ಒಟ್ಟು 36 ಕಡೆಗಳಲ್ಲಿ , 1 ಕವಿಗಳು , 34 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮಾತಱೆ ವರ್ ಕೆಲಬರ್ ಜಗ ತೀತಳಗತ ಮನುಜರೊಳಗೆ ಮಾತಱೆ ವವರೊಳ್ ನೀತಿವಿದರಮಳ ಕವಿತಾ ನೀತಿಯುತರ್ ಕೆಲರೆ ಪರಮ ಕವಿ ವೃಷಭರ್ಕಳ್
--------------
ಶ್ರೀವಿಜಯ
ಮಾರುತೀ ಪರಮೋದಾರದಾರನೊಳ್ ಕೂಡು ನಲ್ಲನೊಳ್ ಸಾರ ಕಾದಂಬಿನೀನಾಥನಾರೂಢ ಗುಣಧಾಮನೊಳ್ (ಅತಾಲವ್ಯಂ) ನರನಾಯಕನಂ ನಿಂದಾನಿರದೀಗಳೆ ಕಾಂತನಂ ನೆರೆದೇನದಱಿ೦ದಿಲ್ಲಾ ನೆರೆದಿರ್ದಾಗೆನಾಗೆನೆ (ನಿರೋಷ್ಮ್ಯಂ)
--------------
ಶ್ರೀವಿಜಯ
ಲೌಕಿಕ ಸಾಮಯಿಕೋರು ವಿ ವೇಕಮುಮಭ್ಯುದಯ ಪರಮ ನಿಃಶ್ರೇಯಸಮುಂ ಪ್ರಾಕಟಮಕ್ಕುಂ ವಿದಿತಾ ನೇಕ ಕವೀಶ ಪ್ರಯೋಗ ಪದಪದ್ಧತಿಯೊಳ್
--------------
ಶ್ರೀವಿಜಯ
ವರ ಶಬ್ದಾಲಂಕಾರದ ವಿರಚನೆಗಳ್ ನೋೞ್ಪೊಡೊಂದೆ ತೋರ್ಕೆಗಳಿಂತುಂ ಪೊರೆದಿರಲೊಂದೊಂದಱೊಳಾ ಪರಮ ಕವೀಶ ಪ್ರಯೋಗಗತಮಾರ್ಗಂಗಳ್
--------------
ಶ್ರೀವಿಜಯ