ಒಟ್ಟು 84 ಕಡೆಗಳಲ್ಲಿ , 1 ಕವಿಗಳು , 70 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಧವಳಾಪಾಂಗಂ ಕೇಕಾ ರವಮುಖರಂ ಹರಿತಶಾಬಲಾಂಕ ಕಳಾಪಂ ನವಿಲಾದಂ ಸೊಗಯಿಸುಗುಂ ಸುವಿನೀಲಾಯತಗಳಂ ಪಯೋದಾಗಮದೊಳ್ ಜಾತಿಸ್ವಭಾವಾಖ್ಯಾನಂ
--------------
ಶ್ರೀವಿಜಯ
ನರಪತಿಯಂ ಕಪಿಪೃತನಾ ಪರಿವೃತನಂ ಜಳಧಿತಟದೊಳಣುವಂ ಕಂಡಂ ಪರಮಾನುಭಾವ ಭಾಸುರ ಸುರರಾಜೋಪಮಿತ ವಿವಿಧ ವಿಭವೋದಯನಂ
--------------
ಶ್ರೀವಿಜಯ
ನಿಗದಿತ ಕಾವ್ಯೋಕ್ತಿಗಳೊಳ್ ನೆಗೞ್ದುವು ಮಾರ್ಗಂಗಳಿಂತುಮೆರುಡುಕ್ತಿಗಳುಂ ಬಗೆವಾಗಳೆರಡು ಮಾೞ್ಕಿಯೊ ಳೊಗೆದುವು ವಕ್ರ ಸ್ವಭಾವ ನಿಯತಿಕ್ರಮದಿಂ
--------------
ಶ್ರೀವಿಜಯ
ನಿಗದಿತ ಯಾಥಾಸಂಖ್ಯಾ ನುಗತವ್ಯತಿರೇಕಯುಗಳ ಲಕ್ಷ್ಯಮಿವಕ್ಕುಂ ಬಗೆಗಾ ದೀಪಕದ ವಿಭಾ ಗ ಗತಿಯನೀ ಭೇದಲಕ್ಷ್ಯಲಕ್ಷಣಯುಗದಿಂ
--------------
ಶ್ರೀವಿಜಯ
ನುತಪರಿವೃತ್ತಿ ವ್ಯಾಜ ಸ್ತುತಿ ಹೇತು ವಿಭಾವನಾ ಲವೋದಾತ್ತಾಪ ಹ್ನುತಿ ರಸವದೂರ್ಜಿತ ವ್ಯಾ ವೃತಿ ಪ್ರಿಯತರಾಶಿಗಳ್ ಕ್ರಮಾದ್ಯುಕ್ತಂಗಳ್
--------------
ಶ್ರೀವಿಜಯ
ಪಡೆಯಱಿಯಲಾದೊಡರಿಯಂ ಕಿಡಿಸುಗುಮಂತಃಕಳಂಕ ನೃಪಮಂಡಲಮಂ ತಡೆಯದೆ ತಮಸ್ಸ್ವಭಾವಂ ಕಿಡಿಸುವವೋಲಱಿದು ರಾಹು ಶಶಿಮಂಡಲಮಂ
--------------
ಶ್ರೀವಿಜಯ
ಪರಮ ಶ್ರೀಕೃತಿವಧುವಾ ಶರೀರಶೋಭಾಕರಂಗಳಪ್ಪ ಗುಣಂಗಳ್ ನಿರತಿಶಯಾಲಂಕಾರ ಪ್ರರೂಪಿತಂಗಳ್ ಪುರಾಣ ಕವಿ ವಿದಿತಂಗಳ್
--------------
ಶ್ರೀವಿಜಯ
ಪರಮಾನುಭಾವ ಭಾಸುರ ಸುರರಾಜೋಪಮಿತ ವಿವಿಧ ವಿಭವೋದಯನಂ ನರಪತಿಯಂ ಕಪಿಪೃತನಾ ಪರಿವೃತನಂ ಜಲಧಿತಟದೊಳಣುವಂ ಕಂಡಂ
