ಒಟ್ಟು 2231 ಕಡೆಗಳಲ್ಲಿ , 1 ಕವಿಗಳು , 523 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸಮುದಾಯಾರ್ಥಮನಾರಯೆ ಸಮನಿಸುವರ್ಥಪ್ರತೀತಿ ತೋಱದೊಡೆಲ್ಲಂ ಕ್ರಮಮಕ್ಕುಮರ್ಥಶೂನ್ಯಂ ಸಮಸ್ತ ಕವಿವೃಷಭ ದೂರದೂಷಿತಮಾರ್ಗಂ
--------------
ಶ್ರೀವಿಜಯ
ಸಮುದಿತ ಕುಸುಮಾಮೋದೋದಯೋದ್ಯಾನಲೀಲಾ ಕ್ರಮವಿಹಿತ ಜಲಕ್ರೀಡಾವಿನೋದಾದಿನೀತಂ ಪ್ರಮದಮದ ದನಮಾದ್ಯದ್ಯೌವನೋದ್ಯಾನ ರಾಮಂ ರಮಣರಣಿತ ಗೋಷ್ಠೀಬಂಧ ಸಂಧಿಪ್ರಬಂಧಂ
--------------
ಶ್ರೀವಿಜಯ
ಸರಸಿಜದೊಳ್ ನಿನ್ನ ಮುಖಂ ತರುಣೀ ಸದೃಶಮ ಸಮಂತು ಪೋಲದು ಪೆಱತಂ ನಿರುತಮಿದೆಂಬುದು ನಿಯಮಾಂ ತರಿತಂ ನಿಯಮೊಪಮಾವಿಕಲ್ಪಿತಭಾಗಂ ನಿಯಮೋಪಮೆ
--------------
ಶ್ರೀವಿಜಯ
ಸರಸಿಜಬಾಂಧವನಸ್ತಾಂ ತರಗತನಾಗಿರೆ ಸರೋಜಿನೀವನಮಾದಂ ಕೊರಗುತ್ತೆ ಮುಗಿಗುಮೀಶ್ವರ ವಿರಹದೆ ಶೋಕಾಕುಲಂ ವಿಶೇಷಾಪ್ತಜನಂ ವಿಶೇಷಪ್ರಕಾಶಕಂ
--------------
ಶ್ರೀವಿಜಯ
ಸರಸಿಜಮೋ ಮೊಗಮೋ ಮೇಣ್ ದ್ವಿರೇಫಮೋ ಲೋಲನಯ ನಯುಗಮೋ ಮನದೊಳ್ ಪಿರಿದುಂ ಸಂಶಯಮೆಂಬುದು ನಿರಂತರಂ ಸಂಶಯೋಪಮಾಲಂಕಾರಂ ಸಂಶಯೋಪಮೆ
--------------
ಶ್ರೀವಿಜಯ
ಸರಸಿಜವಿರೋಧಿ ಕಾಂತ್ಯಾ ಕರಮ ಮೃತಮಯಂ ತ್ವದೀಯ ಮುಖಶಶಿಯುಂಟಾ ಗಿರೆ ಶಶಿಯದೇವುದೆಂಬುದು ನಿರುತಂ ಶ್ಲೇಷಾನುವಿದ್ಧಮಪ್ಪಾಕ್ಷೇಪಂ ಶ್ಲೇಷಾಕ್ಷೇಪ
--------------
ಶ್ರೀವಿಜಯ
ಸರಸಿರುಹಮಿಂದುದೀಧಿತಿ ಪರಾಜಿತಶ್ರೀವಿಲಾಸಮೀ ನಿನ್ನ ಮುಖಂ ಹರಿಣಧರವಿಜಯಶೋಭಾ ಕರಮೆಂಬುದಿದೂರ್ಜಿತೋಪಮಾನ ವಿಭಾಗಂ ಊರ್ಜಿತೋಪಮೆ
--------------
ಶ್ರೀವಿಜಯ
