ಒಟ್ಟು 68 ಕಡೆಗಳಲ್ಲಿ , 1 ಕವಿಗಳು , 60 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಭಾವಿಸಲ್ ಬಗೆದವಂ ಮಿಗೆ ಜಾಣನಶೇಷ ಭಾ ಷಾವಿಶೇಷವಿಷಯಾತಿಶಯಾಮಳ ಕೌಶಳಂ ದೇವತಾಗುರುಗುಣೋದಯ ವೃದ್ಧಜನೋಪಸಂ ಸೇವನಾಪರನಪಾಕೃತವೈಕೃತಚಾಪಳಂ
--------------
ಶ್ರೀವಿಜಯ
ಮಿಗೆ ಪದ್ಯದೊಳಂ ಗುಣಮಂ ತಗುಳ್ಚುಗುಂ ಸಮಹಿತ ಪ್ರಯೋಗಾನುಗತಂ ಸೊಗಯಿಸುವಂತಿರೆ ಬಗೆದಿದ ನಗಾಧಮನರಿಡುಗೆ ಕೃತಿಯೊಳೋಜೋಗುಣಮಂ
--------------
ಶ್ರೀವಿಜಯ
ಮುನಿ ವೀತರಾಗನೆಂದುಂ ಬನಮಂ ಸಾರ್ತಕ್ಕುಮಾವ ತೆಱದಿಂ ಪೋಪಂ ಮನಮಂಜುಗುಮಱೆ ಯದವಂ ಮುನಿಗುಂ ಪಗೆವಂಗೆ ಪಾಪಕರ್ಮಂ ಪೊಲ್ಲಂ
--------------
ಶ್ರೀವಿಜಯ
ಮೃದುತರಮಾರ್ಗದ ಕೆನ್ನಂ ಮದನಶರಾನೀಕಮೊಯ್ಕನೊಲವಂ ಪಡೆಗುಂ ಹೃದಯಮನದವೞಲಿಂದುಱಿ ವಿದಾರಿಸುವುದಿಂತು ಕುಸುಮಮಯಮಲ್ತದಱಿ೦ ವೃತ್ತಾಕ್ಷೇಪ
--------------
ಶ್ರೀವಿಜಯ
ಮೊದಲ ಪದಂ ನ್ಯೂನಾಕ್ಷರ ಮದಱಿಂದೆ ಬೞಿಕ್ಕಮರ್ಧಮಧಿಕಾಕ್ಷರಮಿಂ ತಿದಱಿಂ ಛಂದೋಭಂಗಂ ಪದನಱಿದದನಿಂತು ಸಮಱಿ ಪೇೞ್ದೊಡೆ ಚೆಲ್ವಂ
--------------
ಶ್ರೀವಿಜಯ
ರಾವಣನಂ ಕೊಂದು ಜಯ ಶ್ರೀವಧುವಂ ತಾಳ್ದಿ ಮುಯ್ವಿನೊಳ್ ವರ ಸೀತಾ ದೇವತೆಯ ತರ್ಪನ್ನೆಗ ಮೋವದೆ ಪುರುಷವ್ರತೋಚಿತಂ ವೀರರಸಂ ವೀರ
--------------
ಶ್ರೀವಿಜಯ
ಲೋಕದೊಳದಱಿ೦ ಕಾವ್ಯ ಶ್ರೀಕರಣೋದ್ಯುಕ್ತನಕ್ಕೆ ಕವಿ ತನ್ನಱೆವಂ ತಾಕಲ್ಪಾಂತಸ್ಥಾಯಿ ಶ್ರೀಕೀರ್ತಿವಧೂ ಪ್ರಧಾನವಲ್ಲಭನಕ್ಕುಂ
--------------
ಶ್ರೀವಿಜಯ
ವರ ಹಂಸಕದಂಬಕಮದು ಶರದಂಬುದಮಲ್ತು ಮುಖರನೂಪುರ ಸಂವಾ ದಿರವಂ ನೆಗೆೞ್ದಪ್ಪುದು ಬಂ ಧುರಮದೞಿ೦ದಿದಱೊಳೆಂಬುದುಪಮಾಕ್ಷೇಪಂ ಉಪಮಾಕ್ಷೇಪ