--------------
ಶ್ರೀವಿಜಯ
ಪರಮಾನುಭಾವನಭಿಮಾನಿ ವಿನೋದಶೀಲಂ ಪರನತ್ಯುದಾರಚರಿತೋದಯನೇಕರೂಪಂ ಸರಸಾಶ್ರಯಪ್ರವರಮೂರ್ತಿ ಪರೋ ಪಕಾರಂ ನಿರತಂ ಗುಣೋದಯನಕಾರಣಧುರ್ಯಮಿತ್ರಂ
--------------
ಶ್ರೀವಿಜಯ
ಪರಮೋದಯರಿರ್ ಕಮಲಾ ಕರಬೋಧಕರಿರ್ ದಿನೇಶನುಂ ನೀನುಂ ಭಾ ಸ್ಕರನನಿಯತ ವೃತ್ತಕ್ರಮ ನರಸಾ ನಿನ್ನಂತೆ ನಿಯತವೃತ್ತಸ್ಥಿತ ನೇಂ ಉಭಯ ವ್ಯತಿರೇಕಂ
--------------
ಶ್ರೀವಿಜಯ
ಪರಸುವೆನೆನ್ನದಾಂ ಪರಪೆನೆಂಬುದಿದಾಗದು ಚಿತ್ತನಾಥನೊಳ್ ಬೆರಸುವೆನೆನ್ನದಾಂ ಬೆರಪೆನೆಂಬುದಿದಾಗದು ಮಾರ್ಗಯುಗ್ಮದೊಳ್ ನಿರತಿಶಯಾನುಭಾವಭವನಪ್ಪ ಮಹಾನೃಪತುಂಗ ದೇವನಾ ದರದೊಳೆ ಪೇೞ್ದ ಮಾರ್ಗಗತಿಯಿಂ ತಱೆಸಲ್ಗಿದನಿಂತೆ ಕಬ್ಬಿಗರ್
--------------
ಶ್ರೀವಿಜಯ
ಪರಿದೆಯ್ದಿ ತಾಗಿದಂ ಭಾ ಸುರತರ ರಘುಕುಲಲಲಾಮನೊಳ್ ಲಕ್ಷ್ಮಣನೊಳ್ ಪರಿಕೋಪವಶಭ್ರಮಣೋ ದ್ಧುರ ರಕ್ತಕಠೋರಲೋಚನಂ ದಶವದನಂ
--------------
ಶ್ರೀವಿಜಯ
ಪುರುಷೋತ್ತಮರಾರ್ ನಿನ್ನ ನ್ನರುದಾ [ರರ] ರಾತಿಸಮಿತಿಯಂ ಕೊಂದಿರ್ದುಂ ಸುರಸುಂದರಿ ಲೀಲಾಲಸ ಪರಿರಂಭಾರಂಭ ಸುರತ ಸುಖದೊಳ್ ನಿಱೆಪರ್
--------------
ಶ್ರೀವಿಜಯ
ಪ್ರಣತಾರಿ ಘಟಿತಮುಕ್ತಾ ಮಣಿಗಣಮುತ್ತಂಸದಿಂ ಕೞಲ್ತುದಿರೆ ಸಭಾಂ ಗಣಮೊಪ್ಪೆ ವೀರನಾರಾ ಯಣನಾ ತಾರಕಿತನಭದವೋಲ್ ಸೊಗಯಿಸುಗುಂ
--------------
ಶ್ರೀವಿಜಯ
ಪ್ರಣುತ ಗುಣಸೂರಿ ನಾರಾ ಯಣ ಭಾರವಿ ಕಾಳಿದಾಸ ಮಾಘಾದಿಗಳೀ ಗಣಿದದೊಳೆ ಮಹಾಕಾವ್ಯ ಪ್ರಣಯಮನಾಗಿಸಿದರಮಳ ಕವಿವೃಷಭರ್ಕಳ್
--------------
ಶ್ರೀವಿಜಯ