ಒಟ್ಟು 51 ಕಡೆಗಳಲ್ಲಿ , 1 ಕವಿಗಳು , 49 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸುರಗಣಾಧಿಪನೋ ಫಣಿನಾಥನೋ ನಿರುತಮಾ ಸ್ಮರನೋ ಸೊಗಯಿಪ್ಪರೀ ದೊರೆಯರಿಲ್ಲ ನರರ್ ಪೆಱರೆಂಬುದಾ ದರದಿನಕ್ಕೆ ಗುಣೋದಯ ಕಾರಣಂ
--------------
ಶ್ರೀವಿಜಯ
ಸ್ಫುರಿತಾಧರಪಲ್ಲವೆ ಬಂ ಧುರಲೋಚನಕುಸುಮೆ ಲೋಲಭುಜಶಾಖೆ ಮನೋ ಹರೆ ಕಾಂತೆಯೆಂಬುದವಯವ ನಿರೂಪಣಕ್ರಮದಿನವಯವಂ ರೂಪಕದೊಳ್ ಸಾವಯವ ರೂಪಕಂ
--------------
ಶ್ರೀವಿಜಯ
ಸ್ಮರನೈದಂಬುಗಳಲ್ಲಿವು ಶರಕೋಟಿಗಳಿಲ್ಲದಾಗಳಿಂತಿ ಲೋಕಾಂ ತರವರ್ತಿ ವಿರಹಿಗಣಮಂ ನಿರುತಂ ಮರ್ದಿಸವವುವೆನೆ ಸುಗುಣಾಪೋಹಂ ಸುಗುಣಾಪೋಹಂ
--------------
ಶ್ರೀವಿಜಯ
ಹರಿಣಧರ ಸರಸಿಜಂಗಳ್ ದೊರೆಯಲ್ಲಿವು ತನಗೆ ತಾನೆ ದೊರೆ ನಿನ್ನ ಮೊಗಂ ನಿರುಪಮಮೆಂಬುದನಱಿವುದು ನಿರುತಮಸಾಧಾರಣೋಪಮೋದಯ ವಿಧಿಯಂ ಅಸಾಧಾರಣೋಪಮೆ
--------------
ಶ್ರೀವಿಜಯ