ಒಟ್ಟು 150 ಕಡೆಗಳಲ್ಲಿ , 1 ಕವಿಗಳು , 109 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನರಲೋಕಚಂದ್ರ ಮತದಿಂ ಪರಮಾಲಂಕಾರಮುಂ ಶರೀರಮುಮೆಂದಿಂ ತೆರಡಕ್ಕುಂ ಭೇದಂ ಬಹು ಪರಿಕರಮಾ ಕಾವ್ಯವಸ್ತು ಪುರುಷಂಗೆಂದುಂ
--------------
ಶ್ರೀವಿಜಯ
ನವವಿವರಾವೃತ ಪೂತಿ ದ್ರವ ತ್ವಗಾವೃತವಿಮಿಶ್ರಮಾಂಸೋಪಚಿತಮ ಧ್ರುವಮಸುಚಿತ್ರಭ್ರಮಿತಾ ಸ್ಥಿವಹಂ ಮೆಯ್ ಬಗೆವೊಡಿಂತು ಕಿಸುಗುಳಮಾದಂ ಭೀಭತ್ಸ
--------------
ಶ್ರೀವಿಜಯ
ನಿಗದಿತ ಕಾವ್ಯೋಕ್ತಿಗಳೊಳ್ ನೆಗೞ್ದುವು ಮಾರ್ಗಂಗಳಿಂತುಮೆರುಡುಕ್ತಿಗಳುಂ ಬಗೆವಾಗಳೆರಡು ಮಾೞ್ಕಿಯೊ ಳೊಗೆದುವು ವಕ್ರ ಸ್ವಭಾವ ನಿಯತಿಕ್ರಮದಿಂ
--------------
ಶ್ರೀವಿಜಯ
ನಿನ್ನ ಮುಖದಂತೆ ಕಮಳಮಿ ದುನ್ನಿದ್ರಂ ನಿನ್ನ ತಳದವೋಲಾರಕ್ತಂ ನನ್ನಿಯಿನೀ ಪಲ್ಲವಮೆನೆ ಸನ್ನುತರೂಪಿಂ ವಿಪರ್ಯಯೋಪಮಮಕ್ಕುಂ ವಿಪರ್ಯಯೋಪಮೆ
--------------
ಶ್ರೀವಿಜಯ
ನಿಲ್ತೋಳಂ ಬರ್ಪುದು ಸ ಯ್ತಲ್ತೂರುಂ (ದೂರಮೆನೆತುಡಗರ್ಪೂರಂ) ಕಲ್ತುಲ್ಲಿಂದೋಡುವಮೆಂ ಬಲ್ತುಣ್ಣಿಂ ತಂದ ಕೂೞನೂ ಸಂಗಮದೊಳ್
--------------
ಶ್ರೀವಿಜಯ
ನುಡಿಗಳೊಡಂಬಡಲ್ ಬಗೆದವೋಲ್ ಬಗೆಯಂ ಮಿಗಲೀಯದೊಂದೆ ನಾ ೞ್ನುಡಿಯ ಬೆಡಂಗೆ ಕನ್ನಡದ ಮಾತಿನೊಳಾ ವಿಕಟಾಕ್ಷರಂಗಳೊಳ್ ತೊಡರದೆ ಸಕ್ಕದಂಗಳ ಪದಂ ಪವಣಾಗಿರೆ ಮೆಲ್ಪುವೆತ್ತು ದಾಂ ಗುಡಿವಿಡುವಂತೆ ನೀಳ್ದು ನಿಲೆ ಪೇೞ್ವುದು ನೀತಿನಿರಂತರಕ್ರಮಂ
--------------
ಶ್ರೀವಿಜಯ
ನುಡಿಗೆಲ್ಲಂ ಸಲ್ಲದ ಕ ನ್ನಡದೊಳ್ ಚತ್ತಾಣಮುಂ ಬೆದಂಡೆಯುಮೆಂದೀ ಗಡಿನ ನೆಗೞ್ತೆಯ ಕಬ್ಬದೊ ಳೊಡಂಬಡಂ ಮಾಡಿದರ್ ಪುರತಾನ ಕವಿಗಳ್
