ಒಟ್ಟು 87 ಕಡೆಗಳಲ್ಲಿ , 1 ಕವಿಗಳು , 68 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಿರತಿಶಯಮಕ್ಕುಮದು ಬಂ ಧುರ ಕವಿಜನತಾಪ್ರಯೋಗ ಸಂಬಂಧನದಿಂ ಗುರುಜಘನಸ್ತನಭರಮಂ ಥರಲೀಲಾಲಸವಿಳಾಸಿನೀ ಚಳಿತಂಬೋಲ್
--------------
ಶ್ರೀವಿಜಯ
ನುಡಿಯಂ ಛಂದದೊಳೊಂದಿರೆ ತೊಡರ್ಚಲಱೆ ವಾತನಾತನಿಂದಂ ಜಾಣಂ ತಡೆಯದೆ ಮಹಾಧ್ವಕೃತಿಗಳ ನೊಡರಿಸಲಾರ್ಪಾತನೆಲ್ಲರಿಂದಂ ಬಲ್ಲಂ
--------------
ಶ್ರೀವಿಜಯ
ನೃಪನ ನರಪಾಲತನಯನ ನೃಪವಧುವರ್ ನೆರೆದು ಸುಖದಿನಿರೆ ಕೈಕೊಂಡ ತ್ತಪರಿಮಿತರಾಗಮೆರ್ದೆಯಂ ನೃಪತಿ ಸನಾಭಿಗಳ ಬಂಧುಜನದಾ ಕೆಳೆಯಾ
--------------
ಶ್ರೀವಿಜಯ
ನೃಪನನಭಿಮಾನಧನನನ ನುಪಮನನತಿಶಯ ವಿಶಾಲ ಕೀರ್ತಿಧ್ವಜನಾ ನುಪಚಿತಗುಣನಾನುಚಿತನ ನಪೇತದೋಷನನುದಾರಚರಿತೋದಯನಂ
--------------
ಶ್ರೀವಿಜಯ
ನೃಪನಾನಭಿನುತಮನನಾ ನುಪಮೇತರನಾನಪಾರಕೀರ್ತಿ ಧ್ವಜನಂ ವಿಪುಲಗುಣಜ್ಞನನುಚಿತನ ನಪಗತದೋಷನನುದಾರಚರಿತೋದಯನಂ
--------------
ಶ್ರೀವಿಜಯ
ನೆನೆನೆನೆದು ಪೆಱರ ಮಾತುಗ ಳನೆ ನೆಗೞ್ದಿರೆ ಕೃತಿಯೊಳಿಡುವವಂ ನಗದ ಗುಹಾ ಧ್ವನಿಯವೊಲನರ್ಥವಚನಂ ತನಗಾಗಿಸಲಱೆ ಯನುಚಿತ ವಾಕ್ಚತುರತೆಯಂ
--------------
ಶ್ರೀವಿಜಯ
ನೆರೆದೂರ್ಧ್ವರೇತನೊಳ್ ಪುರು ಹಿರಣ್ಯರೇತೋತಿತೀವ್ರನೊಳ್ ಮುನಿವರನೊಳ್ ಪರಮಭಗಸಹಿತೆ ಮುದದಿರೆ ಪರಿಶ್ರಮಕ್ಕೆನ್ನ ನಿರ್ವಿಶೇಷನೊಳಾಗಳ್
--------------
ಶ್ರೀವಿಜಯ
ಪದಪಾದ ಸಮಸ್ತಾರ್ಧ [ಗತ] ಭೇದ ಚತುಷ್ಟಯಂ ವಿದಿತಾಳಂಕ್ರಿಯಾಧಾರಂ ಮೊದಲ್ ಪೇ[ೞ್ವೊಡೆ] ದುಷ್ಕರಂ ಮುನ್ನಂ ತನ್ನಂ ತಾನೆ ತಾನೇಕೆನ್ನಂ ಕೆನ್ನಂ ನಿರಂತರಂ ಭಿನ್ನಂ ಬಂದಿಪ್ಪನಂತಿನ್ನುಂ ತನ್ನಿಂ ತನಗಮೇವಳೊ
