಖರಂ ಹರಿತಶಾಬಲಾಂಕ ಕಳಾಪಂ ನವಿಲಾದಂ ಸೊಗಯಿಸುಗುಂ ಸುವಿನೀಲಾಯತಗಳಂ ಪಯೋದಾಗಮದೊಳ್ ಜಾತಿಸ್ವಭಾವಾಖ್ಯಾನಂ
--------------
ಶ್ರೀವಿಜಯ
ಧ್ವನಿಯೆಂಬುದಳಂಕಾರಂ ಧ್ವನಿಯಿಸುಗುಂ ಶಬ್ದದಿಂದಮರ್ಥದೆ ದೂಷ್ಯಂ ನೆನೆವುದಿದನಿಂತು ಕಮಳದೊ ಳನಿಮಿಷಯುಗಮೊಪ್ಪಿ ತೋರ್ಪುದಿಂತಿಮ ಚೋದ್ಯಂ
--------------
ಶ್ರೀವಿಜಯ
ನಡುವಗಲ ಬಿಸಿಲ್ ತನ್ನಂ ಸುಡೆ ವನಕರಿ ಕಮಳಬಂಧುವೊಳ್ ದಿನಕರನೊಳ್ ಕಡುಗಾಯ್ಪೆನೆ ಸರಸಿಜಮಂ ಕಿಡಿಸಲ್ ತಾಂ ಪೊಕ್ಕುದಾಗ ಬಗೆದಾಕೊಳನಂ
--------------
ಶ್ರೀವಿಜಯ
ನರಪತಿಯಂ ಕಪಿಪೃತನಾ ಪರಿವೃತನಂ ಜಳಧಿತಟದೊಳಣುವಂ ಕಂಡಂ ಪರಮಾನುಭಾವ ಭಾಸುರ ಸುರರಾಜೋಪಮಿತ ವಿವಿಧ ವಿಭವೋದಯನಂ
--------------
ಶ್ರೀವಿಜಯ