ಒಟ್ಟು 181 ಕಡೆಗಳಲ್ಲಿ , 1 ಕವಿಗಳು , 127 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಜನವಿನುತನನಘನನುಪಮ ನನುನಯಪರನರಸನಿನಿಸು ನೆನೆನೆನೆದು ಮನೋ ಜನಿತಮುದನನಿಲತನಯನ ನನನೃತ ವಚನ ಪ್ರಪಂಚನಿಂತಿರೆ ನುಡಿದಂ
--------------
ಶ್ರೀವಿಜಯ
ಜನಿತ ವಿಭಾಗಂಗಳ್ ವಾ ಙ್ಮನಸಾತೀತಂಗಳಿಂತು ಮಾರ್ಗೋಕ್ತಿಗಳೊಳ್ ನೆನೆದಱಿ ಪಲಾರ್ಪರಾರದ ನನಿಶ್ವತ ಕ್ರಮ ವಿಶೇಷ ಗುಣಯುಕ್ತಕಮಂ
--------------
ಶ್ರೀವಿಜಯ
ಜಲದದ ನೆೞಲುಂ ಪರಪುಂ ವಿಲಾಸಮುಂ ಬೆಳಗುವುದಿತ ವಿದ್ಯುಲ್ಲತೆಯುಂ ನೆಲಸವು ಚಲಂಗಳಾದಂ ವಿಲಾಸಿನೀಜನದ ನಲ್ಮೆಯುಂ ಸಂಗಮಮುಂ
--------------
ಶ್ರೀವಿಜಯ
ಜಾತಿವಿಭಾಗಮಂ ಬಗೆದು ಪೇೞಿ ಬಹುತ್ವಮನೇಕ ವಾಕ್ಯ ಸಂ ಜಾತಗುಣಂ ತದೇಕವಚನಂಗಳೊಳಂ ದೊರೆವೆತ್ತು ಕೂಡುಗುಂ ಮಾತಿನೊಳೇನೋ ಸಂಖ್ಯೆಗಳೊಳೇಕ ಬಹುತ್ವ ವಿಪರ್ಯಯಕ್ಕಸಂ ಖ್ಯಾತಗುಣಂ ವಿಕಲ್ಪಮದು ಕನ್ನಡದೊಳ್ ಗುಣಮಂ ತಗುಳ್ಚುಗುಂ
--------------
ಶ್ರೀವಿಜಯ
ತಳಮಳ[ಗೊ]ತ್ತುಂ ಜನಿತನಿಜಭೀತಿ ಮನಂ ಗೊಳೆ ಕಳವಳಿಸಿ ಚಲಿತ ನಿಲಲಣ್ಮದೆ [ಮೊ] ಕ್ಕಳ[ಮೊ]ಳಗೆ ಸುೞಿದರರಸಂ ಮನದೊಳ್ ಮುಳಿದಸಿಯನೆ ನೋ[ಡೆ] ಪರಿವಾರದವರ್ (ವರ್ಣಚ್ಯುತಕಂ)
--------------
ಶ್ರೀವಿಜಯ
ತಿರಿತರ್ಕುಮಮಳ ಜಳನಿಧಿ ಪರಿಖಾವೃತಭೂಮಿಭಾಗಮಂ ಭರದೆ ಜಳಾ ಕರವಿಕ್ಷೇಪಕ ಕಕುದಂ ತರಮಂ ಸವಿಶೇಷರುಚಿರ ಸಂಭವ ನಿಧಿಯಂ ಕ್ರಿಯಾನುಗತ ಆದಿದೀಪಕಂ
--------------
ಶ್ರೀವಿಜಯ
ದಾನಪರನಂ ನಿಜೋನ್ನತ ಮಾನನನಾರೂಢವಿಪುಳ ವಂಶನನಂತೊಂ ದಾನೆಯನಪಾಯಪಂಕದೊ ಳೇನುಂ ತಳ್ವಿಲ್ಲದಿರ್ದ್ದುದಂ ಕಾಣಿಸಿದಂ
--------------
ಶ್ರೀವಿಜಯ
ದಿನನಾಯಕನಪರದಿಗಂ ಗನೆಯೊಳ್ ನೆರೆದು ದಿತರಾಗನಾದಂ ಪೀನಂ ಜನಿಯಿಸುಗುಮಧಿಕರಾಗಮ ನೆನಸುಮಪಕ್ರಮದೆ ವಾರುಣೀ ಸಂಶ್ಲೇಷಂ ಪ್ರಕಟಶ್ಲೇಷಂ
