ಒಟ್ಟು 41 ಕಡೆಗಳಲ್ಲಿ , 1 ಕವಿಗಳು , 35 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶರದಂಬರಮುಂ ಮತ್ತೀ ಸರವರಮುಂ ವಿಳಸದತನುಧವಳಚ್ಛವಿಗಳ್ ಹರಿಣಾಂಕಾಲಂಕೃತಮಂ ಬರಮೀ ಕೊಳಮುಚಿತರಾಜಹಂಸೋತ್ತಂಸಂ
--------------
ಶ್ರೀವಿಜಯ
ಶ್ರೀವನಿತಾಪ್ರಸವದಿನಾ ಲಾವಣ್ಯದಿನತಿಗಭೀರಭಾವದೆ ನೀನಿಂ ತಾ ವಾರಿಧಿಯಂ ಪೋಲ್ತಯ್ ಕೇವಲಭೇದಂ ದ್ವಿತೀಯ ಲಲಿತಾಕಾರಂ ಏಕವ್ಯತಿರೇಕಂ
--------------
ಶ್ರೀವಿಜಯ
ಸತತಂ ದಕ್ಷಿಣ ಮಾರ್ಗೋ ದಿತೋಕ್ತಿಭೇದಕ ಗುಣಂ ಸ್ವಭಾವಾಖ್ಯಾನಂ ವಿ [ತ] ತೊತ್ತರ ಮಾರ್ಗಗತಂ ಪ್ರತೀತ ವಕ್ರೋಕ್ತಿಕೃತಮನಲ್ಪವಿಕಲ್ಪಂ
--------------
ಶ್ರೀವಿಜಯ
ಸತತೋದಯನಪ್ರತಿಹತ ಗತಿತೀವ್ರಂ ತದ್ದಿನಾಧಿನಾಥನುಮಸ್ತಂ ಗತನಾದನಂತೆ ನಿಯತ ಪ್ರತೀತಿಯಂ ಕಳೆಯಲಕ್ಕುಮೇ ವ್ಯಾಪಕಮಂ ಸಕಲವ್ಯಾಪಿ
--------------
ಶ್ರೀವಿಜಯ
ಸಮುದಾಯಾರ್ಥಮನಾರಯೆ ಸಮನಿಸುವರ್ಥಪ್ರತೀತಿ ತೋಱದೊಡೆಲ್ಲಂ ಕ್ರಮಮಕ್ಕುಮರ್ಥಶೂನ್ಯಂ ಸಮಸ್ತ ಕವಿವೃಷಭ ದೂರದೂಷಿತಮಾರ್ಗಂ
--------------
ಶ್ರೀವಿಜಯ