ಒಟ್ಟು 262 ಕಡೆಗಳಲ್ಲಿ , 1 ಕವಿಗಳು , 184 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಮಳಮಿದು ನಿನ್ನ ಮುಖದಂ ತೆ ಮುಖಮುಮೀ ಕಮಳದಂತೆ ನಿಕ್ಕುವಮೆಂದಿಂ ತಮರ್ದಿರೆ ಪೇೞ್ವುದನೞಿಗು ತ್ತಮರನ್ಯೋನ್ಯೋಪಮಾನ ನಾಮಾಂಕಿತಮಂ ಅನ್ಯೋನ್ಯೋಪಮೆ
--------------
ಶ್ರೀವಿಜಯ
ಕರ ಚರಣ ಶರೀರ ಶಿರೋ ದರ ವದನಾದ್ಯವಯವಂಗಳಿವು ತಂತಮ್ಮೊಳ್ ದೊರೆಕೊಂಡೆಡೆಗಳೊಳೊಳವಾ ಗಿರೆಯುಂ ನರರೊರ್ವರೊರ್ವರಂ ಪೋಲದವೋಲ್
--------------
ಶ್ರೀವಿಜಯ
ಕರೆಕರೆದು ಮನೋಧೃತಿಯಂ ನೆರೆವಾಸೆಯೊಳಿರ್ದಳಲ್ಲದುೞಿದೊಡೆ ನಿನ್ನಾ ವಿರಹಾನಳನಾ ತಾಪದೆ ಕರಗುಗುಮಿನ್ನಾಕೆಗಿನಿಸು ಕರುಣಿಸು ಮನದೊಳ್ ಕರುಣಾ
--------------
ಶ್ರೀವಿಜಯ
ಕವಿಗಳುಮನಾದಿಲೋಕೋ ದ್ಭವರಪ್ಪುದಱಿಂದನಂತ ಗಣನಾನುಗತಂ ಸವಿಶೇಷೋಕ್ತಿಗಳುಮನಂ ತ ವಿಧಂಗಳನಂತ ಭೇದವದಱಿಂ ಮಾರ್ಗಂ
--------------
ಶ್ರೀವಿಜಯ
ಕಾಣನೇಗೆಯ್ದುಂ ತನ್ನ ದೋಷಮಂ ಕಾಣದಂತೆಂದುಂ ಕಣ್ಗಲ್ ತಮ್ಮ ಕಾಡಿಗೆಯಂ ಪೂಣಿಗನಾದುದಱಿಂ ಪೆಱರಿಂ ಜಾಣರಿನೋದಿಸಿ ಪೇೞ್ವುದು ಕಬ್ಬಮಂ
--------------
ಶ್ರೀವಿಜಯ
ಕಾರಣಮನಱಿ ಪಿನಿಜ ಸಂ ಸ್ಕಾರಗುಣಾತಿಶಯದೊಳ್ ತಗುಳ್ಚುವುದಕ್ಕುಂ ಸಾರಂ ವಿಭಾವನಾಳಂ ಕಾರಂ ಮತ್ತದಱ ಲಕ್ಷ್ಯಮೀತೆಱನಕ್ಕುಂ
--------------
ಶ್ರೀವಿಜಯ
ಕಾರಣಮಾಗಿರ್ಪುದಳಂ ಕಾರಮ ಹೇತೂಕ್ತಿಯೆಂಬುದದು ತಾಂ ನಾನಾ ಕಾರಂ ಜ್ಞಾಪಕ ಸದಳಂ ಕಾರಸುಮಾರ್ಗ ಪ್ರಯೋಗಮೀ ತೆಱನದಱಾ
--------------
ಶ್ರೀವಿಜಯ