--------------
ಶ್ರೀವಿಜಯ
ಪರಪಕ್ಷಮುಳ್ಳಿನಂ ತನ ಗಿರವುಬ್ಬಸಮದಱಿನೞಿವುದದನೇಗೆಯ್ದುಂ ಪರೆದ ಪುಡಿಯೆಲ್ಲಮಂ ನೀರ್ ನೆರೆದು ಕೆಸರ್ಮಾಡದನ್ನೆಗಂ ನೆಲಸುಗುಮೇ
--------------
ಶ್ರೀವಿಜಯ
ಪರಮಾನುಭಾವ ಭಾಸುರ ಸುರರಾಜೋಪಮಿತ ವಿವಿಧ ವಿಭವೋದಯನಂ ನರಪತಿಯಂ ಕಪಿಪೃತನಾ ಪರಿವೃತನಂ ಜಲಧಿತಟದೊಳಣುವಂ ಕಂಡಂ
--------------
ಶ್ರೀವಿಜಯ
ಪರಸುವೆನೆನ್ನದಾಂ ಪರಪೆನೆಂಬುದಿದಾಗದು ಚಿತ್ತನಾಥನೊಳ್ ಬೆರಸುವೆನೆನ್ನದಾಂ ಬೆರಪೆನೆಂಬುದಿದಾಗದು ಮಾರ್ಗಯುಗ್ಮದೊಳ್ ನಿರತಿಶಯಾನುಭಾವಭವನಪ್ಪ ಮಹಾನೃಪತುಂಗ ದೇವನಾ ದರದೊಳೆ ಪೇೞ್ದ ಮಾರ್ಗಗತಿಯಿಂ ತಱೆಸಲ್ಗಿದನಿಂತೆ ಕಬ್ಬಿಗರ್
--------------
ಶ್ರೀವಿಜಯ
ಪರಿವಾರ ವಾರವನಿತಾ ಪರಿವೃತನರಮನೆಯೊಳರಸನಂಬರತಳದೊಳ್ ವರ ತಾರಾಪರಿಗತ ಶಶ ಧರನಂತೊಪ್ಪಿರೆ ವಿನೋದದಿಂ ಜನಿತಮುದಂ
--------------
ಶ್ರೀವಿಜಯ
ಪರಿವಾರ ವಾರವನಿತಾ ಪರಿವೃತನರಮನೆಯೊಳರಸನಂಬರತಳದೊಳ್ ವರ ತಾರಾಪರಿಗತ ಶಶ ಧರನಂತೊಪ್ಪಿರೆ ವಿನೋದದಿಂದುರುಮುದದಿಂ
--------------
ಶ್ರೀವಿಜಯ
ಪರೆದಿರೆ ರಾಗಂ ತನ್ನೊಳ್ ನಿರಂತರಂ ಗಗನವಿವರ ಮೊಪ್ಪಿತ್ತಾದಂ ವರ ಪಾರಿಜಾತ ಕುಸುಮೋ ತ್ಕರ ಸಾಂದ್ರಪರಾಗ ವಿಸರ ಪಿಂಜರಿತಂಬೋಲ್
--------------
ಶ್ರೀವಿಜಯ
ಪಸರಿಸಿದಾ ಬಗೆ ಮನಮಂ ಪೊಸತಾಗೆ ನೆಗೞ್ಚಲರಿಯನಾ ರಚನೆಯೊಳೇಂ ಬಸನಂ ತನಗಿನಿತಱ ಬೇ ವಸಮೇಂ ಕವರ್ದವರುಮೊಳರೆ ಕವಿಯಲ್ಲದರಂ
--------------
ಶ್ರೀವಿಜಯ