ಒಟ್ಟು 155 ಕಡೆಗಳಲ್ಲಿ , 1 ಕವಿಗಳು , 118 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕರೆಕರೆದು ಮನೋಧೃತಿಯಂ ನೆರೆವಾಸೆಯೊಳಿರ್ದಳಲ್ಲದುೞಿದೊಡೆ ನಿನ್ನಾ ವಿರಹಾನಳನಾ ತಾಪದೆ ಕರಗುಗುಮಿನ್ನಾಕೆಗಿನಿಸು ಕರುಣಿಸು ಮನದೊಳ್ ಕರುಣಾ
--------------
ಶ್ರೀವಿಜಯ
ಕಾಣನೇಗೆಯ್ದುಂ ತನ್ನ ದೋಷಮಂ ಕಾಣದಂತೆಂದುಂ ಕಣ್ಗಲ್ ತಮ್ಮ ಕಾಡಿಗೆಯಂ ಪೂಣಿಗನಾದುದಱಿಂ ಪೆಱರಿಂ ಜಾಣರಿನೋದಿಸಿ ಪೇೞ್ವುದು ಕಬ್ಬಮಂ
--------------
ಶ್ರೀವಿಜಯ
ಕಾರಕದೋಷಮುಂ ವಚನದೋಷಮುಮಾ ಗುರುದೋಷಮುಂ ಲಘೂ ಚ್ಚಾರಿತ ಶಬ್ದದೋಷಮುಮದಂತೆ ಸಮುಚ್ಚಯಜಾತದೋಷಮುಂ ಭೂರಿ ವಿಕಲ್ಪದೋಷಮುಮದಿನ್ನವಧಾರಣದೋಷಮುಂ ವಿಶಂ ಕಾ ರಚಿತೋರು ದೋಷಮುಮನೀ ತೆಱದಿಂ ತೞಿಸಲ್ಗೆ ಪಂಡಿತರ್
--------------
ಶ್ರೀವಿಜಯ
ಕಾವೇರಿಯಿಂದಮಾ ಗೋ ದಾವರಿವರಮಿರ್ಪ ನಾಡದಾ ಕನ್ನಡದೊಳ್ ಭಾವಿಸಿದ ಜನಪದಂ ವಸು ಧಾವಳಯವಿಲೀನವಿಶದ ವಿಷಯ ವಿಶೇಷಂ
--------------
ಶ್ರೀವಿಜಯ
ಕುಮುದಾನಂದನಕರವತಿ ಕಮಲಾಕರರಾಗಹರಮುದಾರಂ ನಿನ್ನಾ ವಿಮಳಯಶೋವಿಧುವೆಂಬುದು ಕಮನೀಯಂ ಶ್ಲೇಷರೂಪಕಾಲಂಕಾರಂ ಶ್ಲೇಷರೂಪಕಂ
--------------
ಶ್ರೀವಿಜಯ
ಕುಱಿಗೊಂಡು ನೆಗೞ್ದನಿಚ್ಛೆಯ ನಱಿಯದೆ ತನ್ನಿಚ್ಛೆಯಿಂದೆ ಕಜ್ಜಂಬೇೞ್ವಂ ತಱಿ ಸಲಿಸಲಾಱನಾರ್ತನ ತೆಱನಱಿಯದೆ ಮರ್ದ್ದುವೇೞ್ವ ಬೆಜ್ಜನ ತೆಱದಿಂ
--------------
ಶ್ರೀವಿಜಯ
ಕೇಡಡಸಿದೊಡಂ ಬಗೆ (ಯು)೦ ಕೂಡದು ಕೂಡಿದುದುಮಱೆದು ವಿಪರೀತಮುಮಂ ಮಾಡುಗುಮದಱೆ೦ ಕರ್ಮ ಕ್ಕೋಡಿ ಬರ್ದುಂಕಲ್ಕೆ ಕಲ್ತರಾರ್ ಬಿನ್ನಣಮಂ
--------------
ಶ್ರೀವಿಜಯ
ಕೊಲ್ಲೆಂ ಬಿಸುಡಾಯುಧಮಂ ಪುಲ್ಲಂ ಕರ್ಚೇಱು ಪುತ್ತನಡಿಗೆಱಿಗೆನ್ನಾ ನಿಲ್ಲದೆ ತೊಲಗಿದಿರಿಂದಂ ತಲ್ಲದೊಡೆೞ್ದಾರ್ದು ಕೈದುಗೆಯ್ ನೀನೀಗಳ್
