ಒಟ್ಟು 69 ಕಡೆಗಳಲ್ಲಿ , 1 ಕವಿಗಳು , 62 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬಗೆದಿಂಗಿತಬೇಷ್ಟಾಕಾ ರಗತಂಗಳಿನಂತರಂಗದೊಳ್ ಮರೆಸಿದುದಂ ಮಿಗೆ ಸೂಚಿಸುವುದು ಸೂಕ್ಷ್ಮಾ ನುಗತಾಳಂಕಾರಮಿಂತು ತದುದಾಹರಣಂ
--------------
ಶ್ರೀವಿಜಯ
ಭಾವಿಸಿ ಸಮಸ್ತವಸ್ತು ವಿ ಭಾವಿತ ಜಾತಿಕ್ರಿಯಾಗುಣದ್ರವ್ಯಸ್ವಾ ಭಾವಿಕ ಗುಣಮಂ ಪೇೞ್ವುದು ಕೇವಲಮಾ ಜಾತಿಯೆಂಬ ಸದಳಂಕಾರಂ
--------------
ಶ್ರೀವಿಜಯ
ಮದಕರಿಯೋ ಘನಸಮಯಾಂ ಬುದಮೋ ಘನಮಲ್ತು ನೆಗೞ್ವುದದಱೊಳ್ ಸಪ್ತ ಚ್ಛದಗಂಧಸುರಭಿ ಪದುಳಂ ಮದಕರಿಯೆನೆ ನೆನೆಗೆ ಸಂಶಯಾಕ್ಷೇಪಮಕಂ ಸಂಶಯಾಕ್ಷೇಪ
--------------
ಶ್ರೀವಿಜಯ
ಮಾನಿಯುಮುದಾರಚರಿತನು ಮಾನತರಿಪುನಿಕರನುಂ ಮನಸ್ವಿಯುಮಂತಾ ಮಾನಸರನಾರುಮಂ ಮನ ಕೇನುಂ ಮುಟ್ಟಲ್ಲದಂತು ಬಗೆವುದು ದೋಷಂ
--------------
ಶ್ರೀವಿಜಯ
ಮಿಗೆ ಮನದ ಪೆಂಪುಮಂ ಕೈ ಮಿಗೆ ವಿಭವದ ಪೆಂಪುಮಂ ವಿಶೇಷಿಸಿ ಪೇೞಲ್ ಬಗೆವುದುದಾತ್ತಾಲಂಕಾ ರ ಗುಣೋದಯಮದಱದಿಂತು ಸದುದಾಹರಣಂ
--------------
ಶ್ರೀವಿಜಯ
ಮೃದುತರಮಾರ್ಗದ ಕೆನ್ನಂ ಮದನಶರಾನೀಕಮೊಯ್ಕನೊಲವಂ ಪಡೆಗುಂ ಹೃದಯಮನದವೞಲಿಂದುಱಿ ವಿದಾರಿಸುವುದಿಂತು ಕುಸುಮಮಯಮಲ್ತದಱಿ೦ ವೃತ್ತಾಕ್ಷೇಪ
--------------
ಶ್ರೀವಿಜಯ
ಮೇರೆಗಳೆದಿರೆ ವಿಶೇಷ ವಿ ಚಾರಮನಧಿಕೋಕ್ತಿಯೊಳ್ ತಗಳ್ಚುವುದಕ್ಕುಂ ಸಾರತರಮತಿಶಯಾಲಂ ಕಾರಂ ಮತ್ತದಱ ಲಕ್ಷ್ಯಮೀ ತೆಱನಕ್ಕುಂ
--------------
ಶ್ರೀವಿಜಯ
ಯತಿಯೆಂಬುದುಸಿರ್ವ ತಾಣಂ ಕೃತಾಸ್ಪದಂ ವೃತ್ತಾಜಾತಿ ಪದ ಪದ್ಧತಿಯೊಳ್ ಸತತಂ ಛಂದೋವಿದಿತ ಪ್ರತೀತಶಾಸ್ತ್ರೋಕ್ತಮಾರ್ಗದಿಂದಱಿ ವುದದಂ
--------------
ಶ್ರೀವಿಜಯ