--------------
ಶ್ರೀವಿಜಯ
ನುತ ಶಿಸಿರಕಿರಣಕಾಂತಿ ಪ್ರತತಿಯನೊಡಗೂಡಿ ಮಾಡಿದವೊಲಾಯಿತ್ತಿಂ ತತಿಶಯಮೀ ನಿನ್ನ ಮುಖಂ ನಿತಾಂತಮೆಂಬಾಗಳಱಿ ಗಭೂತೋಪಮೆಯಂ ಅಭೂತೋಪಮೆ
--------------
ಶ್ರೀವಿಜಯ
ನೃಪನ ನರಪಾಲತನಯನ ನೃಪವಧುವರ್ ನೆರೆದು ಸುಖದಿನಿರೆ ಕೈಕೊಂಡ ತ್ತಪರಿಮಿತರಾಗಮೆರ್ದೆಯಂ ನೃಪತಿ ಸನಾಭಿಗಳ ಬಂಧುಜನದಾ ಕೆಳೆಯಾ
--------------
ಶ್ರೀವಿಜಯ
ನೃಪನಾ ನೃಪನಂದನನಾ ನೃಪವಧುವರ್ ನೆರೆದು ಸುಖದೊಳಿರೆ ಕೈಕೊಂಡ ತ್ತಪರಿಮಿತರಾಗಮೆರ್ದೆಯಂ ನೃಪಬಾಂಧವರಾ ಸುಮಿತ್ರರಾ ಪರಿಜನದಾ
--------------
ಶ್ರೀವಿಜಯ
ನೆಗೞ್ದರ್ದ ಕನ್ನಡಂಗಳೊ ಳಗಣಿತ ಗುಣ ವಿದಿತ ಸಂಸ್ಕೃತತೋಕ್ತಕ್ರಮಮಂ ಬಗೆದೊಂದು ಮಾಡಿ ಪೇೞ್ದೊಡೆ ಸೊಗಯಿಸುಗಂ ಕಾವ್ಯಬಂಧಮೆಂದುಮನಿಂದ್ಯಂ
--------------
ಶ್ರೀವಿಜಯ
ನೆರೆದು ಬಂದಪರವರ್ ಸಯಲಾಬಲಮೆಲ್ಲಮೆ ೞ್ತರದೆ ಕೊಂದಪನಿವಂದಿರನೀಗಳೆ ನಿಕ್ಕುವಂ ಪರಿದು ಬೀೞ್ವಿವೊಲಿವಂದಿರ ಪಾಡೞಿ ವಂದಮಂ ತಿರವೇ [ೞೊ] ಡ್ಡೞಿಯದಂತಿರೆ ನಮ್ಮವರೆಲ್ಲರಂ
--------------
ಶ್ರೀವಿಜಯ
ನೆಲಸಿದ ಕಾವ್ಯಂ ಕಾವ್ಯ ಕ್ಕೆ ಲಕ್ಷಣಂ ಸತತಮೆಂದೆ ಪೞಗನ್ನಡಮಂ ಪೊಲಗೆಡಿಸಿ ನುಡಿವರಾಗಮ ಬಲಹೀನರ್ ದೇಸಿಯಲ್ಲದೆಂದಱೆದಿರ್ದುಂ
--------------
ಶ್ರೀವಿಜಯ
ಪರಮಶ್ರೀನಿಳಯಂ ಶಶ ಧರಕಾಂತಿವಿರೋಧಿರೋಚಿ ವದನಂ ಸರಸಿರುಹದವೋಲೆಂಬುದು ನಿರುತಂ ಶ್ಲೇಷೋಪಮಾವಿಕಲ್ಪವಿಶೇಷಂ ಶ್ಲೇಷೋಪಮೆ
--------------
ಶ್ರೀವಿಜಯ
ಪರಿಗೀತಾರ್ಥಂ ಪೂರ್ವಾ ಪರದೊಳ್ ಬಗೆವಾಗಳೆಂದುಮೊಂದಱೊಳೊಂದುಂ ದೊರೆಕೊಂಡೊಂದದೊಡದು ದು ಷ್ಕರಮೆ ವಿರುದ್ಧಾರ್ಥಮೆಂಬುದಾದಂ ದೋಷಂ
--------------
ಶ್ರೀವಿಜಯ