ಸರಸೀಜಂ ಸರಜಂ ಶಶ ಧರ ಬಿಂಬಮದತಿ ಕಳಂಕಿತಂ ನಿನ್ನ ಮೊಗಂ ನಿರುಪಮಮಾಗಿಯುಮವಱೊಳ್ ದೊರೆಯೆಂಬುದನಱಿದುಕೊಳ್ಗೆ ನಿಂದೋಪಮೆಯಂ ನಿಂದೋಪಮೆ
--------------
ಶ್ರೀವಿಜಯ
ಸರಿದಧಿಪತಿಯಂ ದೋಷಾ ಕರನಂತರ್ಮಲಿನನಾಗಿಯುಂ ಪೆರ್ಚಿಸುಗುಂ ಪರಿಣತ ಕಲಾಕಲಾಪಂ ಪರಿವರ್ಧಕನಕ್ಕುಮತಿ ವಿರುದ್ಧಾತ್ಮಕನಂ ವಿರುದ್ಧಾತ್ಮಕಂ
--------------
ಶ್ರೀವಿಜಯ
ಸವಿವೊಡೆ ಮಧುರರಸಂಬೋಲ್ ಕಿವಿಗಿನಿದಾಗಿರ್ಪ ವಚನವಿರಚನೆ ಮಧುರಂ ಸವಿಳಾಸಾಳಾಪದಿನವ ರ ವಿಶೇಷ ವಿಶೇಷ್ಯಮಿಂತು ಮಾರ್ಗದ್ವಯದೊಳ್
--------------
ಶ್ರೀವಿಜಯ
ಸವಿಶೇಷಾಲಂಕಾರೋ ದ್ಭವಮಾಗಿಯುಮೊಂದುವರ್ಥದೊಳ್ ಸಂಬಂಧ ವ್ಯವಧಾನಮಾದೊಡಕ್ಕುಂ ವ್ಯವಹಿತದೋಷಂ ಪ್ರಯೋಗಮೀತೆಱದನಱಾ
--------------
ಶ್ರೀವಿಜಯ
ಸವಿಹಿತಮಪ್ಪ ಕರ್ಣಪೂರೋತ್ಪಳಮಂ ಧವಳ ವಿಲೋಚನೆಯ ಗುಣ ಸುಂದರಮಂ ಕಿವಿವರಂ ನೀಳ್ದ ನಯನಯುಗದೊಳೊ ಪ್ಪುವವಳಾನವಯವದೇಕೆ ಕಳೆಯವೇೞ್ದಿಂ ಪ್ರಿಯೆಯಂ (ಭಾವೆ)
--------------
ಶ್ರೀವಿಜಯ
ಸಾದುಗೆತ್ತು ಬಗೆಯಾದವನಾನೋಡನಟ್ಟಿದೆ ನಾದಮಾನುಮೞಿ ಮಾನಸನಾಗದೆ ಮಾಳದೊಳ್ ಮೋದದಾನುಡುವ ಸೀರೆಗಮೆನ್ನನದಿರ್ಪಿಬಾ ರದೆ ಪೋದೆಡೆಯೊಳೆ ತಡೆದಾನವನೆಂದಪಂ
--------------
ಶ್ರೀವಿಜಯ
ಸುಕುಮಾರತರಾಕ್ಷರಪದ ನಿಕರ ವಿಶಿಷ್ಟಪ್ರಯೋಗಗತಮಪ್ಪುದದಾ ಸುಕುಮಾರಮೆಂಬುದಕ್ಕುಂ ಪ್ರಕಟಿತಮದಱಾ ಪ್ರಯೋಗಮೀ ತೆಱನಕ್ಕುಂ
--------------
ಶ್ರೀವಿಜಯ
ಸುಭಟರ್ಕಳ್ ಕವಿಗಳ್ ಸು ಪ್ರಭುಗಳ್ ಚೆಲ್ವರ್ಕಳಭಿಜನರ್ಕಳ್ ಗುಣಿಗಳ್ ಅಭಿಮಾನಿಗಳತ್ಯುಗ್ರರ್ ಗಭೀರಚಿತ್ತರ್ ವಿವೇಕಿಗಳ್ ನಾಡವರ್ಗಳ್
--------------
ಶ್ರೀವಿಜಯ