--------------
ಶ್ರೀವಿಜಯ
ವರರೂಪಕಾದ್ಯಳಂಕಾ ರರಚನೆಯೊಳ್ ಮುನ್ನೆ ಪೇೞ್ದು ಬಂದೆಂ ಕೆಲವಂ ದೊರೆಕೊಳೆ ಬಗೆಗೀ ತೆಱದಿಂ ನಿರಂತರವಿರುದ್ಧನಿಯಮಿತ ಶ್ಲೇಷಗಳಂ
--------------
ಶ್ರೀವಿಜಯ
ವಿದಿತಸಮಸಂಸ್ಕೃತೋದಿತ ಪದಂಗಳೊಳ್ ಪುದಿದು ಬೆರಸಿ ಬರೆ ಕನ್ನಡದೊಳ್ ಮುದಮನವು ತರ್ಕುಮತಿಶಯ ಮೃದಂಗ ಸಂಗೀತಕಾದಿ ಮಧುರರವಂಬೋಲ್
--------------
ಶ್ರೀವಿಜಯ
ಶಶಧರಬಿಂಬಾನನೆಯಂ ಝಷಕೇತನ ಕೇತನಾಭತನುತನುವಂ ತಾಂ ಬಿಸವಿಶದ ವರ್ಣೆಯಂ ಕಂ ಡೊಸೆದಂ ಬಸದೊಳಗೆ ಜನಕತನಯಳನಣುವಂ
--------------
ಶ್ರೀವಿಜಯ
ಸಂತಂ ಬಾಳ್ವುದು ಮೀಱದಾ ನರಪನೊಳ್ ಸೌಜನ್ಯಲಕ್ಷ್ಮೀಮದಾಂ ಧಂ ತನ್ನಿಶ್ಚಯ ಮೆಚ್ಚಿನೀಂ ಪರಗುಣೌದಾರ್ಯಾಭಿಮಾನಂಗಳಿಂ ಪಿಂತಂ ನೋಡದೆ ಪಾೞಿ ಗೆಟ್ಟ ೞಿ ಪಿನಿಂ ಬಾೞ್ವಂತೆ ಬಾೞ್ದಯ್ಯನಾ ಸಂತಂ ತಾಂ ಪಸತದನೞ್ತಿ ಪೆೞಿಗುಂ ದಾನಂಗಳಂ ಭೂಪನಾ|| (ಚಕ್ರಶ್ಲೋಕ)
--------------
ಶ್ರೀವಿಜಯ
ಸಮಱುಗೆಯಿಲ್ಲದ ಮುಱಕಮು ಮಮರ್ದಿರೆ ಕೆಯ್ಗೆಯ್ಯದೊಪ್ಪುವಂದಮುಮವಳಾ ನೆವಮಿಲ್ಲದ ದರಹಸಮುಂ ಸಮದಾಲಸಲಲಿತಗಮನಮುಂ ಸೊಗಯಿಸುಗುಂ
--------------
ಶ್ರೀವಿಜಯ
ಸ್ಥಿರಮರ್ಥಶೂನ್ಯವೆಂಬುದು ದುರುಕ್ತಮಿದನಿಂತು ಪೇೞ್ದೊಡೆಲ್ಲಂ ಪೀನಂ ಮರುಳಂ ಮದಿರಾಪರವಶ ಶರೀರನುಂ ಪೇೞ್ಗೆಮಱೆವನಾವಂ ಪೇೞ್ಗೆು೦
--------------
ಶ್ರೀವಿಜಯ
ಸ್ಫುರಿತಾಧರಪಲ್ಲವೆ ಬಂ ಧುರಲೋಚನಕುಸುಮೆ ಲೋಲಭುಜಶಾಖೆ ಮನೋ ಹರೆ ಕಾಂತೆಯೆಂಬುದವಯವ ನಿರೂಪಣಕ್ರಮದಿನವಯವಂ ರೂಪಕದೊಳ್ ಸಾವಯವ ರೂಪಕಂ
--------------
ಶ್ರೀವಿಜಯ