ಒಟ್ಟು 133 ಕಡೆಗಳಲ್ಲಿ , 1 ಕವಿಗಳು , 108 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತಾಳತರುವಿತತಿಯೊಳ್ ಬೇ ತಾಳಂಗಳ್ ಮೊಱಿದು ತೆಱಿದು ಬಾಯ್ಗಳನಾ ಪಾ ತಾಳಬಿಲಂಗಳವೋಲ್ ತಳ ತಾಲಲಯಕ್ರಮದೆ ಕುಣಿಯೆ ಭಯಮಯನಾದೆಂ ಭಯಾನಕ
--------------
ಶ್ರೀವಿಜಯ
ದಿನಕರ ಕರನಿಕರಂಗಳ್ ಘನವಿವರ ಪ್ರಸರಮಾಗಿಯುಂ ತಮ್ಮಂ ಕಂ ಡನಿತಱೊಳೆ ತೆರಳ್ದೆನ್ನಾ ಮನೋಗತಧ್ವಾಂತಬಂಧುಮಳಱೆತ್ತೆಲ್ಲಂ
--------------
ಶ್ರೀವಿಜಯ
ದೆಸೆಗಳ್ ವಿಶಾಲಮಾದುವು ಕೆಸಱೆ೦ ಪಿಂಗಿತ್ತು ಧರಣಿ ತಿಳಿದುವು ಕೊಳಗಳ್ ಶ್ವಸನಪಥಮಮಳಮಾಯ್ತಿಂ ದೊಸೆಗೆಗಳಂ ಬೀಱುವಂತೆ ಶರದಾಗಮದೊಳ್
--------------
ಶ್ರೀವಿಜಯ
ದೊರೆಕೊಂಡಿರೆ ಸೊಗಯಿಸುಗುಂ ಪುರಾಣ ಕಾವ್ಯ ಪ್ರಯೋಗದೊಳ್ ತತ್ಕಾಲಂ ವಿರಸಮ ಕರಮವು ದೇಸಿಗೆ ಜರದ್ವಧೂವಿಷಯ ಸುರತ ರಸರಸಿಕತೆವೋಲ್
--------------
ಶ್ರೀವಿಜಯ
ದೊರೆಕೊಂಡು ಮನದ ಬಗೆಯಂ ಪಿರಿದಾಗಿರೆ ಪಿರಿಯರೊಸಗೆಯಂ ಪೇೞ್ವೊಡದುಂ ಪರಮಾಶೀರಾರ್ಥಾಳಂ ಕರಣಾಂತರಮದಱ ಲಕ್ಷ್ಯಮೀ ತೆಱನಕ್ಕುಂ
--------------
ಶ್ರೀವಿಜಯ
ದೋಷಂಗಳಿಂತು ಮಿಗೆ ಸಂ ಶ್ಲೇಷದೊಳಾದಂದು ಸಕಲ ವಿದ್ವತ್ಸಭೆಯೊಳ್ ದೂಷಿಸುಗುಂ ಕೃತಿವಧುವಂ ಭಾಷಾವಿದರದಱ ತೆಱನನುೞಿ ಗೀ ದೆಸೆಯಿಂ
--------------
ಶ್ರೀವಿಜಯ
ದೋಸಮಿನಿತೆಂದು ಬಗೆದು ದ್ಭಾಸಿಸಿ ತಱೆಸಂದು ಕನ್ನಡಂಗಳೊಳೆಂದುಂ ವಾಸುಗಿಯುಮಱೆಯಲಾಱದೆ ಬೇಸಱುಗುಂ ದೇಶೀ ಬೇಱಿವೇಱಪ್ಪುದಱಿಂ
--------------
ಶ್ರೀವಿಜಯ
ದ್ವಿಪ್ರಾಸಂ ಸುಭಗ ದ್ವಂ ದ್ವಪ್ರಾಸಂ ಕಾವ್ಯರಚನೆಗುಚಿತಮೆನಿಪ್ಪಾ ತ್ರಿಪ್ರಾಸಂ ಸೆಲೆಯಂತಾ ದಿಪ್ರಾಸಂ ಬೇಱಿ ನಾಲ್ಕು ತೆಱನಾಗಿರ್ಕ್ಕುಂ