--------------
ಶ್ರೀವಿಜಯ
ಕ್ಷಿತಿಪತಿಯಂ ಬರಿಸಿ ಜಗ ನ್ನುತನಂ ಸಂತೈಸಿ ಕುಶಲವಾರ್ತಾಂತರಮಂ ಮಿತವಚನಂ ಬೆಸಗೊಂಡತಿ ವಿತೀರ್ಣಮುದನಾದನಾತನೆಂಬುದು ಮಾರ್ಗಂ
--------------
ಶ್ರೀವಿಜಯ
ಗುರುಜನದ ಪರಕೆಯುಂ ಬಂ ಧುರ ಪುಣ್ಯಫಳಾನುಬಂಧಮುಂ ನೆರೆದೆನ್ನೊಳ್ ಪರಮಾನುಭಾವಭರಮುಂ ದೊರೆಕೊಂಡುವವಿದು ಬರವಿನೊಳ್ ನಿಮ್ಮಡಿಯಾ
--------------
ಶ್ರೀವಿಜಯ
ಘನಸ್ತನಿತಮುಂ ಕೇಕಿಸ್ವನಮುಂ ನೀರಧಾರೆಯುಂ ಮನಂ ಬೆರ್ಚಿರ್ಕುಮಿಂತೆತ್ತಂ ಘನಮಿಂತು ಘನಸ್ತನಿ (ಗೂಢಚತುರ್ಥಂ) ನಿನ್ನಿಂ ನಿಂನ್ನನೆನೆಂನಿನಾ ನಾನಾನನನಂ ನನನಂ ನೀನೆಂನನ್ನಂನನಾನಾ ನಿಂನೆನೆನನನೂನನಂ
--------------
ಶ್ರೀವಿಜಯ
ಜನಮಱಿಯದನ್ನೆಗಂ ಮು ನ್ನಂ ನಯಮಱಿದಱಿಪಲಾರ್ಪೊಡದು ಮಂತ್ರಿಗುಣಂ ಜನವಾದಂ ನೆಗೞಿ ನಗ ಧ್ವನಿವೋಲನುಕರಣವಾರ್ತೆ ಮಂತ್ರಿಯ ಗುಣಮೇ
--------------
ಶ್ರೀವಿಜಯ
ಜಾತಿವಿಭಾಗಮಂ ಬಗೆದು ಪೇೞಿ ಬಹುತ್ವಮನೇಕ ವಾಕ್ಯ ಸಂ ಜಾತಗುಣಂ ತದೇಕವಚನಂಗಳೊಳಂ ದೊರೆವೆತ್ತು ಕೂಡುಗುಂ ಮಾತಿನೊಳೇನೋ ಸಂಖ್ಯೆಗಳೊಳೇಕ ಬಹುತ್ವ ವಿಪರ್ಯಯಕ್ಕಸಂ ಖ್ಯಾತಗುಣಂ ವಿಕಲ್ಪಮದು ಕನ್ನಡದೊಳ್ ಗುಣಮಂ ತಗುಳ್ಚುಗುಂ
--------------
ಶ್ರೀವಿಜಯ
ತರಳತರಲೋಚನಂ ನಿ ರ್ಭರರಾಗರಸಂ ಮುಖಾರವಿಂದಂ ನಿನ್ನಾ ದೊರೆಕೊಳಿಸಿದೊಸಗೆಯೇಂ ಬಂ ಧುರಮೆಂಬುದಿದವಯವಿ ಕ್ರಮಂ ರೂಪಕದೊಳ್ ಅವಯವಿ ರೂಪಕಂ
--------------
ಶ್ರೀವಿಜಯ
ತಱಿಸಂದಾ ಸಕ್ಕದಮುಮ ನಱಿಯದೆ ಕನ್ನಡಮುಮಂ ಸಮಾಸೋಕ್ತಿಗಳೊಳ್ ಕುಱಿತು ಬೆರಸಿದೊಡೆ ವಿರಸಂ ಮಱುಗುವ ಪಾಲ್ಗಳೆಯ ಪನಿಗಳಂ ಬೆರಸಿದವೋಲ್
--------------
ಶ್ರೀವಿಜಯ