ಒಟ್ಟು 57 ಕಡೆಗಳಲ್ಲಿ , 1 ಕವಿಗಳು , 50 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸಕಲವ್ಯಾಪಿ ವಿಶೇಷ ಪ್ರಕಾಶಕಂ ಯುಕ್ತಕಾರಿ ಯುಕ್ತಾಯುಕ್ತಂ ಪ್ರಕಟಶ್ಲೇಷವಿರುದ್ಧಾ ತ್ಮಕಂ ವಿರುದ್ಧಂ ವಿಪರ್ಯಯಂ ಯುಕ್ತಾರ್ಥಂ
--------------
ಶ್ರೀವಿಜಯ
ಸಕಳ ಲೌಕಿಕ ಸಾಮಯಿಕೋರು ವೈ ದಿಕ ವಿಶೇಷ ವಿವೇಕ ಪರಾಯಣಂ ಪ್ರಕಟಿತೋಕ್ತಿ ವಿವಿಕ್ತ ಕಳಾಕಳಾ ಪಕನು ಪಾಹಿತ ಸಾಹಿತ್ಯವಿದ್ಯೆಯೊಳ್
--------------
ಶ್ರೀವಿಜಯ
ಸರಸಿಜಬಾಂಧವನಸ್ತಾಂ ತರಗತನಾಗಿರೆ ಸರೋಜಿನೀವನಮಾದಂ ಕೊರಗುತ್ತೆ ಮುಗಿಗುಮೀಶ್ವರ ವಿರಹದೆ ಶೋಕಾಕುಲಂ ವಿಶೇಷಾಪ್ತಜನಂ ವಿಶೇಷಪ್ರಕಾಶಕಂ
--------------
ಶ್ರೀವಿಜಯ
ಸವಿವೊಡೆ ಮಧುರರಸಂಬೋಲ್ ಕಿವಿಗಿನಿದಾಗಿರ್ಪ ವಚನವಿರಚನೆ ಮಧುರಂ ಸವಿಳಾಸಾಳಾಪದಿನವ ರ ವಿಶೇಷ ವಿಶೇಷ್ಯಮಿಂತು ಮಾರ್ಗದ್ವಯದೊಳ್
--------------
ಶ್ರೀವಿಜಯ
ಸವಿಶೇಷಾಲಂಕಾರೋ ದ್ಭವಮಾಗಿಯುಮೊಂದುವರ್ಥದೊಳ್ ಸಂಬಂಧ ವ್ಯವಧಾನಮಾದೊಡಕ್ಕುಂ ವ್ಯವಹಿತದೋಷಂ ಪ್ರಯೋಗಮೀತೆಱದನಱಾ
--------------
ಶ್ರೀವಿಜಯ