--------------
ಶ್ರೀವಿಜಯ
ಧನಮಂ ನೆರಪದೆ ವಿದ್ಯಾ ಧನಮಂ ಮಾಡದೆ ತಗುಳ್ದು ನೆಗೞರದೆ ತಪದೊಳ್ ಮನುಜತ್ವಮಫಲಮಾಯ್ತೆಂ ತೆನಗೆಂಬುದನ ಱಿ ವುದನುಶಯಾಕ್ಷೇಪಕಮಂ ಅನುಶಯಾಕ್ಷೇಪ
--------------
ಶ್ರೀವಿಜಯ
ನರಲೋಕಚಂದ್ರ ಮತದಿಂ ಪರಮಾಲಂಕಾರಮುಂ ಶರೀರಮುಮೆಂದಿಂ ತೆರಡಕ್ಕುಂ ಭೇದಂ ಬಹು ಪರಿಕರಮಾ ಕಾವ್ಯವಸ್ತು ಪುರುಷಂಗೆಂದುಂ
--------------
ಶ್ರೀವಿಜಯ
ನಾನಾ ವಸ್ತುವಿಭೇದಮ ನೇನಾನುಂ ತೆಱದೆ ಪೋಲ್ಕೆ ಮಾಡುವುದುಪಮಾ ಮಾನಿತ ಸದಳಂಕಾರಮ ನೂನ ವಿಕಲ್ಪಪ್ರಪಂಚಮೀ ತೆಱನದಱಾ
--------------
ಶ್ರೀವಿಜಯ
ನಿನ್ನ ಮುಖದಂತೆ ಕಮಳಮಿ ದುನ್ನಿದ್ರಂ ನಿನ್ನ ತಳದವೋಲಾರಕ್ತಂ ನನ್ನಿಯಿನೀ ಪಲ್ಲವಮೆನೆ ಸನ್ನುತರೂಪಿಂ ವಿಪರ್ಯಯೋಪಮಮಕ್ಕುಂ ವಿಪರ್ಯಯೋಪಮೆ
--------------
ಶ್ರೀವಿಜಯ
ನಿನ್ನಂತೆ ಸುರೇಶ್ವರನು ತ್ಪನ್ನಮಹೈಶ್ವರ್ಯನೆಂಬುದುಂ ಜಲನಿಧಿ ತಾಂ ಸನ್ನುತ ಗಭೀರನೆಂಬುದು ಮಿನ್ನದು ಹೀನಾಧಿಕಪ್ರಶಂಸಾನುಗುಣಂ
--------------
ಶ್ರೀವಿಜಯ
ನುಡಿಗಳೊಡಂಬಡಲ್ ಬಗೆದವೋಲ್ ಬಗೆಯಂ ಮಿಗಲೀಯದೊಂದೆ ನಾ ೞ್ನುಡಿಯ ಬೆಡಂಗೆ ಕನ್ನಡದ ಮಾತಿನೊಳಾ ವಿಕಟಾಕ್ಷರಂಗಳೊಳ್ ತೊಡರದೆ ಸಕ್ಕದಂಗಳ ಪದಂ ಪವಣಾಗಿರೆ ಮೆಲ್ಪುವೆತ್ತು ದಾಂ ಗುಡಿವಿಡುವಂತೆ ನೀಳ್ದು ನಿಲೆ ಪೇೞ್ವುದು ನೀತಿನಿರಂತರಕ್ರಮಂ
--------------
ಶ್ರೀವಿಜಯ
ನುಡಿಗೆಲ್ಲಂ ಸಲ್ಲದ ಕ ನ್ನಡದೊಳ್ ಚತ್ತಾಣಮುಂ ಬೆದಂಡೆಯುಮೆಂದೀ ಗಡಿನ ನೆಗೞ್ತೆಯ ಕಬ್ಬದೊ ಳೊಡಂಬಡಂ ಮಾಡಿದರ್ ಪುರತಾನ ಕವಿಗಳ್
--------------
ಶ್ರೀವಿಜಯ