ಕಾವೇರಿಯಿಂದಮಾ ಗೋ ದಾವರಿವರಮಿರ್ಪ ನಾಡದಾ ಕನ್ನಡದೊಳ್ ಭಾವಿಸಿದ ಜನಪದಂ ವಸು ಧಾವಳಯವಿಲೀನವಿಶದ ವಿಷಯ ವಿಶೇಷಂ
--------------
ಶ್ರೀವಿಜಯ
ಕುಮುದಾನಂದನಕರವತಿ ಕಮಲಾಕರರಾಗಹರಮುದಾರಂ ನಿನ್ನಾ ವಿಮಳಯಶೋವಿಧುವೆಂಬುದು ಕಮನೀಯಂ ಶ್ಲೇಷರೂಪಕಾಲಂಕಾರಂ ಶ್ಲೇಷರೂಪಕಂ
--------------
ಶ್ರೀವಿಜಯ
ಕುಱಿಗೊಂಡು ನೆಗೞ್ದನಿಚ್ಛೆಯ ನಱಿಯದೆ ತನ್ನಿಚ್ಛೆಯಿಂದೆ ಕಜ್ಜಂಬೇೞ್ವಂ ತಱಿ ಸಲಿಸಲಾಱನಾರ್ತನ ತೆಱನಱಿಯದೆ ಮರ್ದ್ದುವೇೞ್ವ ಬೆಜ್ಜನ ತೆಱದಿಂ
--------------
ಶ್ರೀವಿಜಯ
ಕುಱಿತಂತೆ ಪೇೞ್ದ ನಾಲ್ಕುಂ ಕುಱುಪುಗಳಿಂದಱಿದು ಪರರ ದೋಷಂಗಳುಮಂ ಪೆಱವುಮನೀ ಮಾೞ್ಕೆಯೊಳಂ ತೊಱಿವುದು ತೊಱಿವಂತಸಾಧುಜನಸಂಗತಿಯಂ
--------------
ಶ್ರೀವಿಜಯ
ಕುಱೆತಂತು ಪೆಱರ ಬಗೆಯಂ ತೆಱೆದಿರೆ ಪೆಅರ್ಗಱೆ ಪಲಾರ್ಪವಂ ಮಾತಱೆವಂ ಕಿಱೆದಱೊಳೆ ಪಿರಿದುಮರ್ಥಮ ನಱೆಪಲ್ ನೆಱೆವಾತನಾತನಿಂದಂ ನಿಪುಣಂ
--------------
ಶ್ರೀವಿಜಯ
ಕುಲಗಿರಿಯಯ್ ಗೌರವದಿಂ ನೆಲನಯ್ ಸೈರಣೆಯಿನಿಂದುವಯ್ ಶಾಂತಿಯಿನಾ ಜಲಿನಿಧಿಯಯ್ ಗುಣ್ಪಿಂದೆಂ ದಲಸದೆ ಪೇೞ್ಗಿಂತು ಹೇತುರೂಪಕ ವಿಧಿಯಂ ಹೇತುರೂಪಕಂ
--------------
ಶ್ರೀವಿಜಯ
ಕುಲಜನೀತನೆ ಪಂಡಿತನೀತನು ಜ್ಜ್ವಲಯಶೋಧಿಕನೀತನೆ ತಿಬ್ಬಮೆಂ ದಲಸಿ ಪೇೞ್ವವಧಾರಣದೋಷಮಂ ನೆಲಸಲೀಯದಿರಿಂ ಕೃತಿನಾರಿಯೊಳ್
--------------
ಶ್ರೀವಿಜಯ
ಕುಲಜನುಮಲ್ಲಂ ನಣ್ಪಿನ ಬಲಮುಂ ತನಗಿಲ್ಲ ಕಣ್ಗಮೇಳಿದನಾರೊಳ್ ನೆಲಸಿರನೆಲ್ಲಿಯುಮ ವನಂ ಚಲವೆಂದುಂ ಪತ್ತುವಿಡದದೊಂದುಂಟು ಗುಣಂ
--------------
ಶ್ರೀವಿಜಯ