ಒಟ್ಟು 45 ಕಡೆಗಳಲ್ಲಿ , 1 ಕವಿಗಳು , 38 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ವಿಶದತರಮಾಯ್ತು ಗುಣಮಣಿ ವಿಶೇಷ ಭೂಷಣದಿನೀ ತ್ವದೀಯಾಕಾರಂ ಶಶಧರಕಿರಣಾಭಭವ ದ್ಯಶೋವಿತಾನದಿನಶೇಷಮಾಶಾವಳಿಯಂ ಗುಣಾನುಗತ ಆದಿದೀಪಕಂ
--------------
ಶ್ರೀವಿಜಯ
ಶರದುದಿತ ಶಿಶಿರಕರನುಂ ಸರಸಿರುಹಮುಮೀ ತ್ವದೀಯ ವದನಮುಮಿನಿತುಂ ದೊರೆಕೊಳಿಸುವೊಡೆ ಪರಸ್ಪರ ವಿರೋಧಿಗಳ್ ನಿರುತಮೆನೆ ವಿರೋಧೋಪಮಿತಂ ವಿರೋಧೋಪಮೆ
--------------
ಶ್ರೀವಿಜಯ
ಶ್ರುತದುಷ್ಟಮರ್ಥದುಷ್ಟಂ ಶ್ರುತಿಕಷ್ಟಂ ಕಲ್ಪನೋಕ್ತಿಕಷ್ಟಮುಮೆಂದೀ ಕೃತಕೃತ್ಯಮಲ್ಲವಲ್ಲಭ ಮತದಿಂ ನಾಲ್ಕಕ್ಕುಮಿಲ್ಲಿ ಕೃತಿದೋಷಂಗಳ್
--------------
ಶ್ರೀವಿಜಯ
ಸಂಬೋಧನೆ ದೀರ್ಘೋಕ್ತಿಯೊ ಳಿಂಬಾಗಿರೆ ಬರ್ಕುಮದನೆ ಪಲವೆಡೆಗಳೊಳೆಂ ದುಂ ಬಲ್ಲವರಿಡದಿರ್ಕಾ ದಂ ಬಾಯೞಿದೊಳ್ವವೋಲ್ ಕರಂ ವಿರಸತರಂ
--------------
ಶ್ರೀವಿಜಯ
ಸಕಳಾಳಾಪ ಕಳಾಕಳಾಪಕಥಿತವ್ಯಾವೃತ್ತಿಯೊಳ್ ಕೊಡಿ ಚಿ ತ್ರಕರಂಬೋಲ್ ಪರಭಾಗಭಾವವಿಲಸದ್ವರ್ಣಕ್ರಮಾವೃತ್ತಿಯಂ ಪ್ರಕಟಂ ಮಾಡಿರೆ ಪೇೞ್ದ ಚಿತ್ರಕೃತಿಯಂ ವ್ಯಾವರ್ಣಿಸುತ್ತುಂ ಕವಿ ಪ್ರಕರಂ ಶ್ರೀವಿಜಯಪ್ರಭೂತಮನಿದಂ ಕೈಕೊಳ್ವುದೀ ಮಾೞ್ಕಿಯಿಂ
--------------
ಶ್ರೀವಿಜಯ
ಸಮಸಂಸ್ಕೃತಂಗಳೊಳ್ ಸ ಯ್ತಮರ್ದಿರೆ ಕನ್ನಡಮನಱೆದು ಪೇೞ್ಗೆಂಬುದಿದಾ ಗಮಕೋವಿದ ನಿಗದಿತ ಮಾ ರ್ಗಮಿದಂ ಬೆರಸಲ್ಕಮಾಗದೀ ಸಕ್ಕದದೊಳ್
--------------
ಶ್ರೀವಿಜಯ
ಸರಸಿಜವಿರೋಧಿ ಕಾಂತ್ಯಾ ಕರಮ ಮೃತಮಯಂ ತ್ವದೀಯ ಮುಖಶಶಿಯುಂಟಾ ಗಿರೆ ಶಶಿಯದೇವುದೆಂಬುದು ನಿರುತಂ ಶ್ಲೇಷಾನುವಿದ್ಧಮಪ್ಪಾಕ್ಷೇಪಂ ಶ್ಲೇಷಾಕ್ಷೇಪ
--------------
ಶ್ರೀವಿಜಯ
ಸರಸಿರುಹಮಿಂದುದೀಧಿತಿ ಪರಾಜಿತಶ್ರೀವಿಲಾಸಮೀ ನಿನ್ನ ಮುಖಂ ಹರಿಣಧರವಿಜಯಶೋಭಾ ಕರಮೆಂಬುದಿದೂರ್ಜಿತೋಪಮಾನ ವಿಭಾಗಂ ಊರ್ಜಿತೋಪಮೆ
--------------
ಶ್ರೀವಿಜಯ