ರೂಪಕಮೆಂಬುದು ಪೆಱವಱ ರೂಪಾದಿಗುಣಂಗಳಾನಭೇದೋಕ್ತಿಗಳಿಂ ರೂಪಿಸುವುದಿಂತು ಬಾಹುಲ ತಾ ಪಾದಾಂಬುಜ ಮುಖೇಂದು ನಯನಾಳಿಗಳಿಂ
--------------
ಶ್ರೀವಿಜಯ
ವಿಗಳಿತರಾಗನಾವೊಂ ನಿನ್ನಾವುದಱ ಸೊಗಯಿಸುಗುಂ ಕಟಕತ್ವಮಂ ಸಮರ್ಥಬಲಂ ಬಗೆದೆನಗೊಯ್ಯನೆಸಗೆಯಿದುವೊದಾ ಲಗಲಲಾಟಿಸುಗುಮದೆಪೇೞ್ದಿಂ ಬನದೊಳ್ (ಸಮಂತಿ)
--------------
ಶ್ರೀವಿಜಯ
ಸಂತಂ ಬಾಳ್ವುದು ಮೀಱದಾ ನರಪನೊಳ್ ಸೌಜನ್ಯಲಕ್ಷ್ಮೀಮದಾಂ ಧಂ ತನ್ನಿಶ್ಚಯ ಮೆಚ್ಚಿನೀಂ ಪರಗುಣೌದಾರ್ಯಾಭಿಮಾನಂಗಳಿಂ ಪಿಂತಂ ನೋಡದೆ ಪಾೞಿ ಗೆಟ್ಟ ೞಿ ಪಿನಿಂ ಬಾೞ್ವಂತೆ ಬಾೞ್ದಯ್ಯನಾ ಸಂತಂ ತಾಂ ಪಸತದನೞ್ತಿ ಪೆೞಿಗುಂ ದಾನಂಗಳಂ ಭೂಪನಾ|| (ಚಕ್ರಶ್ಲೋಕ)
--------------
ಶ್ರೀವಿಜಯ
ಸಕಳಾಳಾಪ ಕಳಾಕಳಾಪಕಥಿತವ್ಯಾವೃತ್ತಿಯೊಳ್ ಕೊಡಿ ಚಿ ತ್ರಕರಂಬೋಲ್ ಪರಭಾಗಭಾವವಿಲಸದ್ವರ್ಣಕ್ರಮಾವೃತ್ತಿಯಂ ಪ್ರಕಟಂ ಮಾಡಿರೆ ಪೇೞ್ದ ಚಿತ್ರಕೃತಿಯಂ ವ್ಯಾವರ್ಣಿಸುತ್ತುಂ ಕವಿ ಪ್ರಕರಂ ಶ್ರೀವಿಜಯಪ್ರಭೂತಮನಿದಂ ಕೈಕೊಳ್ವುದೀ ಮಾೞ್ಕಿಯಿಂ
--------------
ಶ್ರೀವಿಜಯ
ಸರಸಿಜವಿರೋಧಿ ಕಾಂತ್ಯಾ ಕರಮ ಮೃತಮಯಂ ತ್ವದೀಯ ಮುಖಶಶಿಯುಂಟಾ ಗಿರೆ ಶಶಿಯದೇವುದೆಂಬುದು ನಿರುತಂ ಶ್ಲೇಷಾನುವಿದ್ಧಮಪ್ಪಾಕ್ಷೇಪಂ ಶ್ಲೇಷಾಕ್ಷೇಪ
--------------
ಶ್ರೀವಿಜಯ
ಸುರಗಿರಿವೋಲ್ ಧೈರ್ಯದಿನಂ ಬರಮಣಿವೋಲ್ ತೇಜದಿಂ ಶಶಾಂಕಂಬೋಲ್ ಬಂ ಧುರ ಕಾಂತಿಗುಣದಿನೆಂದಿಂ ತಿರೆ ಪೇಳ್ವುದನಱಿದುಕೊಳ್ಗೆ ಹೇತೂಪಮೆಯಂ ಹೇತೊಪಮೆ
--------------
ಶ್ರೀವಿಜಯ
ಸೂಡುವೆನೆಂಬುದಲ್ಲದಣಮಾಗದು ಸೂೞ್ಪೆನಮೋಘಮೆಂಬುದುಂ ಕೂಡುವೆನೆಂ [ಗ] ಬುದಲ್ಲದಿನಿಸಾವುದುಮಾಗದು ಕೂೞ್ಪೆನೆಂಬುದುಂ ಕಾಡುವೆನೆಂಬುದಲ್ಲದೆ ಸುಮಾರ್ಗದೊಳಾಗದು ಕಾೞ್ಪೆನೆಂಬುದುಂ ತೋಡುವೆನೆಂಬುದಲ್ಲದಿಡಲಾಗದು ನಿಕ್ಕುವ ತೋೞ್ಪೆನೆಂಬುದಂ
--------------
ಶ್ರೀವಿಜಯ