--------------
ಶ್ರೀವಿಜಯ
ದೇವರುಂ ಗೊರವರುಂ ಗುಣವೃದ್ಧರನಾರತಂ ಕಾವರಕ್ಕರಸನಂ ಪ್ರಜೆಯಂ ಪರಿವಾರಮಂ ಏವಮಂ ಬಗೆಯದಂತಿರೆ ಪೇೞ್ದ ಸಮುಚ್ಚಯೋ ದ್ಭಾವಕಕ್ರಮವಿಚಾರದೆ ದೋಷಮಿದಗ್ಗಳಂ
--------------
ಶ್ರೀವಿಜಯ
ದೊರೆಕೊಂಡು ಮನದ ಬಗೆಯಂ ಪಿರಿದಾಗಿರೆ ಪಿರಿಯರೊಸಗೆಯಂ ಪೇೞ್ವೊಡದುಂ ಪರಮಾಶೀರಾರ್ಥಾಳಂ ಕರಣಾಂತರಮದಱ ಲಕ್ಷ್ಯಮೀ ತೆಱನಕ್ಕುಂ
--------------
ಶ್ರೀವಿಜಯ
ದೋಸಮೇನಾನುಂ ಸ್ವಲ್ಪಮಾದೊಡಂ ಮಾಸಿಸಿರ್ಕ್ಕುಮಣಂ ಕೃತಿವಧುವಂ ಪೇಸದೆ ದುರ್ಜನದೊಳಾದ ಪರಿಚಯಂ ಮಾಸಿಸಿ ಕಿಡಿಸುವವೊಲೊಪ್ಪುವ ಕುಲವಧುವಂ (ವೃತ್ತ)
--------------
ಶ್ರೀವಿಜಯ
ನಯವಿದುದಿತಯುಕ್ತಿವ್ಯಕ್ತಿಲೋಕ ಪ್ರತೀತ್ಯಾ ಶ್ರಯ ಸಕಳಕಳಾಲೀಲಾಕರಾಲ್ಪೋ ಪಜಲ್ಪಂ ನಿಯತಸಮಯ ಸಾರಾಸಾಧನೀಯಾದಿಕಾರಾ ನ್ವಯಪರಮ ತಪೋನುಷ್ಠಾನನಿಷ್ಠಾರ್ಥಸಿದ್ಧಂ
--------------
ಶ್ರೀವಿಜಯ
ನರದಾನಪರೊನೆಂನೆ ನರದಾ ಕೆನರಾಕಮಾ ಅರಿದೈತಂದಾದರಿಕ್ಕುಂ ಪರಿದಾನ ಪರಾದಿಯೆ? (ಅರ್ಧಭ್ರಮಣಂ) ವರದಾನ ಪರಾದನ್ಯಂ ಪರದಾನಪರಾದಮಂ ನೆರದಾವದಿರಾಜನ್ಯಂ ಪರಿಜನಪರಾದಮಂ (ಮುರಜಬಂಧಂ)
--------------
ಶ್ರೀವಿಜಯ
ನರಪತಿ ಬಂದನಾ ನೃಪನನೞ್ತಿಯೆ ಕಾಣ್ಬುದು ತನ್ನರೇಂದ್ರನಿಂ ಧರಣಿ ಸನಾಥೆ ಭೂಪತಿಗೆ ಕಪ್ಪವನಿತ್ತವನೀಶನತ್ತಣಿಂ ಪರಿಭವಮಂ ಕೞಲ್ಚುವುದಧೀಶ್ವರನಾ ದಯೆಸಾಲ್ಗುಮಾ ಮಹೀ ಶ್ವರನೊಳಿದಪ್ಪುದೆಂಬುದಿದು ಕಾರಕಯುಕ್ತ ವಿಭಕ್ತ್ಯನುಕ್ರಮಂ
--------------
ಶ್ರೀವಿಜಯ
ನರಪತಿತನಯನನಾಯತ ತರಳಾಪಾಂಗದೊಳೆ ನೋಡಿ ಕೆಳದಿಯರೊಡನಾಂ ಪರಿಗತ ಹಾಸ್ಯದೊಳಿರ್ದೆಂ ಗುರುಲಜ್ಜಾಭರದಿನೆಱಗಿ ಮುಖಸರಸಿಜಮಂ
--------------
ಶ್ರೀವಿಜಯ