ಒಟ್ಟು 39 ಕಡೆಗಳಲ್ಲಿ , 1 ಕವಿಗಳು , 37 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮಲಯಾನಿಲನೊಯ್ಯನೆ ಪ ಣ್ತೆಲೆಯಂ ನೆಲೆಯಿಂ ಕಱಲ್ಚುಗುಂ ವಿಟಪಿಗಳೊಳ್ ವಿಲಸಿತ ಕಳಿಕಾಕುಳಕೋ ಮಲಾಂಕುರಮನಂತೆ ಪಡೆಗುಮವಱಿಡೆಯೆಡೆಯೊಳ್ ಜಾತ್ಯನುಗತ ಆದಿದೀಪಕಂ
--------------
ಶ್ರೀವಿಜಯ
ಮಾತುಗಳಾವುವಾನುಮುಪವರ್ಣಿತ ಮಾರ್ಗಯುತಪ್ರಯೋಗ ಸಂ ಜಾತವಿಭಾಗದಿಂ ನೆಗೞ್ದ ಕನ್ನಡದೊಳ್ ಗುಣಮಂ ತಗುಳ್ಚುಗುಂ ನೀತಿನಿರಂತರಾನುಗತ ವೃತ್ತಿ ವಿಕಲ್ಪಿತಮಂ ತದೀಯ ನಿ ರ್ಣೀತಿಯನೀತೆಱತ್ತು ತಱೆಸಲ್ಗೆ ಬುಧೋತ್ತಮರುಕ್ತಿಪೂರ್ವಕಂ
--------------
ಶ್ರೀವಿಜಯ
ಮೃಗಪಶುಶಕುನಿ ಗಣಂಗಳೊ ಳಗಣಿತ ನಿಜಜಾತಿಜನಿತ ಭಾಷೆಗಳೆಂದುಂ ನೆಗೞ್ದಂತಿರೆ ನರರೊಳಮ ಪ್ರಗಲ್ಭವಚನಪ್ರವೃತ್ತಿ ನೆಗೞ್ಗುಂ ಸಹಜಂ
--------------
ಶ್ರೀವಿಜಯ
ಯತಿಯೆಂಬುದುಸಿರ್ವ ತಾಣಂ ಕೃತಾಸ್ಪದಂ ವೃತ್ತಾಜಾತಿ ಪದ ಪದ್ಧತಿಯೊಳ್ ಸತತಂ ಛಂದೋವಿದಿತ ಪ್ರತೀತಶಾಸ್ತ್ರೋಕ್ತಮಾರ್ಗದಿಂದಱಿ ವುದದಂ
--------------
ಶ್ರೀವಿಜಯ
ವರಜಾತಿ ರೂಪಕಾರ್ಥಾಂ ತರವಿನ್ಯಾಸಾತಿರೇಕ ಯಾಥಾಸಂಖ್ಯಾ ಸ್ಥಿರದೀಪಕೋಪಮಾ ಬಂ ಧುರಾತಿಶಯ ಸದೃಶಯೋಗಿತಾಕ್ಷೇಪಂಗಳ್
--------------
ಶ್ರೀವಿಜಯ
ವಿಳಸಿತ ಸದಳಂಕಾರಾದಿ ಸಂಸಾಧಿತಾರ್ಥಂ ಕುಳವಿದಿತಪದೋದ್ಯತ್ಕೋಮಳಾಳಾಪಶೀಲಂ ಸುಳಲಿತಗುಣ ನಾನಾ ವೃತ್ತ ಜಾತಿಪ್ರವೃತ್ತಾ ಸ್ಖಳಿತರಸವಿಶೇಷೋಪಾಶ್ರಯ ಶ್ರೀನಿವೇಶಂ
--------------
ಶ್ರೀವಿಜಯ
ಶ್ರೀ ತಳ್ತುರದೊಳ್ ಕೌಸ್ತುಭ ಜಾತದ್ಯುತಿ ಬಳಸಿ ಕಾಂಡಪಟದಂತಿರೆ ಸಂ ಪ್ರೀತಿಯಿನಾವನನಗಲಳ್ ನೀತಿನಿರಂತರನುದಾರನಾ ನೃಪತುಂಗಂ
--------------
ಶ್ರೀವಿಜಯ